Tuesday, 25th February 2020

ಪಬ್ಲಿಕ್ ಟಿವಿಯ ವಿದ್ಯಾಪೀಠಕ್ಕೆ ಯಶಸ್ವಿ ತೆರೆ

ಬೆಂಗಳೂರು: ಪಬ್ಲಿಕ್ ಟಿವಿ ಆಯೋಜಿಸಿದ್ದ ವಿದ್ಯಾಪೀಠ ಶೈಕ್ಷಣಿಕ ಮೇಳದ 3ನೇ ಆವೃತ್ತಿ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಮೂರು ದಿನಗಳ ಕಾಲ ಸಾವಿರಾರು ವಿದ್ಯಾರ್ಥಿಗಳು, ಪೋಷಕರು ವಿದ್ಯಾಪೀಠಕ್ಕೆ ಆಗಮಿಸಿ ಶೈಕ್ಷಣಿಕ ಮಾಹಿತಿ ಪಡೆದಿದ್ದಾರೆ.

ವಿದ್ಯಾಪೀಠ ಶೈಕ್ಷಣಿಕ ಮೇಳದ 3 ದಿನವಾದ ಇಂದು ಹಲವು ಸ್ಪರ್ಧೆಗಳು ನಡೆದವು. ಚರ್ಚಾ ಸ್ಪರ್ಧೆಯಲ್ಲಿ ಸಂಜನಾ, ದೀಶಾ, ಸಾತ್ವಿಕ್, ಚೇತನ್, ಶ್ರೇಯಾ ವಿಜೇತರಾದರು. ಚಿತ್ರಕಲೆಯಲ್ಲಿ ರಕ್ಷಿತಾ, ಚಂದನ್, ನಯನಾ, ಯಶವಂತ್, ಭಾವನಾ ವಿಜೇತರಾದರು. ರಸಪ್ರಶ್ನೆಯಲ್ಲಿ ಸಿದ್ಧಾಂತ್, ಆದಿತ್ಯ, ಸ್ನೇಹಾ, ಮಿನು, ಸಾತ್ವಿಕ್ ಜಯಗಳಿಸಿದರು.

ಪ್ರಾಜೆಕ್ಟ್ ವರ್ಕ್ ಸ್ಪರ್ಧೆಯಲ್ಲಿ ರೇವಾ ವಿಶ್ವವಿದ್ಯಾಲಯ, ಶ್ರೀ ವೆಂಕಟೇಶ್ವರ ಇಂಜಿನಿಯರಿಂಗ್ ಕಾಲೇಜ್, ಎಂ.ಎಸ್. ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದರು. ಸಂಗೀತ ಸ್ಪರ್ಧೆಯಲ್ಲಿ ದಿನೇಶ್, ಸಾಗರ್, ಶ್ರೇಯಾ, ಸ್ಮೃತಿ, ಸಂಜಯ್ ವಿಜೇತರಾದರು. ವಿಜೇತರಿಗೆ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್, ಗಾರ್ಡನ್ ಸಿಟಿ ಕಾಲೇಜ್ ಕುಲಪತಿ ಜೋಸೆಫ್ ಹಾಗೂ ರೇವಾ ವಿವಿ ಉಪಕುಲಪತಿ ಡಾ.ಕುಲಕರ್ಣಿ ಅವರು ಪ್ರಶಸ್ತಿ ಪ್ರಧಾನ ಮಾಡಿದರು.

Leave a Reply

Your email address will not be published. Required fields are marked *