Wednesday, 16th October 2019

Recent News

ನನಗೂ ಒಬ್ಬ ಬಾಯ್ ಫ್ರೆಂಡ್ ಇದ್ದಾರೆ: ಪ್ರಿಯಾಂಕಾ ಚೋಪ್ರಾ

ಮುಂಬೈ: ಬಾಲಿವುಡ್‍ನ ಬಹು ಬೇಡಿಕೆಯ ನಟಿ ಹಾಗೂ  ಮಲ್ಟಿಟಾಸ್ಕ್ ಗಳನ್ನು ಪ್ರೀತಿಸುವ ಬೆಡಗಿ ಪ್ರಿಯಾಂಕಾ ಚೋಪ್ರಾ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ನನಗೂ ಒಬ್ಬ ಬಾಯ್ ಫ್ರೆಂಡ್ ಇದಾರೆ ಎಂದು ಅಧಿಕೃತವಾಗಿ ಹೇಳಿಕೊಂಡಿದ್ದಾರೆ.

ಇತ್ತೀಚಿಗೆ ಯುನಿಸೆಫ್ ರಾಯಭಾರಿಯಾಗಿ ಆಗಮಿಸಿದ್ದ ಅವರು ಸಿರಿಯಾದಿಂದ ನಿರಾಶ್ರಿತ ಮಕ್ಕಳನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ವಿಶ್ವದಲ್ಲಿ ಶಾಂತಿ ಕಾಪಾಡುವುದು ಬಹು ಮುಖ್ಯ, ಯುವಕರು ಇಂದು ಸ್ಪಷ್ಟ ಹಾಗೂ ಉತ್ತಮವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಿಲ್ಲ. ನಿಮ್ಮ ಮಕ್ಕಳಿಗೆ ನೀವು ಬಿಟ್ಟುಹೋಗುವ ಜಗತ್ತು ಯಾವುದು ಗೊತ್ತಾ? ಈ ಜಗತ್ತಿನಲ್ಲಿ ಏನು ನಡೆಯುತ್ತಿದೆ ನೋಡಿ. ಮನುಷ್ಯ ತನ್ನ ಧರ್ಮ, ಚರ್ಮದ ಬಣ್ಣಕ್ಕಾಗಿ ಪರಸ್ಪರ ಹೊಡೆದಾಡಿ ಕೊಳ್ಳುತ್ತಿದ್ದಾರೆ. ಇದರಿಂದ ಮುಗ್ಧ ಮಕ್ಕಳು, ಜನರು ಬಲಿಯಾಗುತ್ತಿದ್ದಾರೆ ಎಂದು ಜಗತ್ತಿನಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ತಮ್ಮ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದರು.

ನಾನು ಶಾಂತಿ ಮತ್ತು ಸಂಭಾಷಣೆಯಿಂದ ವಿಶ್ವದ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ನಂಬಿದ್ದೇನೆ. ನಾನು ಯುದ್ಧವನ್ನು ನಂಬುವುದಿಲ್ಲ. ಆದರೆ ನಾನು ಹೋರಾಡುತ್ತೇನೆ ಸರಿಯಾದುದಕ್ಕೆ ಮಾತ್ರ ಹೋರಾಡುತ್ತೇನೆ ಎಂದು ಪ್ರಿಯಾಂಕಾ ಹೇಳಿದರು.

ವೈಯಕ್ತಿಕ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ತಮ್ಮ ಗೆಳೆಯನ ಬಗ್ಗೆ ಕೇಳಿದಾಗ ದೊಡ್ಡ ಸುಳಿವನ್ನೇ ಬಿಚ್ಚಿಟ್ಟಿದ್ದಾರೆ. ಆದರೆ ಯಾರು ಆ ಅದೃಷ್ಟಶಾಲಿ ಎಂಬುದನ್ನು ಮಾತ್ರ ತಿಳಿಸಿಲ್ಲ. ಈ ಮಾಹಿತಿ ಪಡೆದ ಅಭಿಮಾನಿಗಳು ಯಾರು ಅದೃಷ್ಟಶಾಲಿ ಎಂದು ಗೆಸ್ ಮಾಡುತ್ತಾ ಚಿಂತಿಸುತ್ತಿದ್ದಾರೆ.

ಪ್ರಸ್ತುತ ಚೋಪ್ರಾ ಭಾರತ ಹಾಗೂ ಅಮೆರಿಕದಲ್ಲಿ ಅನೇಕ ಶೂಟಿಂಗ್ ನಡುವೆ ನಿರಂತರವಾಗಿ ಬ್ಯುಸಿಯಾಗಿದ್ದಾರೆ. ಅಲ್ಲದೆ ಹಲವು ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಕೊಂಡಿದ್ದಾರೆ.

Leave a Reply

Your email address will not be published. Required fields are marked *