Friday, 13th December 2019

108 ವಾಹನದಲ್ಲೇ ಮಗುವಿಗೆ ಜನ್ಮ ನೀಡಿದ್ರು ಗರ್ಭಿಣಿ

ವಿಜಯಪುರ: ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ 108 ವಾಹನದಲ್ಲೇ ತುಂಬು ಗರ್ಭಿಣಿಗೆ ಹೆರಿಗೆ ಆಗಿರುವ ಅಪರೂಪದ ಘಟನೆ ವಿಜಯಪುರದಲ್ಲಿ ನಡೆದಿದೆ.

ಸಿಂದಗಿ ತಾಲೂಕಿನ ದೇವೂರ ಗ್ರಾಮದ ಸಂಗೀತಾ ಪವಾರ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ದೇವರಹಿಪ್ಪರಗಿಯಿಂದ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಗರ್ಭಿಣಿಯನ್ನು ಸಾಗಿಸುವ ಮಾರ್ಗ ಮಧ್ಯೆ ವಾಹನದಲ್ಲೇ ವಿಜಯಪುರ ನಗರದ ಗೋಳಗುಮ್ಮಟ ಬಳಿ ಹೆರಿಗೆ ಆಗಿದೆ. ಸದ್ಯಕ್ಕೆ ತಾಯಿ-ಮಗು ಇಬ್ಬರು ಸುರಕ್ಷಿತವಾಗಿದ್ದಾರೆ.

ಸಂಗೀತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, 108 ವಾಹನದಲ್ಲೇ ಶೋಭಾ ಕೋಳಿ ಹಾಗೂ ಪೈಲಟ್ ವಿಶ್ವನಾಥ ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ಹೆರಿಗೆ ಬಳಿಕ ತಾಯಿ-ಮಗುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಲಾಗುತ್ತಿದೆ. ಸುರಕ್ಷಿತ ಹೆರಿಗೆ ಮಾಡಿಸಿದ್ದಕ್ಕೆ ಸಂಗೀತಾ ಕುಟುಂಬಸ್ಥರು 108 ಸಿಬ್ಬಂದಿಗೆ ಧನ್ಯವಾದ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *