Wednesday, 29th January 2020

ಮದ್ವೆಯಾದ್ಮೇಲೆ ರೊಮ್ಯಾಂಟಿಕ್ ಮೂಡ್‍ನಲ್ಲಿ ಪಿಗ್ಗಿ,ನಿಕ್

-ಎಲ್ಲರ ಸಮ್ಮುಖದಲ್ಲಿ ಮಾಡಿದ್ರು ಕಿಸ್

ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನ್ಸ್ ಅವರ ರೊಮ್ಯಾಂಟಿಕ್ ಫೋಟೋ ಶೂಟ್‍ವೊಂದು ಸಾಕಷ್ಟು ವೈರಲ್ ಆಗುತ್ತಿದೆ.

ಈ ರೊಮ್ಯಾಂಟಿಕ್ ಫೋಟೋಶೂಟ್‍ನಲ್ಲಿ ನವಜೋಡಿ ಒಬ್ಬರಿಗೊಬ್ಬರು ತುಂಬಾ ಸನೀಹವಾಗಿದ್ದಾರೆ. ರೊಮ್ಯಾಂಟಿಕ್ ಫೋಟೋಗಳ ಜೊತೆ ಕೆಲವು ವಿಡಿಯೋಗಳು ಕೂಡ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಪ್ರಿಯಾಂಕ ಹಾಗೂ ನಿಕ್ ಜೊತೆಯಲ್ಲಿ ಡ್ಯಾನ್ಸ್ ಮಾಡಿದ್ದಾರೆ.

ಮತ್ತೊಂದು ಫೋಟೋದಲ್ಲಿ ಪ್ರಿಯಾಂಕ ನಿಕ್ ಭುಜದ ಮೇಲೆ ತಮ್ಮ ತಲೆಯನ್ನಿಟ್ಟಿದ್ದಾರೆ. ಈ ಫೋಟೋದಲ್ಲಿ ಪ್ರಿಯಾಂಕ ಹಾಗೂ ನಿಕ್ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಶೂಟ್‍ನಲ್ಲಿ ಪ್ರಿಯಾಂಕ ಕ್ರೀಮ್, ಪೀಚ್ ಹಾಗೂ ಬಿಳಿ ಬಣ್ಣದ ಉಡುಪು ಧರಿಸಿದರೆ, ನಿಕ್ ಕ್ಯಾಶೂಯಲ್ ಉಡುಪು ಧರಿಸಿದ್ದಾರೆ.

ವೋಗ್ ಮ್ಯಾಗಜಿನ್‍ಗಾಗಿ ಪ್ರಿಯಾಂಕ ಹಾಗೂ ನಿಕ್ ಈ ರೊಮ್ಯಾಂಟಿಕ್ ಫೋಟೋಶೂಟ್ ಮಾಡಿಸಿದ್ದಾರೆ. ಇವರ ಫೋಟೋಶೂಟ್‍ವನ್ನು ಖ್ಯಾತ ಫೋಟೋಗ್ರಾಫರ್ ಏನಿ ಲಿಬಿವಿಟಸ್ ಅವರು ಕ್ಲಿಕ್ಕಿಸಿದ್ದಾರೆ. ಈ ಫೋಟೋದಲ್ಲಿ ಪ್ರಿಯಾಂಕ, ಪತಿ ನಿಕ್ ತೋಳಿನಲ್ಲಿ ಬಂಧಿಯಾಗಿದ್ದಾರೆ.

ಸದ್ಯ ವಿಡಿಯೋದಲ್ಲಿ ಪ್ರಿಯಾಂಕ ವಿವಿಧ ಡ್ರೆಸ್ ಧರಿಸಿ ಫ್ಲೋರ್ ಮೇಲೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ನಿಕ್ ಗಿಟಾರ್ ಭಾರಿಸುತ್ತಿದ್ದಾರೆ. ನಿಕ್ ಗಿಟಾರ್ ಭಾರಿಸುತ್ತಿದ್ದರೆ, ಪ್ರಿಯಾಂಕ ಅದಕ್ಕೆ ತಕ್ಕಂತೆ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಅಮೆರಿಕಾ ಗಾಯಕ ನಿಕ್ ಜೋಧಪುರದ ಉಮೈದ್ ಭವನದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾದ ಜೋಡಿ ಭಾನುವಾರ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *