Monday, 24th June 2019

Recent News

ತಾಯಿಯ ನೈಟಿ, ಒಳ ಉಡುಪು ಧರಿಸಿ ಸೈಕೋ ಬಾಲಕ ಆತ್ಮಹತ್ಯೆ!

ಕೋಲಾರ: ತಾಯಿಯ ನೈಟಿ ಹಾಗೂ ಒಳ ಉಡುಪುಗಳನ್ನು ಧರಿಸಿಕೊಂಡು ಸೈಕೋ ಬಾಲಕನೊರ್ವ ಆತ್ಮಹತ್ಯೆಗೆ ಶರಣಾಗಿರುವ ವಿಚಿತ್ರ ಘಟನೆ ಕೆಜಿಎಫ್ ನ ಸ್ವರ್ಣ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಪ್ರಥಮ ಪಿಯು ವಿದ್ಯಾರ್ಥಿ ರವಿಕಿರಣ್ (17) ಆತ್ಮಹತ್ಯೆಗೆ ಶರಣಾದ ಸೈಕೋ ಬಾಲಕ. ಬೆಮೆಲ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದನು. ಇತ್ತೀಚೆಗೆ ಖಿನ್ನತೆಗೆ ಒಳಗಾಗಿ ಸೈಕೋ ರೀತಿ ವರ್ತನೆ ಮಾಡುತ್ತಿದ್ದ ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ತಾಯಿಯ ಬಟ್ಟೆಗಳನ್ನು ಧರಿಸಿಕೊಂಡು ವಿಚಿತ್ರವಾಗಿ ನೇಣಿಗೆ ಶರಣಾಗಿದ್ದಾನೆ.

ನಪುಂಸಕನಾಗಿದ್ದಕ್ಕೆ ಕೃತ್ಯ ಎಸಗಿದ್ದಾನೋ ಅಥವಾ ಮಾನಸಿಕ ಅಸ್ವಸ್ಥತೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾನೋ ಎನ್ನುವ ಶಂಕೆ ಉಂಟಾಗಿದೆ. ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *