Wednesday, 26th June 2019

Recent News

ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪಣ-ಸಂಬಳದ ಅರ್ಧ ಹಣ ಶಾಲೆಗೆ ಮೀಸಲಿಟ್ಟ ಶಿಕ್ಷಕ

ಗದಗ: ಅನೇಕ ಶಿಕ್ಷಕರು ಬಿಲ್ ಮತ್ತು ಬೆಲ್‍ಗೆ ಸೀಮಿತರಾಗಿದ್ದಾರೆ ಅನ್ನೋ ಆರೋಪ ಇದೆ. ಆದರೆ ಗದಗನ ನರೇಗಲ್ ಶಾಲೆಯ ಶಿಕ್ಷಕ ಡಿ.ಎಚ್.ಪರಂಗಿ ಅವರು ತಮ್ಮ ಆದಾಯದ ಅರ್ಧದಷ್ಟು ಹಣವನ್ನು ಬಡಮಕ್ಕಳ ಶಿಕ್ಷಣ, ಪರಿಸರ, ಸಾಮಾಜಿಕ ಕಾರ್ಯಕ್ಕೆ ಖರ್ಚು ಮಾಡುತ್ತಿದ್ದಾರೆ.

ಪರಂಗಿಯವರು ತಾವೇ ಶಿಕ್ಷಕರನ್ನು ನೇಮಿಸಿಕೊಂಡು ಇಂಗ್ಲಿಷ್ ಮೀಡಿಯಮ್‍ನ ಎಲ್‍ಕೆಜಿ, ಯುಕೆಜಿ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ನೀಡುತ್ತಿದ್ದಾರೆ. ಶಾಲೆಯ ಎಲ್ಲ ಮಕ್ಕಳಿಗೆ ಬಟ್ಟೆ, ಟೈ, ಶೂ, ಬ್ಯಾಗ್ ಹಾಗೂ ನೋಟ್‍ಬುಕ್ ಹಾಗೂ ಸಿಬ್ಬಂದಿಗೆ ತಮ್ಮ ಸ್ವಂತ ಹಣದಲ್ಲಿ ವೇತನ ನೀಡುತ್ತಿದ್ದಾರೆ. ಲ್ಯಾಪ್‍ಟಾಪ್, ಪ್ರೊಜೆಕ್ಟರ್, ಬ್ಲೂಟೂತ್, ಟಿವಿ ಖರೀದಿಸಿ 5 ರಿಂದ 7 ನೇ ತರಗತಿ ಮಕ್ಕಳಿಗೆ ಪಾಠ ಮಾಡುವ ವ್ಯವಸ್ಥೆ ಕಲ್ಪಿಸಿದ್ದಾರೆ.

ಭಿಕ್ಷೆ ಬೇಡುವ ಮಕ್ಕಳನ್ನ ಶಾಲೆಗೆ ಕರೆತಂದು, ಅಕ್ಷರ ಪಾತ್ರೆ ನೀಡಿದ್ದಾರೆ. ಗುಳೆ ಹೋಗುವ ಕುಟುಂಬದ ಮಕ್ಕಳನ್ನ ಶಾಲೆಗೆ ಸೇರಿಸುವ ನಿರಂತರ ಪ್ರಯತ್ನ ಮಾಡಿದ್ದಾರೆ. ಪ್ರತಿವರ್ಷ ಹತ್ತಾರು ಬಡ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಪಡೆದು ಅವರ ಶಿಕ್ಷಣದ ಜವಾಬ್ದಾರಿಯನ್ನು ನಿಭಾಯಿಸುವ ಮೂಲಕ ಗುರುವಿನ ಪದಕ್ಕೆ ನಿಜವಾದ ಅರ್ಥ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *