Friday, 13th December 2019

Recent News

ಪಟಾಕಿಯಿಂದ ಹೆಚ್ಚಾಗಿದ್ದ ಅಸ್ತಮಾವನ್ನು ಸಿಗರೇಟ್‍ನಿಂದ ಗುಣಪಡಿಸಿಕೊಳ್ಳುತ್ತಿದ್ದಾರೆ- ಪ್ರಿಯಾಂಕ ಟ್ರೋಲ್

ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಜುಲೈ 18ರಂದು 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಿನ್ನೆಯಷ್ಟೇ ಪತಿ ನಿಕ್ ಜೋನಸ್ ಹಾಗೂ ಕುಟುಂಬದವರ ಜೊತೆಗೆ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿಯೇ ಆಚರಿಸಿಕೊಂಡಿದ್ದರು. ಈ ವೇಳೆ ಸಿಗರೇಟ್ ಸೇದುವ ಮೂಲಕ ನೆಟ್ಟಿಗರ ಟೀಕೆಗೆ ಗುರಿಯಾಗಿದ್ದಾರೆ.

ಬಾಲಿವುಡ್ ದೇಸಿ ಗರ್ಲ್ ಸಿನಿಮಾ ಹೊರತಾಗಿಯೂ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ತಮ್ಮ ವಿಭಿನ್ನ ಡ್ರೆಸ್, ಪತಿಯೊಂದಿಗೆ ಖಾಸಗಿ ಫೋಟೋ ಹೀಗೆ ಪ್ರಿಯಾಂಕ ಚೋಪ್ರಾ ಬಾಲಿವುಡ್ ನಿಂದ ದೂರ ಉಳಿದುಕೊಂಡಿದ್ದರೂ ಸುದ್ದಿ ಆಗುತ್ತಲೇ ಇರುತ್ತಾರೆ. ಇದೀಗ ಸಿಗರೇಟ್ ಸೇದುತ್ತಿರುವ ಪ್ರಿಯಾಂಕ ಫೋಟೋ ವೈರಲ್ ಆಗಿದ್ದು, ನೆಟ್ಟಿಗರು ನಟಿಯ ಅಸ್ತಮಾ ಜಾಗೃತಿಯ ಹಳೆಯ ವಿಡಿಯೋ ಜೊತೆ ಹೋಲಿಸಿ ಟ್ರೋಲ್ ಮಾಡಲಾರಂಭಿಸಿದ್ದಾರೆ.

ಪ್ರಿಯಾಂಕ ಚೋಪ್ರಾ ಪತಿ ನಿಕ್ ಜೋನಸ್, ತಾಯಿ ಮಧು ಚೋಪ್ರಾ ಹಾಗೂ ಆತ್ಮೀಯ ಸ್ನೇಹಿತರ ಜೊತೆಗೆ ಕುಳಿತು ಸಿಗರೇಟ್ ಸೇದುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ಫೋಟೋವನ್ನು ಶೇರ್ ಮಾಡುತ್ತಿರುವ ಟ್ವಿಟ್ಟಿಗರು ಪಿಗ್ಗಿ ಕಾಲೆಳೆದಿದ್ದಾರೆ.

ಪ್ರಿಯಾಂಕ ಸಿಗರೇಟ್ ಸೇದುತ್ತಿರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಟ್ವಿಟ್ಟಿಗರು, ದೀಪಾವಳಿಯ ಪಟಾಕಿಯಿಂದ ಹೆಚ್ಚಾಗಿದ್ದ ಅಸ್ತಮಾವನ್ನು ಸಿಗರೇಟ್ ಸೇದುವ ಮೂಲಕ ಗುಣಪಡಿಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಪಿಗ್ಗಿ ಕಳೆದ ವರ್ಷ ದೀಪಾವಳಿಗೂ ಮುನ್ನ ವಿಡಿಯೋ ಬಿಡುಗಡೆ ಮಾಡಿ, ನನಗೆ ಬಾಲ್ಯದಿಂದಲೂ ಅಸ್ತಮಾ ಇದೆ. ನನ್ನಂತಹ ಸಾವಿರಾರು ಅಸ್ತಮಾ ರೋಗಿಗಳಿಗೆ ಪಟಾಕಿಯ ಹೊಗೆಯಿಂದ ತೊಂದರೆಯಾಗುತ್ತದೆ. ಹೀಗಾಗಿ ಪಟಾಕಿ ಸಿಡಿಸದೆ ದೀಪ ಹಚ್ಚಿ, ಲಡ್ಡುಗಳನ್ನು ವಿತರಿಸುವ ಮೂಲಕ ದೀಪಾವಳಿಯನ್ನು ಆಚರಿಸಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದರು.

ನಟಿ ಪ್ರಿಯಾಂಕ ತಮ್ಮ ಮದುವೆಯ ನಂತರ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದ್ದರು. ಇದಕ್ಕೆ ಅವರ ಅಭಿಮಾನಿಗಳು ಕಿಡಿಕಾರಿದ್ದರು. ಈ ಬೆನ್ನಲ್ಲೇ ಸಿಗರೇಟ್ ಸೇದಿ ನೆಟ್ಟಿಗರ ಟ್ರೋಲ್‍ಗೆ ಗುರಿಯಾಗಿದ್ದಾರೆ.

ಪ್ರಿಯಾಂಕ ದೀಪಾವಳಿಯಂದು ಪಟಾಕಿ ಮಾಲಿನ್ಯದಿಂದ ಅಸ್ತಮ ಆಗುತ್ತೆ ಅಂತ ಜ್ಞಾನ ಕೊಟ್ಟಿದ್ದರು. ಆದರೆ ಇಂದು ಸ್ವತಃ ಅಸ್ತಮಾದ ಡೆಮೋ ಕೊಡುತ್ತಿದ್ದಾರೆ ಎಂದು ಶಕುಂತಲಾ ನಟರಾಜ್ ಟ್ವೀಟ್ ಮಾಡಿದ್ದಾರೆ.

ದಯವಿಟ್ಟು ಯಾರೂ ಪ್ರಿಯಾಂಕಾ ಚೋಪ್ರಾ ಅವರನ್ನು ಟ್ರೋಲ್ ಮಾಡಬೇಡಿ. ಅವರು ಸೇದುತ್ತಿರುವುದು ಹೊಸದಾಗಿ ಬಿಡುಗಡೆಯಾಗಿರುವ ಪತಂಜಲಿ ಹರ್ಬಲ್ ಸಿಗರೇಟ್. ಸದ್ಯದಲ್ಲಿಯೇ ಮಾರುಕಟ್ಟೆಗೆ ಬರಲಿದೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

ನಿಮ್ಮ ಮದುವೆ ವೇಳೆ ಪಟಾಕಿ ಹೊಡೆದರೆ ಸಮಸ್ಯೆಯಿಲ್ಲ, ಹುಟ್ಟುಹಬ್ಬದ ವೇಳೆ ಪಟಾಕಿ ಸಿಡಿಸಿದರೂ ಸಮಸ್ಯೆಯಿಲ್ಲ. ದೀಪಾವಳಿ ಸಮಯದಲ್ಲಿ ಪಟಾಕಿ ಹೊಡೆದರೆ ಮಾತ್ರ ತೊಂದರೆಯಾಗುತ್ತದೆ. ಹಿಂದೂ ದ್ರೋಹಿ ಪ್ರಿಯಾಂಕ ಎಂದು ಟ್ವಿಟ್ಟಿಗರು ಕಾಲೆಳೆದಿದ್ದಾರೆ.

ಮಧು ಚೋಪ್ರಾ ಅವರು ಪುತ್ರಿ ಪ್ರಿಯಾಂಕಾಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಚೆನ್ನಾಗಿಯೇ ತಿಳಿಸಿದ್ದಾರೆ. ಅದನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುತ್ತಿರುವುದಕ್ಕೆ ಧನ್ಯವಾದಗಳು. ನಿಮ್ಮ ಆರೋಗ್ಯದ ಬಗ್ಗೆ ಜೋಪಾನ ಎಂದು ನಟ್ಟಿಗರು ವ್ಯಂಗ್ಯವಾಡಿದ್ದಾರೆ.

Leave a Reply

Your email address will not be published. Required fields are marked *