ಮೊದಲ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಸೋತ ಬೆಂಗಳೂರು ಬುಲ್ಸ್

Advertisements

ಬೆಂಗಳೂರು: 8ನೇ ಆವೃತ್ತಿಯ ಪ್ರೊ ಕಬಡ್ಡಿಯ ಪ್ರಥಮ ಪಂದ್ಯದಲ್ಲಿ ತವರಿನ ತಂಡ ಬೆಂಗಳೂರು ಬುಲ್ಸ್ ತಂಡ ಯು ಮುಂಬಾ ವಿರುದ್ಧ 30-46 ಅಂಕಗಳ ಅಂತರದಲ್ಲಿ ಪರಾಭವಗೊಂಡಿದೆ.

Advertisements

ಯು ಮುಂಬಾ ಪರ ರೈಡಿಂಗ್‍ನಲ್ಲಿ ಮಿಂಚಿದ ಅಭಿಷೇಕ್ ಸಿಂಗ್ 19 ರೈಡ್ ಪಾಯಿಂಟ್‍ನೊಂದಿಗೆ ಮಿಂಚಿ ಯು ಮುಂಬಾ ತಂಡಕ್ಕೆ ಮೊದಲ ಜಯ ತಂದುಕೊಟ್ಟರು. ಬೆಂಗಳೂರು ಪರ ನಾಯಕ ಪವನ್ ಶೆರಾವತ್ 12 ರೈಡ್ ಪಾಯಿಂಟ್‍ಗಳಿಸಿದರೂ ಕೂಡ ಅಂತಿಮವಾಗಿ 16 ಅಂಕಗಳಿಂದ ಸೋಲು ಕಂಡಿದೆ. ಇದನ್ನೂ ಓದಿ: ಬೆಂಗಳೂರು ಬುಲ್ಸ್‌ನಲ್ಲಿಲ್ಲ ಕನ್ನಡಿಗರು – 9 ತಂಡದಲ್ಲಿ 15 ಕನ್ನಡಿಗರ ಕಮಾಲ್

Advertisements

ಬೆಂಗಳೂರು ಬುಲ್ಸ್ 27 ರೈಡಿಂಗ್, 3 ಟೇಕಲ್ ಪಾಯಿಂಟ್‍ನಿಂದ 30 ಅಂಕ ದಾಖಲಿಸಿದರೆ, ಯು ಮುಂಬಾ 30 ರೈಡಿಂಗ್, 13 ಟೇಕಲ್ ಮತ್ತು 6 ಆಲ್‍ಔಟ್ ಪಾಯಿಂಟ್ ಮೂಲಕ ಒಟ್ಟು 46 ಅಂಕಗಳಿಸಿ ಗೆದ್ದು ಬೀಗಿದೆ. ಇದನ್ನೂ ಓದಿ: ಮತ್ತೆ ಪ್ರೋ ಕಬಡ್ಡಿ ಹಬ್ಬ – ಇಂದಿನಿಂದ ಬೆಂಗಳೂರು ಬುಲ್ಸ್ ಅಭಿಯಾನ ಶುರು

Advertisements

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಬೆಂಗಳೂರು ಬುಲ್ಸ್ ನಮ್ಮ ಆರಂಭ ಚೆನ್ನಾಗಿ ಆಗಿಲ್ಲ. ಆದರೆ ಮುಂದಿನ ಪಂದ್ಯಗಳಲ್ಲಿ ಕಂಬ್ಯಾಕ್ ಮಾಡುತ್ತೇವೆ ಎಂದು ಬರೆದುಕೊಂಡಿದೆ.

Advertisements
Exit mobile version