Monday, 19th August 2019

Recent News

ಮದುವೆ ನಂತರ ಮೊದಲ ಬಾರಿಗೆ ಪತಿಯೊಂದಿಗೆ ಕಾಣಿಸಿಕೊಂಡ ದೇಸಿ ಗರ್ಲ್

ಜೋಧ್‍ಪುರ: ಬಾಲಿವುಡ್ ಹಾಗೂ ಹಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮದುವೆ ನಂತರ ಮೊದಲ ಬಾರಿಗೆ ತಮ್ಮ ಪತಿ ನಿಕ್ ಜೋನ್ಸ್ ಜೊತೆ ಕಾಣಿಸಿಕೊಂಡಿದ್ದಾರೆ.

ಡಿಸೆಂಬರ್ 1 ರಂದು ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನ್ಸ್ ಕ್ರೈಸ್ತ ಧರ್ಮದ ಸಂಪ್ರದಾಯದಂತೆ ವಿವಾಹವಾಗಿದ್ದರು. ನಂತರ ಡಿಸೆಂಬರ್ 2 ರಂದು ಹಿಂದೂ ಸಂಪ್ರದಾಯದಂತೆ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರು.

ಆದರೆ ಇದೇ ಮೊದಲ ಬಾರಿಗೆ ಪ್ರಿಯಾಂಕ ಹಾಗೂ ನಿಕ್ ಮದುವೆಯಾದ ನಂತರ ಜೋಧ್‍ಪುರದಲ್ಲಿ ಅಭಿಮಾನಿಗಳ ಎದುರು ಬಂದಿದ್ದಾರೆ. ಈ ವೇಳೆ ನಿಕ್ ಜೋನ್ಸ್ ಖಾಕಿ ಬಣ್ಣದ ಬಟ್ಟೆ ಧರಿಸಿದ್ದರು ಹಾಗೂ ಪ್ರಿಯಾಂಕ ಚೋಪ್ರಾ ಸೀರೆ ಧರಿಸಿ, ಕೈಗಳಿಗೆ ಬಳೆಗಳನ್ನು ಹಾಕಿಕೊಂಡು ಪೂರ್ತಿ ದೇಸಿ ಲುಕ್‍ನಲ್ಲಿ ತಯಾರಾಗಿದ್ದರು. ಈ ಕ್ಯೂಟ್ ಜೋಡಿಯನ್ನು ಕಂಡು ಅಭಿಮಾನಿಗಳು ಫುಲ್ ಖುಷಿ ಪಟ್ಟಿದ್ದಾರೆ.

ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನ್ಸ್ ಇದೇ ಮಂಗಳವಾರದಂದು ನವದೆಹಲಿಯಲ್ಲಿ ತಮ್ಮ ಆರತಕ್ಷತೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಿಕೊಳ್ಳಲಿದ್ದಾರೆ. ಹಾಗೆಯೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಆಹ್ವಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *