Saturday, 23rd February 2019

Recent News

ಪೈಲ್ವಾನ್ ಪೋಸ್ ಕೊಟ್ಟ ಪ್ರಿಯಾ ಸುದೀಪ್

ಬೆಂಗಳೂರು: ಇಂದು ಸಮಸ್ತ ನಾಡಿನ ಜನರು ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ. ಇತ್ತ ಸ್ಯಾಂಡಲ್‍ವುಡ್ ಸ್ಟಾರ್ ಗಳು ಕೂಡ ಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ. ಆದರೆ ನಟ ಸುದೀಪ್ ಪತ್ನಿ ಪ್ರಿಯಾ ಅವರು ತನ್ನ ಪತಿ ‘ಪೈಲ್ವಾನ್’ ಸಿನಿಮಾದ ಪೋಸ್ ಕೊಟ್ಟಿದ್ದಾರೆ.

ಪ್ರಿಯಾ ಸುದೀಪ್ ಅವರು ಟ್ವೀಟ್ ಮಾಡಿ ಒಂದು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಆ ಫೋಟೋದಲ್ಲಿ ಸುದೀಪ್ ಪತ್ನಿ ತೊಡೆಯ ಮೇಲೆ ಕುಳಿತಿದ್ದು, ಇಬ್ಬರು ಪೈಲ್ವಾನ್ ಪೋಸ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ಪ್ರಿಯಾ ಅವರು “ಸಂಕ್ರಾಂತಿಯ ಶುಭದಿನದಂದು ನಿಮ್ಮ ಮನ-ಮನೆಗಳಿಗೆ ಬರುತ್ತಿದ್ದಾರೆ ಪೈಲ್ವಾನ್” ಎಂದು ಬರೆದು ‘ಬಂದ ನೋಡೋ ಪೈಲ್ವಾನ್’ ಎಂಬ ಹ್ಯಾಶ್‍ಟ್ಯಾಗ್ ಬಳಸಿದ್ದಾರೆ.

ಈ ಹಿಂದೆಯೇ ಕಿಚ್ಚ ಸುದೀಪ್ ಅವರು ಇಂದು ಸುಮಾರು 4.45ಕ್ಕೆ ‘ಪೈಲ್ವಾನ್’ ಸಿನಿಮಾದ ಕನ್ನಡ ಭಾಷೆಯ ಫಸ್ಟ್ ಟೀಸರ್ ರಿಲೀಸ್ ಮಾಡುವುದಾಗಿ ಟ್ವೀಟ್ ಮೂಲಕ ಹೇಳಿದ್ದರು. ಕಿಚ್ಚ ಸುದೀಪ್ ಅವರು “ನಾಡಿನೆಲ್ಲಾ ಸ್ನೇಹಿತರಿಗೂ ಹಾಗೂ ನಿಮ್ಮ ಕುಟುಂಬದವರಿಗೂ ಈ ನಿಮ್ಮ ಪ್ರೀತಿಯ ಕಿಚ್ಚನಿಂದ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಈ ಸಂಕ್ರಾಂತಿ ಹಬ್ಬದಂದು ನಿಮ್ಮ ಆಸೆಗಳೆಲ್ಲ ಉಕ್ಕಿ ಹರಿಯಲಿ” ಎಂದು ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.

ಗಜಕೇಸರಿ ಕೃಷ್ಣ ನಿರ್ದೇಶನದಲ್ಲಿ ‘ಪೈಲ್ವಾನ್’ ಸಿನಿಮಾ ಮೂಡಿ ಬರುತ್ತಿದ್ದು, ಚಿತ್ರದ ಮೇಕಿಂಗ್ ನೋಡಿ ತೆಲುಗು, ತಮಿಳು, ಮಲೆಯಾಳಂ, ಪಂಜಾಬಿ, ಬೆಂಗಾಲಿ, ಮರಾಠಿ, ಭೋಜ್‍ಪುರಿ ವಿತರಕರು ಡಬ್ಬಿಂಗ್ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಸುದೀಪ್ ಅಪ್ತ ರಿತೇಶ್ ದೇಶಮುಖ್ ಹಿಂದಿಯಲ್ಲಿ ಪೈಲ್ವಾನ್ ರಿಲೀಸ್ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *