Connect with us

Crime

ಪಬ್‍ಜಿಗೆ ಅಡಿಕ್ಟ್ ಆಗಿ ಸಹೋದರಿಯ ಬಾವಿ ಪತಿಗೆ ಚಾಕು ಇರಿದ

Published

on

ಮುಂಬೈ: ಪಬ್‍ಜಿ ಆಟಕ್ಕಾಗಿ ವ್ಯಕ್ತಿಯೊಬ್ಬ ತನ್ನ ಸಹೋದರಿಯ ಬಾವಿ ಪತಿಯನ್ನೇ ಚಾಕು ಇರಿದ ಘಟನೆ ಮಹಾರಾಷ್ಟ್ರದ ಕಲ್ಯಾಣ್ ನಗರದಲ್ಲಿ ನಡೆದಿದೆ.

ರಾಜ್ನೀಶ್ ರಾಜ್ಬರ್(27) ತನ್ನ ಬಾವ ಓಂ ಚಂದ್ರಕಿಶೋರ್ ಭಾವದ್ನಕರ್(32)ರನ್ನು ಚಾಕು ಇರಿದಿದ್ದಾನೆ. ಚಂದ್ರಕಿಶೋರ್ ಅಂಬೇನಾತ್ ನಿವಾಸಿಯಾಗಿದ್ದು, ಇತ್ತೀಚೆಗೆ ಕಲ್ಯಾಣನಗರದ ಯುವತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಫೆ. 6ರ ರಾತ್ರಿ 9.30ಕ್ಕೆ ಚಂದ್ರಕಿಶೋರ್ ತನ್ನ ಬಾವಿ ಪತ್ನಿಯನ್ನು ಭೇಟಿ ಮಾಡಲು ಕಲ್ಯಾಣ್‍ಗೆ ಬಂದಿದ್ದರು. ಬಾವಿ ಪತ್ನಿಯ ಮನೆಯಲ್ಲಿ ಊಟ ಮಾಡಿದ ಬಳಿಕ ಆತ ಲ್ಯಾಪ್‍ಟಾಪ್‍ನಲ್ಲಿ ಕೆಲಸ ಮಾಡುತ್ತಿದ್ದರು.

ಫೆ. 7ರ ಬೆಳಗಿನ ಜಾವ 4 ಗಂಟೆಗೆ ರಾಜ್ನೀಶ್ ಮನೆಗೆ ಹಿಂತಿರುಗಿದ್ದನು. ರಾಜ್ನೀಶ್ ಯಾವಾಗಲೂ ತನ್ನ ಮೊಬೈಲಿನಲ್ಲಿ ಪಬ್‍ಜಿ ಆನ್‍ಲೈನ್ ಗೇಮ್ ಆಡುತ್ತಿದ್ದನು. ಆ ರಾತ್ರಿ ಕೂಡ ಪಬ್‍ಜಿ ಆಡುವಾಗ ಆತನ ಮೊಬೈಲಿನ ಚಾರ್ಜ್ ಕಡಿಮೆ ಆಗಿದೆ. ಗೇಮಿನಲ್ಲಿ ಒಂದು ಲೆವಿಲ್‍ಯಿಂದ ಹಿಂದೆ ಇರಬಾರದು ಎಂದು ರಾಜ್ನೀಶ್ ಮೊಬೈಲ್ ಚಾರ್ಜ್‍ರ್ ಗಾಗಿ ಹುಡುಕಾಡಿದ್ದಾನೆ. ಬಳಿಕ ಆತನ ಮೊಬೈಲ್ ಚಾರ್ಜರ್ ನ ವೈರ್ ಕೆಟ್ಟು ಹೋಗಿದ್ದು ನೋಡಿ ಆತ ತನ್ನ ಮನೆಯ ನಾಯಿಯನ್ನು ಕಾಲಿನಿಂದ ಒದ್ದಿದ್ದಾನೆ.

ಈ ವೇಳೆ ಕೋಪಗೊಂಡ ರಾಜ್ನೀಶ್ ಅಡುಗೆ ಮನೆಗೆ ಹೋಗಿ ಅಲ್ಲಿಂದ ಚಾಕು ತೆಗೆದುಕೊಂಡು ಬಂದು ತನ್ನ ಸಹೋದರಿಯ ಲ್ಯಾಪ್‍ಟಾಪ್ ಚಾರ್ಜರ್ ನನ್ನು ಕಟ್ ಮಾಡಿದ್ದಾನೆ. ಇದನ್ನು ನೋಡಿದ ಚಂದ್ರಕಿಶೋರ್, ನೀನು ಲ್ಯಾಪ್‍ಟಾಪ್ ಚಾರ್ಜರ್ ಏಕೆ ಕಟ್ ಮಾಡಿದೆ? ನಾನು ನಿನಗೆ ಹೊಸ ಚಾರ್ಜರ್ ತಂದುಕೊಡುತ್ತಿದೆ. ನಿನಗಾಗಿ ನಿನ್ನ ಪೋಷಕರು ಮೊಬೈಲ್ ಅಂಗಡಿಯನ್ನು ತೆರೆದಿದ್ದಾರೆ. ನೀನು ರಾತ್ರಿ ಹೊತ್ತು ಯಾವಾಗಲೂ ಮೊಬೈಲಿನಲ್ಲಿ ಗೇಮ್ ಆಡುತ್ತೀಯಾ ಹಾಗೂ ಬೆಳಗ್ಗೆ ಹೊತ್ತು ನಿದ್ದೆ ಮಾಡುತ್ತೀಯಾ. ನೀನು ಈ ರೀತಿ ಮಾಡಿದರೆ ನಿನ್ನ ಬ್ಯುಸಿನೆಸ್ ಏನ್ ಆಗಬೇಕು ಎಂದು ಪ್ರಶ್ನಿಸಿದ್ದಾರೆ.

ಇದರಿಂದ ಮತ್ತೆ ಕೋಪಗೊಂಡ ರಾಜ್ನೀಶ್ ತನ್ನ ಸಹೋದರಿಯ ಬಾವಿ ಪತಿಗೆ ಚಾಕು ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಚಂದ್ರಕಿಶೋರ್ ಚಿಕಿತ್ಸೆಗಾಗಿ ಉಲ್ಲಾಸ್‍ನಗರದ ಆಸ್ಪತ್ರೆಯಲ್ಲಿ ದಾಖಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಲ್ವಾದ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಘಟನೆ ಬಗ್ಗೆ ಚಂದ್ರಕಿಶೋರ್ ಕೋಲ್ಸೆವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕುಟುಂಬಸ್ಥರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv