Tuesday, 10th December 2019

ಮದ್ವೆಯಾಗಿ 9 ತಿಂಗ್ಳ ಬಳಿಕ ಪ್ರಿಯಾಂಕಾರಿಂದ ಬೆಡ್‍ರೂಂ ಸೀಕ್ರೆಟ್ ರಿವೀಲ್

ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮದುವೆಯಾದ 9 ತಿಂಗಳ ಬಳಿಕ ತಮ್ಮ ಬೆಡ್‍ರೂಂ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.

ಇತ್ತೀಚೆಗೆ ಪ್ರಿಯಾಂಕಾ ಅವರು ವೆಬ್‍ಸೈಟ್‍ವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಅವರು, “ನಾನು ಮಲಗಿಕೊಂಡು ಎದ್ದಾಗ ನಿಕ್ ನನ್ನ ಮುಖ ನೋಡಲು ಇಷ್ಟಪಡುತ್ತಾರೆ. ಒಂದು ನಿಮಿಷ ಇರಿ ನಾನು ಸ್ವಲ್ಪ ಮಸ್ಕರಾ ಹಾಗೂ ಮಾಯಿಶ್ಚರೈಸರ್ ಹಾಕಿಕೊಳ್ಳುತ್ತೇನೆ ಎಂದು ನಾನು ಹೇಳುತ್ತೇನೆ. ಮಲಗಿಕೊಂಡು ಎದ್ದಾಗ ನನ್ನ ಕಣ್ಣುಗಳು ಭಾರವಾಗಿರುತ್ತದೆ. ಆದರೆ ನಿಕ್‍ಗೆ ಅದೇ ಇಷ್ಟವಾಗುತ್ತದೆ. ನನಗೆ ಇದು ವಿಚಿತ್ರ ಎನಿಸಿದ್ದರೂ ನಾನು ಅವರಿಗೆ ನನ್ನನ್ನು ನೋಡಲು ಅವಕಾಶ ನೀಡುತ್ತೇನೆ” ಎಂದು ಹೇಳಿದ್ದಾರೆ.

ಕಳೆದ ವರ್ಷ ಡಿಸೆಂಬರ್ 1 ಮತ್ತು 2ರಂದು ಪ್ರಿಯಾಂಕಾ ಹಾಗೂ ನಿಕ್ ಜೋನಸ್ ಇಬ್ಬರೂ ತಮ್ಮ ಕುಟುಂಬದವರ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಕ್ರಿಶ್ಚಿಯನ್ ಹಾಗೂ ಹಿಂದೂ ಎರಡೂ ಸಂಪ್ರದಾಯದ ಪ್ರಕಾರ ಸಪ್ತಪದಿ ತುಳಿದಿದ್ದರು. ಪ್ರಿಯಾಂಕಾ ಹಾಗೂ ನಿಕ್ ಒಟ್ಟು ಮೂರು ಆರತಕ್ಷತೆ ಮಾಡಿಕೊಂಡಿದ್ದಾರೆ. ಅಲ್ಲದೇ ತಮ್ಮ ನಾಲ್ಕನೇ ಆರತಕ್ಷತೆಯನ್ನು ಅವರು ಅಮೆರಿಕಾದಲ್ಲಿ ಮಾಡಿಕೊಂಡಿದ್ದರು.

ಮದುವೆಯಾದ ನಂತರ ಪ್ರಿಯಾಂಕಾ ತಮ್ಮ ಪತಿ ನಿಕ್ ಜೋನಸ್ ಜೊತೆ ಅಮೆರಿಕದಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಕಳೆದ ತಿಂಗಳು ಪ್ರಿಯಾಂಕಾ ಫ್ಲೋರಿಡಾದ ಮಿಯಾಮಿಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ತಮ್ಮ-ತಮ್ಮ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿದ್ದಾರೆ. ಕೆಲಸದ ನಡುವೆಯೂ ಇಬ್ಬರು ಒಟ್ಟಿಗೆ ಕಾಲ ಕಳೆಯುತ್ತಾರೆ.

Leave a Reply

Your email address will not be published. Required fields are marked *