Connect with us

Bengaluru City

ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಕೊಡದೆ ಸತಾಯ್ತಿಸಿರೋ ಪ್ರಾಂಶುಪಾಲ..!

Published

on

ಬೆಂಗಳೂರು: ಹಾಲ್ ಟಿಕೆಟ್ ಸಿಗದೆ ವಿದ್ಯಾರ್ಥಿಗಳು ಹಾಗೂ ಪೋಷಕರು ಪರದಾಡಿದ್ದು, ದಯವಿಟ್ಟು ಹಾಲ್ ಟಿಕೆಟ್ ಕೊಡಿಸಿ ಎಂದು ಪಿಯು ಬೋರ್ಡ್‍ಗೆ ಬಂದಿದ್ದಾರೆ.

ಬೆಂಗಳೂರಿನ ಆರ್ಯ ವಿದ್ಯಾ ಶಾಲಾ ಪಿಯು ಕಾಲೇಜ್ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಕೊಟ್ಟಿಲ್ಲ. ದ್ವಿತೀಯ ಪಿಯುಸಿ ಪರೀಕ್ಷೆಯ ಹಾಲ್ ಟಿಕೆಟ್ ಕೊಡದೆ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳ ಮೇಲೆ ದ್ವೇಷ ಸಾಧಿಸಿದೆ.

ವಿದ್ಯಾರ್ಥಿಗಳು ಪ್ರಥಮ ಪಿಯುಸಿನಲ್ಲಿ ಕ್ಲಾಸಿನಲ್ಲಿ ಕಿರಿಕ್ ಮಾಡಿಕೊಂಡಿದ್ದರು. ಕಾಲೇಜು ಆಡಳಿತ ಮಂಡಳಿ ಕಿರಿಕ್ ಮಾಡಿದ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿದೆ. ಅಲ್ಲದೆ ಹಾಜರಾತಿ ಕಡಿಮೆ ಇದೆ ಎನ್ನುವ ನೆಪದಲ್ಲಿ ಪಿಯು ಬೋರ್ಡ್‍ಗೆ ಹಾಲ್ ಟಿಕೆಟ್ ವಾಪಸ್ ಕಳುಹಿಸಿದೆ.

ನಾನು ರೆಗ್ಯೂಲರ್ ಆಗಿ ಕ್ಲಾಸಿಗೆ ಬಂದಿದ್ದೇನೆ. ಬೇಕಾದರೆ ನಾನು ಕ್ಲಾಸಿಗೆ ಬಂದಿದ್ದೀನೋ ಇಲ್ವೋ ಎಂದು ಸಿಸಿಟಿವಿ ಚೆಕ್ ಮಾಡಿ ಎಂದು ಹಾಲ್ ಟಿಕೆಟ್ ವಂಚಿತ ವಿದ್ಯಾರ್ಥಿ ಸತೀಶ್ ಹೇಳಿದ್ದಾನೆ. ಪ್ರಿನ್ಸಿಪಾಲ್ ಈಶ್ವರಯ್ಯ ಹಾಲ್ ಟಿಕೆಟ್ ನೀಡದೆ ಸತಾಯಿಸುತ್ತಿದ್ದು, ಮೂರು ದಿನಗಳಿಂದ ಫೋನ್ ಸ್ವಿಚ್ಛ್ ಆಫ್ ಮಾಡಿ ಕಾಲೇಜಿಗೆ ರಜೆ ಹಾಕಿದ್ದಾರೆ.

ಹಾಲ್ ಟಿಕೆಟ್ ನೀಡದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪಿಯು ಬೋರ್ಡ್‍ಗೆ ಬಂದ ಪ್ರಿನ್ಸಿಪಾಲ್ ಈಶ್ವರಯ್ಯ, ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಲು ನಕಾರ ಮಾಡಿದ್ದಾರೆ. ಅಲ್ಲದೇ ಉಡಾಫೆ ಮಾತನಾಡ್ತಾ ಅಲ್ಲಿಂದ ಹೊರಟು ಹೋಗಿದ್ದಾರೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಕೂಡ ಪ್ರಿನ್ಸಿಪಾಲ್ ಹಿಂದೆ ಹೋದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv