Connect with us

Bollywood

ಪ್ರಿಯಾಂಕ ಚೋಪ್ರಾ ಜೊತೆ ನಡೆದಿದ್ದೇನು?- ಫೋಟೋ ನೋಡಿ ಶಾಕ್ ಆದ ಅಭಿಮಾನಿಗಳು

Published

on

ನ್ಯೂಯಾರ್ಕ್: ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಸದ್ಯ ವಿದೇಶಿ ಗರ್ಲ್ ಆಗಿ ಹಾಲಿವುಡ್‍ನಲ್ಲಿ ಮಿಂಚುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವೊಂದು ವೈರಲ್ ಆಗಿದ್ದು, ಎಲ್ಲರೂ ಶಾಕ್ ಆಗುವಂತೆ ಮಾಡಿದೆ.

ಆದ್ರೆ ಇದರಲ್ಲಿ ಗಾಬರಿಯಾಗುವಂತದ್ದು ಏನೂ ಇಲ್ಲ. ಸದ್ಯ ಪ್ರಿಯಾಂಕ ಹಾಲಿವುಡ್ ನ `ಇಸಂಟ್ ಇಟ್ ರೊಮ್ಯಾಂಟಿಕ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ. ಸಿನಿಮಾದ ಶೂಟಿಂಗ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಫೋಟೋ ನೋಡಿದ ಅಭಿಮಾನಿಗಳು ಪ್ರಿಯಾಂಕಗೆ ಏನಾಯ್ತು ಎಂದು ಭಯಪಡುತ್ತಿದ್ದಾರೆ.

ಸಿನಿಮಾದ ಸೀನ್‍ವೊಂದರಲ್ಲಿ ಪ್ರಿಯಾಂಕರನ್ನು ನಟ ಆಡಂ ದಿವೈನ್ ಬಿಗಿಯಾಗಿ ಹಿಡಿದುಕೊಂಡಿರುವ ಫೋಟೋಗಳು ಸದ್ಯ ವೈರಲ್ ಆಗಿವೆ. ಚಿತ್ರವು ರೊಮ್ಯಾಂಟಿಕ್ ಹಾಗು ಕಾಮಿಡಿ ಕಥಾ ಹಂದರವನ್ನು ಒಳಗೊಂಡಿದೆ. ಪ್ರಯಾಂಕ ಆಡಂ ದಿವೈನ್, ಲಿಯಾಮ್ ಹೆಮ್ಸ್ ವರ್ತ್, ರಿಬೆಲ್ ವಿಲ್ಸನ್ ಸೇರಿದಂತೆ ದೊಡ್ಡ ಕಲಾವಿಧರೊಂದಿಗೆ ಕೆಲಸ ಮಾಡ್ತಿದ್ದಾರೆ. ನ್ಯೂಯಾರ್ಕ್ ನಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದೆ.

ನ್ಯೂಯಾಕ್ ವಾಸ್ತುಶಿಲ್ಪಿ ನಟಾಲಿ ಎಂಬವರ ಜೀವನಾಧರಿತ ಸಿನಿಮಾ ಇದಾಗಿದೆ. ಟಾಡ್ ಸ್ಟ್ರಾಸ್ ನಿರ್ದೇಶನದ ಈ ಚಿತ್ರ 2019ರಲ್ಲಿ ವ್ಯಾಲೆಂಟೈನ್ಸ್ ಡೇ ದಿನದಂದು ವಿಶ್ವದಾದ್ಯಂತ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಪ್ರಿಯಾಂಕ ಹಾಲಿವುಡ್‍ನ `ಎ ಕಿಡ್ ಲೈಕ್ ಜೇಕ್’ ಎಂಬ ಮತ್ತೊಂದು ಸಿನಿಮಾಕ್ಕೆ ಸಹಿ ಹಾಕಿದ್ದಾರೆ.