ಕರೆನ್ಸಿ ನೋಟುಗಳ ಮೇಲೆ ನೇತಾಜಿ ಫೋಟೋ ಮುದ್ರಿಸಿ: ಹರೇನ್ ಬಿಸ್ವಾಸ್ ಮನವಿ

Advertisements

ಕೊಲ್ಕತ್ತಾ: ಕರೆನ್ಸಿ ನೋಟುಗಳ ಮೇಲೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರವನ್ನು ಮುದ್ರಿಸುವಂತೆ 94 ವರ್ಷದ ಸ್ವಾತಂತ್ರ್ಯ ಹೋರಾಟಗಾರ ಹರೇನ್ ಬಗ್ಚಿ ಬಿಸ್ವಾಸ್ ಕೊಲ್ಕತ್ತಾ ಹೈಕೋರ್ಟ್‍ಗೆ ಮನವಿ ಸಲ್ಲಿಸಿದ್ದಾರೆ.

Advertisements

ಹರೇನ್ ಬಗ್ಚಿ ಬಿಸ್ವಾಸ್ ಅವರು ಕೊಲ್ಕತ್ತಾ ಹೈಕೋರ್ಟ್‍ನಲ್ಲಿ ಕರೆನ್ಸಿ ನೋಟುಗಳ ಮೇಲೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಫೋಟೋವನ್ನು ಮುದ್ರಿಸಿ ಎಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು(ಪಿಐಎಲ್) ಸಲ್ಲಿಸಿದ್ದಾರೆ. ಅವರು ತಮ್ಮ ಪಿಐಎಲ್‍ನಲ್ಲಿ, ‘ಮಹಾತ್ಮ ಗಾಂಧಿ’ ಅವರಂತೆ ಕರೆನ್ಸಿ ನೋಟುಗಳಲ್ಲಿ ನೇತಾಜಿ ಅವರ ಚಿತ್ರವನ್ನು ಏಕೆ ಸೇರಿಸಬಾರದು? ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿ ಅವರ ಕೊಡುಗೆಗೆ ಭಾರತ ಸರ್ಕಾರವು ಸರಿಯಾದ ಮನ್ನಣೆಯನ್ನು ನೀಡಿಲ್ಲ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಭದ್ರಕೋಟೆ ಕೊಡಗಿನಲ್ಲಿ ಮತ್ತೆ ಅರಳಿದ ಬಿಜೆಪಿ

Advertisements

ಈ ಹಿನ್ನೆಲೆ ಕೊಲ್ಕತ್ತಾ ಹೈಕೋರ್ಟ್ ಸೋಮವಾರ ಎಂಟು ವಾರಗಳಲ್ಲಿ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರಕ್ಕೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ್ ಮತ್ತು ನ್ಯಾಯಮೂರ್ತಿ ರಾಜರ್ಷಿ ಭಾರದ್ವಾಜ್ ಅವರ ಪೀಠವು ಸೋಮವಾರ ಅರ್ಜಿಗೆ ಎಂಟು ವಾರಗಳಲ್ಲಿ ಉತ್ತರವನ್ನು ಸಲ್ಲಿಸಲು ಕೇಂದ್ರದಿಂದ ಪ್ರತಿಕ್ರಿಯೆ ಕೇಳಿದೆ. ಹೆಚ್ಚುವರಿ ಸಾಲಿಸಿಟರ್ ಜನರಲ್ ವೈಜೆ ದಸ್ತೂರ್ ಅವರು ಈ ಸಂಬಂಧ ಅಫಿಡವಿಟ್ ಸಲ್ಲಿಸಲು ಸಮಯ ಕೋರಿದ್ದಾರೆ ಎಂದು ಲೈವ್ ಲಾ ತಿಳಿಸಿದೆ.

ಈ ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 21 ರಂದು ನಡೆಯಲಿದೆ.

Advertisements

Advertisements
Exit mobile version