Tuesday, 16th July 2019

ಪ್ರೌಡ್ ಆಫ್ ಯೂ, ಮಿಸ್ ಯೂ ಎಂದು ಗೆಳತಿಯನ್ನು ನೆನಪಿಸಿಕೊಂಡ ಚಂದನ್

ಬೆಂಗಳೂರು: ಬಿಗ್ ಬಾಸ್ ಸೀಸನ್ -5 ವಿನ್ನರ್ ರ‍್ಯಾಪರ್ ಚಂದನ್ ಶೆಟ್ಟಿ ಅವರು ತಮ್ಮ ಗೆಳತಿಯನ್ನು ನೆನಪಿಸಿಕೊಂಡು ಪ್ರೌಡ್ ಆಫ್ ಯೂ, ಮಿಸ್ ಯೂ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಬಿಗ್ ಬಾಸ್ ಸೀಸನ್ 5ರಲ್ಲಿ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಜೊತೆ ಹೆಚ್ಚು ಆತ್ಮೀಯಾಗಿದ್ದರು. ಈ ಇಬ್ಬರು ಸ್ನೇಹಿತರು ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೂ ತಮ್ಮ ಸ್ನೇಹವನ್ನು ಮುಂದುವರಿಸಿದ್ದಾರೆ. ಈಗ ಚಂದನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರೌಡ್ ಆಫ್ ಯೂ, ಮಿಸ್ ಯೂ ಎಂದು ಪೋಸ್ಟ್ ಮಾಡಿಕೊಂಡಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ?
ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ನಿವೇದಿತಾ ಗೌಡ ಬಿಗ್ ಬಾಸ್ -6ರ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಹಾಗಾಗಿ ಚಂದನ್ ನಿವೇದಿತಾ ಜೊತೆ ಡ್ಯಾನ್ಸ್ ಮಾಡುತ್ತಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

“ನಿವಿ ನಿನ್ನ ಬಗ್ಗೆ ನನಗೆ ಹೆಮ್ಮೆ ಇದೆ. ಚೆನ್ನಾಗಿ ಆಟವಾಡು. ನಾನು ನಿನ್ನನ್ನು ಶೀಘ್ರದಲ್ಲೇ ಭೇಟಿ ಮಾಡುತ್ತೇನೆ. ನನ್ನ ಶುಭಹಾರೈಕೆಗಳು ಯಾವಾಗಲೂ ನಿನ್ನ ಜೊತೆ ಇರುತ್ತೆ. ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೀನಿ ಎಂದು ನಿವೇದಿತಾ ಬಗ್ಗೆ ಬರೆದಿದ್ದಾರೆ. ಅಷ್ಟೇ ಅಲ್ಲದೇ ಕನ್ನಡ ಕೋಗಿಲೆ ಗ್ರ್ಯಾಂಡ್ ಫಿನಾಲೆಯಲ್ಲಿ ನಾನು ಹಾಗೂ ನಿವಿ ಡ್ಯಾನ್ಸ್ ಮಾಡುತ್ತಿದ್ದೀವಿ. ತಪ್ಪದೇ ವೀಕ್ಷಿಸಿ” ಎಂದು ವೀಕ್ಷಕರಿಗೆ ಚಂದನ್ ಹೇಳಿದ್ದಾರೆ.

ನಿವೇದಿತಾ ಗೌಡ ವಿಶೇಷ ಅತಿಥಿಯಾಗಿ ಕೆಲವು ದಿನಗಳ ಕಾಲ ಬಿಗ್ ಬಾಸ್ ಮೆನೆಗೆ ಹೋಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *