Connect with us

Latest

ಇನ್ನು ಮುಂದೆ ಬೆಂಗಳೂರಿನಿಂದ ಶಿರಡಿಗೆ ಕೆಲವೇ ಗಂಟೆಗಳಲ್ಲಿ ಕ್ರಮಿಸಬಹುದು!

Published

on

ಅಹಮದ್‍ನಗರ: ಬೆಂಗಳೂರಿನಿಂದ ಶಿರಡಿಗೆ ಹೋಗುವ ಭಕ್ತರಿಗೆ ಗುಡ್ ನ್ಯೂಸ್. ಇನ್ನು ಮುಂದೆ ನೀವು ಕಡಿಮೆ ಅವಧಿಯಲ್ಲಿ ಬಾಬಾ ದರ್ಶನ ಪಡೆಯಬಹುದು.

ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರು ಇಂದು ನೂತನವಾಗಿ ನಿರ್ಮಾಣಗೊಂಡಿದ್ದ ಶಿರಡಿ ವಿಮಾನ ನಿಲ್ದಾಣವನ್ನು ನಗರದಲ್ಲಿ ಉದ್ಘಾಟಿಸಿದ್ದಾರೆ. ಉದ್ಘಾಟನೆಯ ಬಳಿಕ ಅಲಯನ್ಸ್ ಏರ್ ವಿಮಾನದಲ್ಲಿ ಪ್ರಥಮ ಬಾರಿಗೆ ಶಿರಡಿಯಿಂದ ಮುಂಬೈಗೆ ಹಾರಾಟ ಮಾಡಿದ್ದಾರೆ.

ಶ್ರೀ ಸಾಯಿಬಾಬಾ ಸಮಾಧಿಯ ಶತಮಾನೋತ್ಸವದ ಆಚರಣೆಯ ಕಾರ್ಯಕ್ರಮವು ಆರಂಭವಾಗಲಿದ್ದು, ಈ ಆಚರಣೆಗೆ ವಿಶ್ವದಾದ್ಯಂತ ಸುಮಾರು 71.81 ಕೋಟಿ (11 ಮಿಲಿಯನ್) ಭಕ್ತರು ಶಿರಡಿಗೆ ಆಗಮಿಸುತ್ತಾರೆ. ಆದ್ದರಿಂದ ಮಹಾರಾಷ್ಟ್ರ ವಿಮಾನ ನಿಲ್ದಾಣ ಅಭಿವೃದ್ಧಿ (ಎಂಎಡಿಸಿ) ಅಭಿವೃದ್ಧಿ ಪಡಿಸಿದ ವಿಮಾನ ನಿಲ್ದಾಣವನ್ನು ಇಂದು ಉದ್ಘಾಟನೆಯಾಗಿದೆ.

ಪಶ್ಚಿಮ ಮಹಾರಾಷ್ಟದ ಸಣ್ಣ ಪಟ್ಟಣವು 20 ನೇ ಶತಮಾನದಲ್ಲಿ ಸಂತ ಸಾಯಿಬಾಬಾರ ಸಮಾಧಿ ಸ್ಥಳವಾಗಿ ವಿಶ್ವಪ್ರಸಿದ್ಧಿ ಪಡೆದಿತ್ತು. ಇಂದು ಎಲ್ಲಾ ಸಮುದಾಯಗಳ ಜನರು ಬಾಬಾ ಅವರನ್ನು ಪೂಜಿಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಶಿರಡಿಗೆ ಆಗಮಿಸುತ್ತಿದ್ದಾರೆ.

ಮುಂಬೈನಿಂದ ಶಿರಡಿಗೆ ಸುಮಾರು 240 ಕಿ.ಮೀ ದೂರವಿದ್ದು ರಸ್ತೆ ಮಾರ್ಗದಲ್ಲಿ ಆರು ಗಂಟೆಗಳ ಕಾಲ ಭಕ್ತರು ಪ್ರಯಾಣಿಸಬೇಕಿತ್ತು. ಆದರೆ ಈ ಹೊಸ ವಿಮಾನ ನಿಲ್ದಾಣದಿಂದ ಕೇವಲ 45 ನಿಮಿಷದಲ್ಲಿ ಮುಂಬೈನಿಂದ ಶಿರಡಿಗೆ ಪ್ರಯಾಣಿಸಬಹುದು.

ಈ ಉದ್ಘಾಟನಾ ಸಮಾರಂಭದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಸಿ.ವಿ. ರಾವ್, ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್, ಪ್ರತಿಪಕ್ಷ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್, ಎಂಎಡಿಸಿ ಉಪಾಧ್ಯಾಕ್ಷ , ಎಂಡಿ ಸುರೇಶ್ ಕಕಾನಿ ಹಾಗೂ ಕೇಂದ್ರ ಮತ್ತು ರಾಜ್ಯದ ಉನ್ನತ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಬೆಂಗಳೂರಿನಿಂದ ಖಾಸಗಿ ಸಂಸ್ಥೆ ಇಂಡಿಗೋ ಶಿರಡಿಗೆ ವಿಮಾನಯಾನ ಸೇವೆ ಶೀಘ್ರದಲ್ಲೇ ಆರಂಭವಾಗಲಿದೆ.