Thursday, 18th July 2019

ಸನ್ನಿಯನ್ನು ಹಿಂದಿಕ್ಕಿದ ಪ್ರಿಯಾಂಕಾ ಚೋಪ್ರಾ- 5 ನಿಮಿಷದ ಡ್ಯಾನ್ಸ್ ಗೆ ಇಷ್ಟು ಸಂಭಾವನೆ ಪಡೆದ ಪಿಗ್ಗಿ

ಮುಂಬೈ: ಬಾಲಿವುಡ್ ನ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ 5 ನಿಮಿಷದ ಡ್ಯಾನ್ಸ್ ಗಾಗಿ ಬರೋಬ್ಬರಿ 5 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ನಿಮಿಷಕ್ಕೆ 1 ಕೋಟಿಯಂತೆ 5 ನಿಮಿಷಕ್ಕೆ 5 ಕೋಟಿ ರೂ. ಸಂಭಾವನೆಯನ್ನು ಪ್ರಿಯಾಂಕಾ ಪಡೆಯಲಿದ್ದಾರೆ.

2018ರ ಜಿ ಸಿನಿಮಾ ಅವಾರ್ಡ್ ಕಾರ್ಯಕ್ರಮಕ್ಕಾಗಿ ಪ್ರಿಯಾಂಕಾ ಬಹು ದಿನಗಳ ನಂತರ ಭಾರತಕ್ಕೆ ಮರಳಲಿದ್ದಾರೆ. ಅವಾರ್ಡ್ ಶೋ ನಲ್ಲಿ ಭಾಗಿಯಾಗುವ ಪ್ರಿಯಾಂಕಾ ಯಾವ ಹಾಡಿಗೆ ನೃತ್ಯ ಮಾಡಲಿದ್ದಾರೆ ಎಂಬುದು ಇನ್ನೂ ರಿವೀಲ್ ಆಗಿಲ್ಲ. ಖಾಸಗಿ ಚಾನೆಲ್ ಗಳು ಏರ್ಪಡಿಸುವ ಅವಾರ್ಡ್ ಶೋಗಳಲ್ಲಿ ಇದೊಂದು ಪ್ರಮುಖ ಕಾರ್ಯಕ್ರಮವಾಗಿದ್ದು, ಬಾಲಿವುಡ್ ಎಲ್ಲ ಸೆಲಬ್ರಿಟಿಗಳು ಭಾಗವಹಿಸುತ್ತಾರೆ.

ಬಾಲಿವುಡ್ ನಿಂದ ದೂರ ಉಳಿದಿರುವ ಪ್ರಿಯಾಂಕಾ ಹಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ಸದ್ಯ ಸಿನಿಮಾ ಮತ್ತು ಕ್ವಾಂಟಿಕೋ ರಿಯಾಲಿಟಿ ಶೋನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ನ್ಯೂಯಾರ್ಕ್ ನಲ್ಲಿ ವಾಸವಾಗಿದ್ದಾರೆ. ಇನ್ನೂ ಮಾದಕ ಬೆಡಗಿ ಸನ್ನಿ ಲಿಯೋನ್ ಬೆಂಗಳೂರಿನಲ್ಲಿ ನಡೆಯುವ ‘ಸನ್ನಿ ನೈಟ್ಸ್’ಗಾಗಿ ಮೂರು ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *