Tuesday, 16th July 2019

ಗ್ರಾಮಸ್ಥರಲ್ಲಿ ಒಗ್ಗಟ್ಟು ಮೂಡಿಸಿದ ಮೇಷ್ಟ್ರು-ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡಿದ್ರು ಸಿಂಗೇನಹಳ್ಳಿ ಜನ

ಚಿತ್ರದುರ್ಗ: ಮೇಷ್ಟ್ರು ಹಾಗೂ ಗ್ರಾಮಸ್ಥರು ಜೊತೆಗೂಡಿ ತಮ್ಮೂರಿನ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಸಿಂಗೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ದಾರ್ಶನಿಕರು, ವನ್ಯಜೀವಿಗಳ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ. ಅಲ್ಲದೆ, ಅಡಿಕೆ, ತೆಂಗು, ತೇಗ, ಹಲಸು, ಮಾವು, ನಿಂಬೆ, ಅಕೇಶಿಯಾ, ಬಿದಿರು, ಶ್ರೀಗಂಧ, ಅಶೋಕ, ಕಾಡು ಬಾದಾಮಿ ಮತ್ತಿತರ ಮರಗಳನ್ನೂ ಬೆಳೆಸಲಾಗಿದೆ.


ಮೊದಲಿಗೆ ಮುಖ್ಯೋಪಾಧ್ಯಾಯರಾದ ರೇವಣ್ಣ 10 ಸಾವಿರ ಖರ್ಚು ಮಾಡಿ ಪ್ರಾಣಿಯೊಂದರ ಪ್ರತಿಕೃತಿ ಸಿದ್ಧಪಡಿಸಿದ್ದರು. ಬಳಿಕ ಇತರೆ ಶಿಕ್ಷಕರು ಹಾಗೂ ಗ್ರಾಮಸ್ಥರ ನೆರವಿನಿಂದ 2 ಲಕ್ಷ ಹಣ ಸಂಗ್ರಹಿಸಿ ಕೊಳವೆ ಬಾವಿ ಕೊರೆಸಿ, ಸಕಲ ಮೂಲಭೂತ ಸೌಕರ್ಯ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.

ದಾನಿಗಳ ನೆರವಿನಿಂದ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಶಾಲೆಯ ಇಂಥ ಪರಿಸರದಿಂದ ಮಕ್ಕಳು ಉತ್ಸಾಹದಿಂದ ಶಾಲೆಗೆ ಬರುತ್ತಿದ್ದಾರೆ. ಒಟ್ಟಾರೆ ಕೋಟೆನಾಡಿನ ಸಿಂಗೇನಹಳ್ಳಿಯ ಈ ಸರ್ಕಾರಿ ಶಾಲೆ ಇದೀಗ ಖಾಸಗಿ ಶಾಲೆಯನ್ನೇ ನಾಚಿಸುವಂತಿದೆ.

Leave a Reply

Your email address will not be published. Required fields are marked *