Connect with us

Bengaluru City

ನಾಳೆಯಿಂದ ಪಿಯುಸಿ ಕಾಲೇಜುಗಳು ಪ್ರಾರಂಭ- ಆನ್‍ಲೈನ್ ಮೂಲಕ ಪಠ್ಯ ಬೋಧನೆ

Published

on

Share this

ಬೆಂಗಳೂರು : 2021-22ನೇ ಸಾಲಿನ ಪಿಯುಸಿ ಶೈಕ್ಷಣಿಕ ವರ್ಷ ಪ್ರಾರಂಭಕ್ಕೆ ಪಿಯುಸಿ ಬೋರ್ಡ್ ಆದೇಶ ಹೊರಡಿಸಿದೆ. ನಾಳೆಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಪಠ್ಯ ಬೋಧನೆ ಪ್ರಾರಂಭವಾಗಲಿದೆ.

ಕೊರೊನಾ ಹಿನ್ನಲೆ ಕಾಲೇಜುಗಳು ಪ್ರಾರಂಭ ಮಾಡುವ ನಿರ್ಧಾರ ಆಗದೇ ಇರೋ ಹಿನ್ನೆಲೆ ಆನ್‍ಲೈನ್ ತರಗತಿ ನಡೆಸಲು ಪಿಯುಸಿ ಬೋರ್ಡ್ ನಿರ್ಧಾರ ಮಾಡಿದೆ. ನಾಳೆಯಿಂದ ಉಪನ್ಯಾಸಕರು ಆನ್ ಲೈನ್ ಮೂಲಕ ಪಠ್ಯ ಬೋಧನೆ ಮಾಡುವಂತೆ ಸೂಚನೆ ನೀಡಿದೆ.

ಕಾಲೇಜಿನ ಉಪನ್ಯಾಸಕರೇ ವಿದ್ಯಾರ್ಥಿಗಳಿಗೆ MS Team, Google meet, Zoom ಅಥವಾ ರಿio ಮೀಟ್ ಮೂಲಕ ಪಠ್ಯ ಬೋಧನೆ ಮಾಡಬೇಕು.ಎಲ್ಲಾ ಉಪನ್ಯಾಸಕರು ಕಡ್ಡಾಯವಾಗಿ ಪಠ್ಯ ಬೋಧನೆ ಮಾಡಬೇಕು. ವಿದ್ಯಾರ್ಥಿಗಳ ಹಾಜರಾತಿ ಪಡೆದು ಪ್ರಾಂಶುಪಾಲರಿಗೆ ವರದಿ ನೀಡಬೇಕು. ಕಾಲೇಜಿನಲ್ಲಿ ಉಪನ್ಯಾಸಕರು ಇಲ್ಲದೆ ಹೋದ್ರೆ ಪಕ್ಕದ ಕಾಲೇಜಿನ ಉಪನ್ಯಾಸಕರು ಸಮಯ ಹೊಂದಿಸಿಕೊಂಡು ತಲಾ 20 ಮಕ್ಕಳ ತಂಡದಂತೆ ಪಠ್ಯ ಬೋಧನೆ ಮಾಡಬೇಕು. ಇದಕ್ಕೆ ಜಿಲ್ಲಾ ಉಪನಿರ್ದೇಶಕರು ಅಗತ್ಯ ಕ್ರಮವಹಿಸಬೇಕು ಅಂತ ತಿಳಿಸಿದೆ.

ದಿನಕ್ಕೆ 4 ಅವಧಿಯಲ್ಲಿ ಪಠ್ಯ ಬೋಧನೆಗೆ ಪಿಯುಸಿ ಬೋರ್ಡ್ ವೇಳಾಪಟ್ಟಿ ನೀಡಿದೆ. ವೇಳಾಪಟ್ಟಿ ಹೀಗಿದೆ.

 

ಪಠ್ಯ ಬೋಧನೆ ಅವಧಿ

  • ಮೊದಲ ಅವಧಿ – ಬೆಳಗ್ಗೆ 10-11.
  • ಎರಡನೇ ಅವಧಿ -11-12
  • ವಿರಾಮ 12 ರಿಂದ 12.30
  • ಮೂರನೇ ಅವಧಿ – 12.30 ರಿಂದ 1.30.
  • ನಾಲ್ಕನೇ ಅವಧಿ – 1.30 ರಿಂದ 2.30
Click to comment

Leave a Reply

Your email address will not be published. Required fields are marked *

Advertisement