Bengaluru City
ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಡಾ. ಬಾಲಾಜಿ ಚಿಕಿತ್ಸೆಗೆ ಸರ್ಕಾರದಿಂದ 25 ಲಕ್ಷ ಬಿಡುಗಡೆ

ಬೆಂಗಳೂರು: ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿ ಕೊನೆಗೆ ತಾವೇ ಕೊರೊನಾಗೆ ಒಳಗಾಗಿ ಚಿಕಿತ್ಸೆಗೆ ಒದ್ದಾಡ್ತಿದ್ದ ಡಾ. ಬಾಲಾಜಿ ಪ್ರಸಾದ್ಗೆ ಪಬ್ಲಿಕ್ ಟಿವಿ ವರದಿ ಬಳಿಕ ರಾಜ್ಯ ಸರ್ಕಾರ ಸ್ಪಂದಿಸಿದೆ.
ಶ್ವಾಸಕೋಸ ಸಮಸ್ಯೆಯಿಂದ ಬಳಲ್ತಿದ್ದ ಬಾಲಾಜಿ ಪ್ರಸಾದ್ ಚಿಕಿತ್ಸೆಗೆ ರಾಜ್ಯ ಸರ್ಕಾರ 25 ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದು, ಅವರನ್ನು ಏರ್ ಅಂಬುಲೆನ್ಸ್ ಮೂಲಕ ಚೆನ್ನೈಗೆ ಶಿಫ್ಟ್ ಮಾಡಲಾಗಿದೆ. ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದಕ್ಕೆ ಆರೋಗ್ಯ ಸಚಿವ ಡಾ. ಸುಧಾಕರ್ ಸೂಚನೆ ನೀಡಿದ್ದಾರೆ.
ಕೊರೊನಾ ಅಟ್ಟಹಾಸದ ಹೊತ್ತಲ್ಲಿ 100ಕ್ಕೂ ಅಧಿಕ ಮಂದಿ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದ ಮೂತ್ರಪಿಂಡ ತಜ್ಞರೂ ಆಗಿರುವ ಬಾಲಾಜಿ ಪ್ರಸಾದ್ ಚಿಕಿತ್ಸೆಗೆ 1 ಕೋಟಿ ರೂಪಾಯಿ 20 ಲಕ್ಷ ರೂಪಾಯಿಯ ಅಗತ್ಯ ಇತ್ತು. ಈ ಬಗ್ಗೆ ಪಬ್ಲಿಕ್ ಟಿವಿ ವಿಸ್ತೃತ ವರದಿ ಮಾಡಿತ್ತು. ಇದನ್ನೂ ಓದಿ: ಕೊರೊನಾ ಚಿಕಿತ್ಸೆ ನೀಡಿದ್ದ ಡಾಕ್ಟರ್ಗೆ ಸೋಂಕು – ಶ್ವಾಸಕೋಶ ಸಮಸ್ಯೆಯಿಂದ ನರಳಾಟ
