ಎರಡನೇ ದಿನಕ್ಕೆ ಕಾಲಿಟ್ಟ ವಿದ್ಯಾಪೀಠ – ಉಚಿತ ಕಾರ್ಯಕ್ರಮಕ್ಕೆ ಬನ್ನಿ

Advertisements

ಬೆಂಗಳೂರು: ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುತ್ತಿರುವ ವಿದ್ಯಾಪೀಠ 5ನೇ ಆವೃತ್ತಿ ಎಜುಕೇಶನ್ ಎಕ್ಸ್ ಪೋಗೆ ಇಂದು ಎರಡನೇ ದಿನ. ಮೊದಲ ದಿನ ಭರ್ಜರಿ ಯಶಸ್ಸು ಕಂಡಿದ್ದ ವಿದ್ಯಾಪೀಠ ಎಕ್ಸ್ ಪೋಗೆ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಮಾಹಿತಿ ಪಡೆದುಕೊಂಡಿದ್ದಾರೆ.

Advertisements

ಇಂದು ಕೂಡ ಅನೇಕ ವಿಶೇಷ ಕಾರ್ಯಕ್ರಮಗಳು ವಿದ್ಯಾಪೀಠದಲ್ಲಿ ಇರಲಿದೆ. ಬೆಳಗ್ಗೆ 10 ಗಂಟೆಗೆ ಎಕ್ಸ್ ಪೋ ಪ್ರಾರಂಭ ಆಗಲಿದ್ದು, ಸಂಜೆ 7 ಗಂಟೆವರೆಗೂ ಇರಲಿದೆ. ಶೈಕ್ಷಣಿಕ ಮಾಹಿತಿ ಜೊತೆಗೆ ಫನ್ ಗೇಮ್ಸ್, ಬಂಪರ್ ಬಹುಮಾನಗಳು ಎರಡನೇ ದಿನದ ಆಕರ್ಷಣೆ ಆಗಲಿದೆ. ಇದಲ್ಲದೆ ಹಲವು ತಜ್ಞರು, ಚಿಂತಕರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಇರಲಿದೆ.

Advertisements

ಸ್ಥಳ: ಗೇಟ್‌ ನಂಬರ್‌ 4, ಗಾಯತ್ರಿ ವಿಹಾರ್, ಅರಮನೆ ಮೈದಾನ, ಬೆಂಗಳೂರು
ಸಮಯ: ಬೆಳಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ

ಸಂಪರ್ಕಿಸಿ: ಪ್ರಭು 99000 60811, ಶಿವಕುಮಾರ್ 99000 60813

ಇಂದು ಏನು?
ಬೆಳಗ್ಗೆ 10:30ರಿಂದ 11:30ರವರೆಗೆ “ಭಾರತ ಶಿಕ್ಷಣದ ತಾಣ – ಕರ್ನಾಟಕ ಅವಕಾಶಗಳ ಬೀಡು” ವಿಷಯದ ಬಗ್ಗೆ ಉನ್ನತ ಶಿಕ್ಷಣ ಸಚಿವ ಅಶ್ವಥ್‌ ನಾರಾಯಣ ಭಾಷಣ ಮಾಡಲಿದ್ದಾರೆ.

Advertisements

ಬೆಳಗ್ಗೆ 11:30ರಿಂದ 12:30ರವರೆಗೆ “ಸಿಇಟಿ- ಕಾಮೆಡ್‌ಕೆ ಪರೀಕ್ಷೆಯಲ್ಲಿ ಆಯ್ಕೆ ಸರಿ ಇರಲಿ” ವಿಷಯದ ಬಗ್ಗೆ ರಮ್ಯಾ ಮತ್ತು ಡಾ. ಎಸ್‌ ಕುಮಾರ್‌ ಮಾತನಾಡಲಿದ್ದಾರೆ.

 

 

ಮಧ್ಯಾಹ್ನ 2:30ರಿಂದ ಸಂಜೆ 4 ಗಂಟೆಯವರೆಗೆ “ಸ್ಟಾರ್ಟ್‌ಅಪ್‌ಗಳು ಮತ್ತು ಉದ್ಯಮಶೀಲತೆ” ವಿಷಯದ ಬಗ್ಗೆ ಯುವಾ ಬ್ರಿಗೇಡ್ ಸಂಸ್ಥಾಪಕ, ಲೇಖಕ ಚಕ್ರವರ್ತಿ ಸೂಲಿಬೆಲೆ ಅವರು ಪ್ಯಾನಲ್‌ ಡಿಸ್ಕಷನ್‌ನಲ್ಲಿ ಭಾಗಿಯಾಗಲಿದ್ದಾರೆ.

ಸಂಜೆ 4 ರಿಂದ 5 ಗಂಟೆಯವರೆಗೆ “ಪ್ಯಾಶನ್ ಆಧಾರಿತ ವೃತ್ತಿ Vs ಉದ್ದೇಶ ಆಧಾರಿತ ವೃತ್ತಿ” ವಿಷಯದ ಬಗ್ಗೆ ಎರಡು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ರಿಕಿ ಕೇಜ್‌ ಮಾತನಾಡಲಿದ್ದಾರೆ.

Live Tv

Advertisements
Exit mobile version