Thursday, 12th December 2019

ಗರ್ಭಿಣಿ ಆದ ನಂತ್ರ ‘ದಿ-ವಿಲನ್’ ಬೆಡಗಿಯ ಅಧಿಕೃತ ನಿಶ್ಚಿತಾರ್ಥ

ಲಂಡನ್: ಬ್ರಿಟಿಷ್ ಬ್ಯೂಟಿ ನಟಿ ಆಮಿ ಜಾಕ್ಸನ್ ಅವರು ಮೇ 5ರಂದು ಲಂಡನ್‍ನಲ್ಲಿರುವ ತಮ್ಮ ಮನೆಯಲ್ಲೇ ಪ್ರಿಯಕರ ಜಾರ್ಜ್ ಪನಯೌಟು ಜೊತೆ ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಆಮಿ ಭಾನುವಾರ ತಮ್ಮ ಸ್ನೇಹಿತರು ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಕಾರ್ಜ್ ಪನಯೌಟು ಜೊತೆ ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸದ್ಯ ಅವರ ನಿಶ್ಚಿತಾರ್ಥದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಆಮಿ ತನ್ನ ನಿಶ್ಚಿತಾರ್ಥದಲ್ಲಿ ಕಪ್ಪು ಹಾಗೂ ಬಿಳಿ ಬಣ್ಣದ ಗೌನ್ ಧರಿಸಿದ್ದರು. ವೈರಲ್ ಆಗಿರುವ ಫೋಟೋ ಹಾಗೂ ವಿಡಿಯೋಗಳಲ್ಲಿ ಆಮಿ ತನ್ನ ಪ್ರಿಯಕರ, ಗೆಳೆಯರ ಹಾಗೂ ಸಂಬಂಧಿಕರ ಜೊತೆ ಸೇರಿ ನಿಶ್ಚಿತಾರ್ಥವನ್ನು ಸಂಭ್ರಮಿಸುತ್ತಿದ್ದಾರೆ.

ಆಮಿ 2019 ಜನವರಿ 1ರಂದು ತಮ್ಮ ಬಾಯ್ ಫ್ರೆಂಡ್ ಜಾರ್ಜ್ ಪನಯೌಟು ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ತಿಳಿಸಿದ್ದರು. ಈ ಜೋಡಿ 2020ಕ್ಕೆ ದಾಂಪತ್ಯಕ್ಕೆ ಕಾಲಿಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಆಮಿ ಜಾಕ್ಸನ್ ಅವರು ತಾವು ಮಗುವಿಗಾಗಿ ಕಾಯುತ್ತಿರುವ ಬಗ್ಗೆ ಇನ್ಸ್ ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದರು. ಮಾರ್ಚ್ 31 ರಂದು ಇಂಗ್ಲೆಂಡಿನಲ್ಲಿ ತಾಯಂದಿರ ದಿನವನ್ನಾಗಿ ಆಚರಿಸುತ್ತಾರೆ. ಹೀಗಾಗಿ ಅಂದಿನ ದಿನವೇ ನಟಿ ಆಮಿ ತಾವು ತಾಯಿಯಾಗುವ ವಿಷಯವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು.

ನಟಿ ಆಮಿ ಜಾಕ್ಸನ್ ಅವರು ಸ್ಯಾಂಡಲ್‍ವುಡ್ ನಲ್ಲಿ ಪ್ರೇಮ್ ನಿರ್ದೇಶನದ ಮತ್ತು ಕಿಚ್ಚ ಸುದೀಪ್ ಹಾಗೂ ಶಿವರಾಜ್‍ಕುಮಾರ್ ಅಭಿನಯದ `ದಿ ವಿಲನ್’ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು.

Leave a Reply

Your email address will not be published. Required fields are marked *