Connect with us

Chikkamagaluru

ರಾಜ್ಯದಲ್ಲಿ 7 ಸಾವಿರ ಪೊಲೀಸರಿಗೆ ಕೊರೊನಾ, 55 ಸಾವು

Published

on

-ಕೋವಿಡ್ ನಿಯಂತ್ರಣದಲ್ಲಿ ಪೊಲೀಸರಿಗೆ ಸೂದ್ ಫುಲ್ ಮಾರ್ಕ್ಸ್
-ಹೋಂ ಸ್ಟೇಗಳಲ್ಲಿ ಮಾದಕ ದ್ರವ್ಯ ಉಪಯೋಗಿಸಿದರೆ ಮಾಲೀಕರೇ ಹೊಣೆ

ಚಿಕ್ಕಮಗಳೂರು: ಕೊರೊನಾ ನಿಯಂತ್ರಿಸುವಲ್ಲಿ ಜಿಲ್ಲಾ ಪೊಲೀಸರ ಕಾರ್ಯ ಶ್ಲಾಘನೀಯ ಅವರಿಗೆ ಅಭಿನಂದನೆ ಹಾಗೂ ಕೃತಜ್ಞತೆ ಹೇಳಲು ಬಂದಿದ್ದೇನೆ ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ.

ಜಿಲ್ಲೆಗೆ ಭೇಟಿ ನೀಡಿದ್ದ ಪ್ರವೀಣ್ ಸೂದ್ ಅವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿದರು. ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ತುಂಬಾ ಚೆನ್ನಾಗಿತ್ತು. ಈಗ ಸಂಖ್ಯೆ ಹೆಚ್ಚಾಗ್ತಿರೋದಕ್ಕೆ ಕಾರಣ ಬೇರೆ ಇದೆ. ಲಾಕ್‍ಡೌನ್ ಓಪನ್ ಆಗಿದೆ. ಎಲ್ಲಾ ಕಡೆಯಿಂದ ಜನ ಬರುತ್ತಿದ್ದಾರೆ. ಆದ್ದರಿಂದ ಪ್ರಕರಣ ಹೆಚ್ಚಾಗುತ್ತಿದೆ ಎಂದರು.

ಲಾಕ್‍ಡೌನ್ ವೇಳೆ ನಮ್ಮ ಸಿಬ್ಬಂದಿಗಳ ಕೆಲಸ ತುಂಬಾ ಚೆನ್ನಾಗಿತ್ತು. ರಾಜ್ಯದ ಬೇರೆ ಜಿಲ್ಲೆಯಲ್ಲಿ ಪೊಲೀಸರಿಗೆ ತೀವ್ರ ತೊಂದರೆಗಳಾಗಿವೆ. ಈವರೆಗೆ ರಾಜ್ಯದಲ್ಲಿ ಏಳು ಸಾವಿರ ಪೊಲೀಸರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, 55 ಜನ ಸಾನ್ನಪ್ಪಿದ್ದಾರೆ. ಆದರೆ, ಚಿಕ್ಕಮಗಳೂರಿನಲ್ಲಿ ಉತ್ತಮ ನಿರ್ವಹಣೆ ಮಾಡಿದ್ದರಿಂದ ಈ ರೀತಿಯ ದುಖಃದ ಘಟನೆ ಒಂದೇ ಒಂದು ನಡೆದಿದೆ. ಮುಂದೆ ಹೀಗಾಗಬಾರದು. ಏಕೆಂದರೆ ಇನ್ನೂ ಮುಂದೇ ಮುಂದಕ್ಕೆ ಕೋವಿಡ್ ಕೂಡ ನಡೆಯುತ್ತೆ. ಕೆಲಸವೂ ನಡೆಯುತ್ತೆ. ಈಗಾಗಲೇ ಶೇಕಡ ನೂರರಷ್ಟು ಪೊಲೀಸ್ ಕೆಲಸ ಆರಂಭವಾಗಿದೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ ಸುರಕ್ಷತೆಯನ್ನ ಗಮನದಲ್ಲಿ ಇಟ್ಟುಕೊಂಡು ಹೊಸ ತಂತ್ರಜ್ಞಾನದ ಜೊತೆ ಹೇಗೆ ಕೆಲಸ ಮಾಡಬೇಕೆಂದು ಚರ್ಚೆ ಮಾಡಲಾಗಿದೆ ಎಂದರು.

ಪೊಲೀಸ್ ಕೆಲಸ ಮೊದಲಿನಂತಿಲ್ಲ: ಪೊಲೀಸ್ ಕೆಲಸ ಈಗ ಮೊದಲಿನಂತೆ ಇಲ್ಲ. ಯಾರನ್ನೇ ಅರೆಸ್ಟ್ ಮಾಡಿದರೂ ಮೊದಲು ಕೋರ್ಟಿಗೆ ಕರೆದುಕೊಂದು ಹೋಗುತ್ತಿದ್ದೇವೂ, ಈಗ ಅದು ನಿಂತಿದೆ. ವಿಡಿಯೋ ಮೂಲಕ ನ್ಯಾಯಾಧೀಶರ ಎದುರು ಹಾಜರುಪಡಿಸುತ್ತಿದ್ದೇವೆ. ಅದೇ ರೀತಿ, ಕೆಲವೊಮ್ಮೆ ಎವಿಡೆನ್ಸ್ ಕೊಡಬೇಕಾಗುತ್ತೆ. ಅದು ಕೂಡ ವಿಡಿಯೋ ಮೂಲಕ ಆಗುತ್ತಿದೆ. ವೆರಿಫಿಕೇಶನ್, ಸರ್ಟಿಫಿಕೇಟ್‍ಗೆ ಜನ ಬರುತ್ತಿದ್ದರು. ಈಗ ಅದನ್ನು ಸಂಪೂರ್ಣವಾಗಿ ಆನ್‍ಲೈನ್ ಮಾಡಲಾಗಿದೆ. ಮುಂದಕ್ಕೂ ತಂತ್ರಜ್ಞಾನ ಬಳಸಿ ಹೆಚ್ಚು ಆನ್‍ಲೈನ್ ಕೆಲಸ ಮಾಡುತ್ತೇವೆ ಎಂದರು.

ನಮ್ಮ ಸಿಬ್ಬಂದಿಗಳಿಗೆ ಕೋವಿಡ್ ಬಂದರೆ ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ಯಾರು ಕೊರೊನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ, ಅವರಿಗೆ ಸರ್ಕಾರ 48 ಗಂಟೆಯಲ್ಲಿ 30 ಲಕ್ಷ ರೂ. ತಲುಪಿಸಿದೆ. ಅವರು ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ ಕೂಡ ನಮ್ಮದೆ ಎಂದರು.

ಹೋಂ ಸ್ಟೇಗಳ ಮೇಲೆ ನಿಗಾ: ಕಾಫಿನಾಡು ಚಿಕ್ಕಮಗಳೂರು ಪ್ರವಾಸಿ ತಾಣವಾಗಿದ್ದು, ಸಾವಿರಾರು ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡುತ್ತಾರೆ. ಹೋಂ ಸ್ಟೇಗಳ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ. ಒಂದು ವೇಳೆ, ಹೋಂ ಸ್ಟೇಗಳಲ್ಲಿ ಮಾದಕ ದ್ರವ್ಯದ ಕೇಸ್ ಬಂದರೆ ಅದರ ಮಾಲೀಕರೇ ಹೊಣೆಯಾಗುತ್ತಾರೆ. ಬರುವಂತಹ ಪ್ರವಾಸಿಗರು ಅವುಗಳನ್ನು ಬಳಸಿದ ಮಾಹಿತಿ ನೀಡಿದರೆ ಅವರಿಗೆ ಬಹುಮಾನ ಕೊಡಲಾಗುವುದು ಎಂದರು.

ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದರೂ ಕೂಡ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು. ಡ್ರಗ್ಸ್ ಕಂಟ್ರೋಲ್ ಮಾಡೋದು ಕೇವಲ ಒಂದು ಠಾಣೆ ಅಥವಾ ಒಂದು ವಿಂಗ್ ಕೆಲಸ ಮಾತ್ರವಲ್ಲ. ಮಾದಕ ದ್ರವ್ಯವನ್ನು ನಿಯಂತ್ರಿಸುವುದು ಪ್ರತಿಯೊಂದು ಠಾಣೆಯ ಕೆಲಸ. ರಾಜ್ಯದ ಯಾವುದೇ ಠಾಣೆಯ ಲಿಮಿಟ್‍ನಲ್ಲಿ ಡ್ರಗ್ಸ್ ಹಾವಳಿ ಇರಬಾರದು ಎಂದರು.

Click to comment

Leave a Reply

Your email address will not be published. Required fields are marked *