Advertisements

ಹೈಕಮಾಂಡ್‌ ಗರಂ – ಆರಗ ಖಾತೆ ಬದಲಾವಣೆ?

ಬೆಂಗಳೂರು: ಪಿಎಸ್‍ಐ ಪರೀಕ್ಷಾ ಅಕ್ರಮದ ವಿಚಾರದಲ್ಲಿ ಬೊಮ್ಮಾಯಿ ಸರ್ಕಾರದ ಧೋರಣೆಗೆ ಅದರಲ್ಲೂ ಗೃಹ ಸಚಿವ ಆರಗ ಜ್ಞಾನೇಂದ್ರ ತೋರಿದ ನಡವಳಿಕೆಗಳಿಗೆ ಬಿಜೆಪಿ ಹೈಕಮಾಂಡ್ ಗರಂ ಆಗಿದೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

Advertisements

ಮರು ಪರೀಕ್ಷೆ ನಡೆಸಲು ಸಿಐಡಿ ವರದಿ ಕೊಟ್ಟರೂ ಆದೇಶ ಹೊರಡಿಸಲು ಮೀನಾಮೇಷ ಎಣಿಸಿದ ಸರ್ಕಾರವನ್ನು ಅಮಿತ್ ಶಾ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಪರಿಣಾಮ ಇಂದು ತುರ್ತು ಸುದ್ದಿಗೋಷ್ಠಿ ನಡೆಸಿದ ಗೃಹ ಸಚಿವರು, ಮರು ಪರೀಕ್ಷೆ ಆದೇಶವನ್ನು ತರಾತುರಿಯಲ್ಲಿ ಹೊರಡಿಸಿದ್ದಾರೆ. ಜೊತೆಗೆ ದಿವ್ಯಾ ಹಾಗರಗಿ ಬಂಧನದೊಂದಿಗೆ ರಾಜ್ಯ ಸರ್ಕಾರವೂ ನಿಟ್ಟುಸಿರುಬಿಟ್ಟಿದೆ. ಇದನ್ನೂ ಓದಿ: ಎಲ್ಲಾ ಮುಸ್ಲಿಮರು ಭಯೋತ್ಪಾದಕರಲ್ಲ, ದೇಶ ದ್ರೋಹಿಗಳನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ: ರೇಣುಕಾಚಾರ್ಯ

Advertisements

ಈಗೇನಾದರೂ ಮರು ಪರೀಕ್ಷೆ ಆದೇಶ ಹೊರಡಿಸದಿದ್ದರೆ ದಿವ್ಯಾ ಹಾಗರಗಿ ಬಂಧನ ಆಗದಿದ್ದರೆ ಅಮಿತ್ ಶಾ ರಾಜ್ಯ ಪ್ರವಾಸದ ವೇಳೆ, ಅವರಿಗೆ ಮುಜುಗರದ ಸನ್ನಿವೇಶ ಎದುರಾಗುತ್ತಿತ್ತು.

ಗೃಹ ಇಲಾಖೆ ನಿಭಾಯಿಸಲಾಗದೇ ಒದ್ದಾಡುತ್ತಿರುವ ಆರಗ ಜ್ಞಾನೇಂದ್ರರನ್ನು ಬದಲಿಸಲು ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದೆ ಎಂದು ಹೇಳಲಾಗ್ತಿದೆ. ಮೇ ಮೊದಲ ವಾರದ ಬಳಿಕ ಆರಗ ಜ್ಞಾನೇಂದ್ರರಿಂದ ಗೃಹ ಖಾತೆ ಹಿಂಪಡೆದು, ಅವರಿಗೆ ಬೇರೆ ಖಾತೆಯ ಹೊಣೆ ನೀಡುವ ಸಂಭವ ಇದೆ. ಆರಗ ಜ್ಞಾನೇಂದ್ರ ಕಾರ್ಯವೈಖರಿ ಬಗ್ಗೆ ಸ್ವತಃ ಬಿಜೆಪಿ ಪಕ್ಷದಲ್ಲೇ ಭಾರೀ ಅಸಮಾಧಾನವಿದೆ. ಇದನ್ನೂ ಓದಿ: ಕೋವಿಡ್ ಉಲ್ಬಣ – ಐಐಟಿಯಲ್ಲೂ ಹೆಚ್ಚಿದ ಸೋಂಕು

Advertisements

ಕಾರಣಗಳೇನು?
– ಮೈಸೂರು ರೇಪ್ ಪ್ರಕರಣದಲ್ಲಿ ಲೂಸ್ ಟಾಕ್
– ಉಡುಪಿಯ ಹಿಜಬ್‌ ವಿವಾದ ವೇಳೆ ಸರ್ಕಾರದ ನಿಲುವು ಸಮರ್ಥಿಸುವಲ್ಲಿ ವಿಫಲ
– ಶಿವಮೊಗ್ಗ, ಹುಬ್ಬಳ್ಳಿ ಗಲಭೆ ವೇಳೆ ವ್ಯಕ್ತವಾಗದ ಖಡಕ್ ನಿಲುವು
– ಜೆ.ಜೆ.ನಗರದ ಚಂದ್ರು ಕೊಲೆ ಪ್ರಕರಣದಲ್ಲಿ ಉಲ್ಟಾ-ಪಲ್ಟಾ ಹೇಳಿಕೆ
– ಪಿಎಸ್‍ಐ ಪರೀಕ್ಷಾ ಅಕ್ರಮ. ಶುರುವಿನಲ್ಲೇ ಆರೋಪ ನಿರ್ಲಕ್ಷ್ಯ
– ಪಿಎಸ್‍ಐ ಹಗರಣ – ಖಡಕ್ ನಿರ್ಧಾರಕ್ಕೆ ಬರಲು ವಿಳಂಬ
– ಪೊಲೀಸ್ ಅಧಿಕಾರಿಗಳನ್ನು ನಿಯಂತ್ರಣದಲ್ಲಿ ಇಡಲು ವಿಫಲ

Advertisements
Exit mobile version