Crime
ಸರ್ಕಾರಿ ಉದ್ಯೊಗ ಕೊಡಿಸೋದಾಗಿ 18 ಲಕ್ಷ ದೋಚಿದ ನಿವೃತ್ತ ಪ್ರಾಂಶುಪಾಲ

– ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ
ನವದೆಹಲಿ: ನಿವೃತ್ತ ಪ್ರಾಂಶುಪಾಲನೊಬ್ಬ ಸರ್ಕಾರಿ ಶಾಲಾ ಶಿಕ್ಷಕರ ಹುದ್ದೆಯನ್ನು ಕೊಡಿಸುವುದಾಗಿ ಮಹಿಳೆಯಿಂದ 18 ಲಕ್ಷ ರೂ. ದೋಚಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಆರೋಪಿಯನ್ನು ಆದಿತ್ಯ ಶಂಕರ್ ವ್ಯಾಟ್ಸ್ ಎಂದು ಗುರುತಿಸಲಾಗಿದೆ. ಈತ ಶಕರ್ಪುರದ ಸರ್ವೋದಯ ಬಾಲ ವಿದ್ಯಾಲಯದ ನಿವೃತ್ತ ಪ್ರಾಂಶುಪಾಲ. ಸರ್ಕಾರಿ ನೌಕರಿ ಕೊಡಿಸುವ ನೆಪದಲ್ಲಿ 18 ಲಕ್ಷ ರೂ. ಹಣ ದೋಚಿದ್ದಾನೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಿರಿಯ ಮಟ್ಟದ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾನೆ ಎಂದು ಮಹಿಳೆ ಶಕರ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಆರೋಪಿ ವ್ಯಾಟ್ಸ್ ಬಂಧನದಿಂದ ತಪ್ಪಿಸಿಕೊಳ್ಳುವ ಶಕರ್ಪುರದ ಮನೆಯನ್ನು ಬಿಟ್ಟು ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ವಾಸಿಸವಾಗಿದ್ದನು. ಫೋನ್ ಸಂಖ್ಯೆಯನ್ನು ಸಹ ಬದಲಾಯಿಸಿ ತಲೆ ಮರೆಸಿಕೊಂಡು ಓಡಾಡುತ್ತಿದ್ದನು. ಜಾಮೀನು ರಹಿತ ವಾರಂಟ್ ಹೊರಡಿಸಿ ವ್ಯಾಟ್ಸ್ನನ್ನು ಗಾಜಿಯಾಬಾದ್ನಲ್ಲಿ ಬಂಧಿಸಲಾಗಿದೆ ಎಂದು ಡಿಸಿಪಿ ಭೀಷಮ್ ಸಿಂಗ್ ಹೇಳಿದ್ದಾರೆ.
