Friday, 23rd August 2019

ಜಮ್ಮು-ಕಾಶ್ಮೀರದಲ್ಲಿ ಭುಗಿಲೆದ್ದ ಹಿಂಸಾಚಾರ – ಉಗ್ರ ನಾಯಕರ ಪೋಸ್ಟರ್ ಹಿಡಿದ ಕಿಡಿಗೇಡಿಗಳು

ಶ್ರೀನಗರ: ರಂಜಾನ್ ಹಬ್ಬದಂದೇ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ನಡೆದಿದ್ದು, ಶ್ರೀನಗರದ ಜಾಮಿಯಾ ಮಸೀದಿಯಲ್ಲಿ ಬೆಳ್ಳಂಬೆಳಗ್ಗೆ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಸಂದರ್ಭದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.

ಭದ್ರತಾ ಪಡೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಪರಿಣಾಮ ಕೆಲ ಭಧ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಅಲ್ಲದೆ ಹಿಂಸಾಚಾರ ನಡೆಸಿದ ದುಷ್ಕರ್ಮಿಗಳು ಜೈಷ್-ಇ- ಮೊಹ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಉಗ್ರ ಮಸೂದ್ ಅಜಾದ್ ಹಾಗೂ ಅಲ್-ಖೈದಾ ಉಗ್ರ ಸಂಘಟನೆಯ ಕಾಶ್ಮೀರ ವಿಭಾಗದ ಮುಖ್ಯಸ್ಥ ಉಗ್ರ ಝಾಕಿರ್ ಮೂಸನ ಪೋಸ್ಟರ್ ಮತ್ತು `ಮೂಸ ಆರ್ಮಿ’ ಎಂದು ಬರೆದ ಪೋಸ್ಟರ್ ಹಿಡಿದು ದುಷ್ಟತನ ಮೆರೆದಿದ್ದಾರೆ. ಹೀಗಾಗಿ ಭದ್ರತಾ ಪಡೆ ಹಾಗೂ ದುಷ್ಕರ್ಮಿಗಳ ನಡುವೆ ಘರ್ಷಣೆ ನಡೆದಿದೆ. ಇದನ್ನೂ ಓದಿ:ರಂಜಾನ್ ಹಬ್ಬದಂದು ಉಗ್ರರಿಂದ ಗುಂಡಿಕ್ಕಿ ಮಹಿಳೆಯ ಹತ್ಯೆ

ನಡೆದಿದ್ದು ಏನು?
ಪವಿತ್ರ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಜಾಮೀಯ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮಸೀದಿಯಿಂದ ಹೊರಬಂದ ಕೆಲ ಯುವಕರ ಗುಂಪು ಏಕಾಏಕಿ ಭದ್ರತಾ ಪಡೆ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಲು ಆರಂಭಿಸಿದ್ದಾರೆ. ಈ ವೇಳೆ ಟಿಯರ್ ಗ್ಯಾಸ್ ಅನ್ನು ಬಳಿಸಿ ಸಿಬ್ಬಂದಿ ಯುವಕರನ್ನು ಓಡಿಸಿದ್ದಾರೆ.

ಹಾಗೆಯೇ ಉತ್ತರ ಕಾಶ್ಮೀರದಲ್ಲೂ ಕೂಡ ಇದೇ ರೀತಿ ಹಿಂಸಾಚಾರ ನಡೆದಿದೆ. ಬರಮುಲ್ಲಾ ಜಿಲ್ಲೆಯಲ್ಲಿ ಈದ್ ಪ್ರಾರ್ಥನೆ ಸಲ್ಲಿಸುವ ವೇಳೆ ಜಮ್ಮು-ಕಾಶ್ಮೀರ ಪೊಲೀಸ್ ಹಾಗೂ ಯುವಕರ ಗುಂಪಿನ ನಡುವೆ ಗಲಾಟೆ ನಡೆದಿದೆ.

Leave a Reply

Your email address will not be published. Required fields are marked *