ಮೊದಲ ಕಿಸ್ ನೆನಪು ಮಾಡಿಕೊಂಡು ನಕ್ಕ ನಿಕ್!

-ಪಂಚತಾರಾ ಹೋಟೆಲ್ ಬಾಲ್ಕನಿಯಲ್ಲಿ ಮೊದಲ ಚುಂಬನ

ಮುಂಬೈ: ಕಳೆದ ವರ್ಷ ಅದ್ಧೂರಿಯಾಗಿ ಮದುವೆಯಾಗಿದ್ದ ಬಾಲಿವುಡ್‍ನ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಹಾಗೂ ಅಮೆರಿಕಾದ ಗಾಯಕ ನಿಕ್ ಜೋನ್ಸ್ ಒಂದಲ್ಲ ಒಂದು ಸುದ್ದಿಯಿಂದ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಹಾಗೆಯೇ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ನಿಕ್ ಲವ್ ಸ್ಟೋರಿ ಬಗ್ಗೆ ಹೇಳುತ್ತ, ಮೊದಲ ಕಿಸ್ ನೆನಸಿಕೊಂಡು ಮುಗುಳ್ನಕ್ಕಿದ್ದು ಸದ್ಯ ಎಲ್ಲೆಡೆ ಸುದ್ದಿಯಾಗಿದೆ.

ಇತ್ತೀಚೆಗೆ ನಿಕ್ ಜೋನ್ಸ್ ಹಾಗೂ ಪ್ರಿಯಾಂಕ ಚೋಪ್ರಾ ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಇಬ್ಬರಿಗೂ ಆಟವೊಂದನ್ನು ಆಡಿಸಲಾಗಿತ್ತು. ಈ ಆಟದ ವಿಶೇಷ ಏನಪ್ಪಾ ಅಂದ್ರೆ ಸಂದರ್ಶಕರು ಕೇಳಿದ ಪ್ರಶ್ನೆಗೆ ಬಿಟೌನ್ ಕ್ಯೂಟ್ ಕಪಲ್ಸ್ ಬಿಳಿ ಬೋರ್ಡ್ ಮೇಲೆ ಉತ್ತರ ಬರೆಯಬೇಕಿತ್ತು. ಹೀಗೆ ಆಟವಾಡುತ್ತ, ಪ್ರಿಯಾಂಕ ಚೋಪ್ರಾ ನಮ್ಮ ಮೊದಲ ಕಿಸ್ ಬಗ್ಗೆ ನೆನಪಿದೆಯಾ ಎಂದು ಪ್ರಶ್ನಿಸಿದಾಗ ನಿಕ್ ಮುಗುಳ್ನಗುತ್ತ ರೊಮ್ಯಾಂಟಿಕ್ ಆಗಿ ಉತ್ತರ ನೀಡಿದರು.

ಮುದ್ದಿನ ಪತ್ನಿ ಪ್ರಶ್ನೆ ಕೇಳಿದ ತಕ್ಷಣವೇ ತಡಮಾಡದೆ ನಿಕ್ ಬೋರ್ಡ್ ಮೇಲೆ ತಾವು ಮೊದಲ ಬಾರಿಗೆ ಕಿಸ್ ಮಾಡಿದ ಸ್ಥಳವನ್ನು ಬರೆದರು. ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಮೊದಲ ಬಾರಿಗೆ ಕ್ಯಾಲಿಫೋರ್ನಿಯಾದ 5 ಸ್ಟಾರ್ ಹೋಟೆಲ್‍ನಲ್ಲಿ ಕಿಸ್ ಮಾಡಿದ್ದರಂತೆ. ಹೌದು, ಕ್ಯಾಲಿಫೋರ್ನಿಯಾದ ಬೆವರ್ಲಿ ಬೆಟ್ಟದ ಮೇಲಿರುವ ಹೋಟೆಲ್‍ನ ಬಾಲ್ಕನಿಯಲ್ಲಿ ಕ್ಯೂಟ್ ಕಪಲ್ಸ್ ಮೊದಲ ಬಾರಿ ಚುಂಬಿಸಿದ್ದರು. ಆ ರೊಮ್ಯಾಂಟಿಕ್ ಕ್ಷಣವನ್ನು ನಿಕ್ ನೆನಪಿಸಿಕೊಂಡರು.

ಕಳೆದ ವರ್ಷ ಡಿಸೆಂಬರ್ 1 ಮತ್ತು 2ರಂದು ಪ್ರಿಯಾಂಕಾ ಹಾಗೂ ನಿಕ್ ಇಬ್ಬರೂ ತಮ್ಮ ಕುಟುಂಬದವರ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಕ್ರಿಶ್ಚಿಯನ್ ಹಾಗೂ ಹಿಂದೂ ಎರಡೂ ಸಂಪ್ರದಾಯದ ಪ್ರಕಾರ ಸಪ್ತಪದಿ ತುಳಿದಿದ್ದರು. ಅಲ್ಲದೆ ನವ ದಂಪತಿ ದೆಹಲಿ ಹಾಗೂ ಮುಂಬೈನಲ್ಲಿ ಅದ್ಧೂರಿಯಾಗಿ ಆರತಕ್ಷತೆಯನ್ನೂ ಕೂಡ ಮಾಡಕೊಂಡಿದ್ರು. ಇವರ ಈ ಸಂಭ್ರಮದಲ್ಲಿ ಬಾಲಿವುಡ್ ತಾರೆಯರು ಹಾಗೂ ಗಣ್ಯಾತಿ ಗಣ್ಯ ವ್ಯಕ್ತಿಗಳು ಭಾಗಿಯಾಗಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Leave a Reply

Your email address will not be published. Required fields are marked *