Connect with us

Cinema

ಬಿಗ್ ಬಾಸ್ ಮನೆಯಲ್ಲಿ ನಡೆಯಿತು ಜಡೆ ಜಗಳ

Published

on

ಬಿಗ್ ಬಾಸ್ ಮನೆಯಲ್ಲಿ ಜಡೆ ಜಗಳ ಆರಂಭವಾದಂತೆ ಕಾಣುತ್ತಿದೆ. ನಿಧಿ ಸುಬ್ಬಯ್ಯ ಹಾಗೂ ವೈಲ್ಡ್ ಕಾರ್ಡ್ ಎಂಟ್ರಿ ನೀಡಿರುವ ಪ್ರಿಯಾಂಕಾ ತಿಮ್ಮೇಶ್ ಅವರ ನಡುವೆ ಮನಸ್ತಾಪವಾಗಿದೆ. ಇಬ್ಬರು ಟಾಸ್ಕ್ ವಿಚಾರವಾಗಿ ಮಾತಿಗೆ ಮಾತು ಬೆಳೆಸಿದ್ದಾರೆ.

ಹಾಸ್ಟೆಲ್ ಟಾಸ್ಕ್ ವೇಳೆ ಪ್ರೇಮಪತ್ರವನ್ನು ಕೊಡಲು ಒಪ್ಪದಿದ್ದಕ್ಕೆ ನಿಧಿ ಸುಬ್ಬಯ್ಯ ಅವರು ಪ್ರಿಯಾಂಕಾಗೆ ಸ್ಟುಪ್ಪಿಡ್ ಅಂತ ಬೈಯ್ದಿದ್ದರು. ಪ್ರಿಯಾಂಕಾ ಹಾಗೂ ನಿಧಿ ನಡುವೆ ಸಣ್ಣ ಮನಸ್ತಾಪ ಆಗಲೇ ಶುರುವಾಗಿತ್ತು. ಈಗ ಟಾಸ್ಕ್ ವೇಳೆ ಹೆಚ್ಚಾಗಿದೆ. ಯಾಕೆ ಮನಸ್ತಾಪ ಆಗುತ್ತಿದೆ ಅಂತ ನಿಧಿ ಸುಬ್ಬಯ್ಯ ಹಾಗೂ ಪ್ರಿಯಾಂಕಾ ತಿಮ್ಮೇಶ್ ಬೇರೆ ಬೇರೆ ಸ್ಪರ್ಧಿಗಳ ಜೊತೆ ಮಾತನಾಡಿದ್ದಾರೆ.

ಗೇಮ್ ವಿಷಯ ಬಂದಾಗ ದಿವ್ಯಾ ಮತ್ತಿರರು ನಾನು ನಾನು ಅಂತ ಕೈ ಎತ್ತುತ್ತಾರೆ, ನಾನು ಗೇಮ್ ಆಡುತ್ತೇನೆ ಎಂದು ಹೇಳಿದರೆ, ಬೇರೆನೆ ಹೇಳುತ್ತಾರೆ. ನಾವು ಹಾಗಾದ್ರೆ ಸ್ಟ್ರಾಂಗ್ ಇಲ್ವಾ? ಅದಕ್ಕೆ ನಾನು ಪ್ರಶ್ನೆ ಮಾಡಿದೆ. ಆಮೇಲೆ ಆಸಕ್ತಿಯೇ ಇಲ್ಲದಂತೆ ತೋರಿಸ್ತಾರೆ, ಆಗ ನಾನು ಏನು ಮಾಡಲಿ ಎಂದು ಪ್ರಿಯಾಂಕಾ ತಿಮ್ಮೇಶ್ ಅವರು ಚಕ್ರವರ್ತಿ ಚಂದ್ರಚೂಡ್ ಜೊತೆ ಹೇಳಿಕೊಂಡಿದ್ದಾರೆ.

ಬೇಕು ಬೇಕು ಅಂತ ನನ್ನ ಜೊತೆ ಜಗಳ ಮಾಡೋದಾ? ವೈಲ್ಡ್ ಕಾರ್ಡ್‍ದೇ ಒಂದು ಉದ್ದೇಶ ಇರತ್ತೆ ಎಂದು ನಿಧಿ ಸುಬ್ಬಯ್ಯ ಅವರು ದಿವ್ಯಾ ಉರುಡುಗ ಜೊತೆ ಚರ್ಚೆ ಮಾಡಿದ್ದಾರೆ. ಒಟ್ಟಿನಲ್ಲಿ ಈಗಾಗಲೇ ನಿಧಿ ಬಿಗ್ ಬಾಸ್ ಮನೆಯಲ್ಲಿ ಅನೇಕರ ಜೊತೆ ಮನಸ್ತಾಪ ಮಾಡಿಕೊಂಡು, ಜಗಳ ಆಡಿದ್ದರು. ಅವರ ನೇರನುಡಿಯನ್ನು ಕಿಚ್ಚ ಸುದೀಪ್ ಅವರು ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಮೆಚ್ಚಿದ್ದರು. ಇದೀಗ ಮತ್ತೆ ಜಗಳದ ಮೂಲಕವಾಗಿಯೇ ಸುದ್ದಿಯಾಗಿದ್ದಾರೆ.

ಗೇಮ್ ಆಡುವಾಗ ಪ್ರಿಯಾಂಕ ನಾನು ಆಡುತ್ತೇನೆ ಎಂದಾಗ ನಿಧಿ ಸ್ಟ್ರಾಂಗ್ ಇರುವವರು ಬೇಕು ಎಂದು ಹೇಳಿದ್ದರು. ಈ ವಿಚಾರವಾಗಿ ಪ್ರಿಯಾಂಕ ನೊಂದುಕೊಂಡಿದ್ದರು. ನಾನು ಸ್ಟ್ರಾಂಗ್ ಇಲ್ಲ ಅಂತಾ ಹೇಗೆ ಹೇಳುತ್ತೀರಾ? ನನ್ನ ಆಟದ ಬಗ್ಗೆ ನಿಮಗೆ ಗೊತ್ತಿಲ್ಲ ಅದಕ್ಕೆ ನಾನು ಆಡ್ತೀನಿ ಅಂತಾ ಹೇಳಿದೆ ಅಷ್ಟೇ ಅದನ್ನು ಬಿಟ್ಟು ನಾನು ಹೇಳುತ್ತಿಲ್ಲ ಎಂದು ಪ್ರಿಯಾಂಕ ಹೇಳಿದ್ದಾರೆ. ನಿಧಿ ಅವರು ಅವರದ್ದೇ ಶೈಲಿಯಲ್ಲಿ ಕೆಲವು ಕಾರಣಗಳನ್ನು ಕೊಟ್ಟು ಅರ್ಥ ಮಾಡಿಸುವ ಪ್ರಯತ್ನವನ್ನು ಮಾಡಿದ್ದಾರೆ. ಅದರೆ ಪ್ರಿಯಾಂಕ ಮಾತ್ರ ನಾನು ಜಗಳ ಆಡಲು ಆಗಲ್ಲ. ಹಾಗಾಗಿ ನಾನು ನನಗೆ ಅನ್ನಿಸಿದ್ದನ್ನು ಹೇಳುತ್ತೇನೆ ಎಂದು ಹೇಳಿದ್ದಾರೆ. ಇಬ್ಬರ ನಡುವಿನ ಮನಸ್ತಾಪ ಮಾತ್ರ ಸರಿ ಆದಂತಿಲ್ಲ. ಮುಂದಿನ ದಿನಗಳಲ್ಲಿ ಇವರ ಜಗಳ ಯಾವ ತಿರುವು ಪಡೆಯಲಿದೆ? ಅಥವಾ ಇವರಿಬ್ಬರು ರಾಜಿ ಮಾಡಿಕೊಳ್ಳಲಿದ್ದಾರಾ ಎಂದು ಕಾದು ನೋಡಬೇಕಾಗಿದೆ.

Click to comment

Leave a Reply

Your email address will not be published. Required fields are marked *