Connect with us

Bengaluru City

ಹೆಚ್ಚಿನ ಮಾಹಿತಿ ಕೇಳಿದ್ದಾರೆ, ಮತ್ತೆ ಶುಕ್ರವಾರ ವಿಚಾರಣೆಗೆ ಹೋಗ್ತೀನಿ – ಸಂಬರಗಿ

Published

on

– ಜಮೀರ್‌ಗೂ ಡ್ರಗ್ಸ್‌ಗೂ ಸಂಬಂಧ ಇದೆ ಅಂತ ನಾನು ಹೇಳಿಲ್ಲ
– ನಾನು ಏನೂ ಸಾಕ್ಷ್ಯ ಕೊಟ್ಟಿಲ್ಲ
– ಕೊಂಲಬೋಗೆ ಹೋಗಿರುವುದನ್ನ ಜಮೀರ್ ಒಪ್ಪಿಕೊಂಡಿದ್ದಾರೆ

ಬೆಂಗಳೂರು: ಮತ್ತೆ ಶುಕ್ರವಾರ ವಿಚಾರಣೆಗೆ ಬರುವಂತೆ ಸಿಸಿಬಿ ತನಿಖಾಧಿಕಾರಿಗಳು ನನಗೆ ಸೂಚಿಸಿದ್ದಾರೆ ಎಂದು ಉದ್ಯಮಿ, ಸಿನಿ ವಿತರಕ ಪ್ರಶಾಂತ್ ಸಂಬರಗಿ ಹೇಳಿದ್ದಾರೆ. ಇದನ್ನೂ ಓದಿ: ಜಮೀರ್ ಆಸ್ತಿಯನ್ನು ಸರ್ಕಾರಕ್ಕೆ ಕೊಡಿಸುತ್ತಿದ್ದೇನೆ: ಪ್ರಶಾಂತ್ ಸಂಬರಗಿ

ಸಿಸಿಬಿ ವಿಚಾರಣೆ ಮುಗಿದ ನಂತರ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪ್ರಶಾಂತ್ ಸಂಬರಗಿ, ತನಿಖಾಧಿಕಾರಿಗಳ ಮುಂದೆ ಕೊಟ್ಟ ದಾಖಲೆಗಳು ಸಮರ್ಪಕವಾಗಿಲ್ಲ ಅಂದಿದ್ದಾರೆ. ಸಂಪೂರ್ಣವಾದ ದಾಖಲೆಗಳನ್ನು ತರುವಂತೆ ಹೇಳಿದ್ದಾರೆ. ಅಲ್ಲದೇ ಮತ್ತೆ ಶುಕ್ರವಾರವೂ ಬರುವಂತೆ ಹೇಳಿದ್ದು, ನೋಟಿಸ್ ಕೊಡುತ್ತೇವೆ ಎಂದಿದ್ದಾರೆ. ವಿಡಿಯೋ ಬಿಡುಗಡೆ ಮಾಡಿರುವುದು ತೋರಿಸುವಂತೆ ಹೇಳಿದರು. ನಾನು ನನ್ನ ಬಳಿ ಇರುವ ವಿಡಿಯೋವನ್ನು ತೋರಿಸಿದೆ. ಆದರೆ ಆ ವಿಡಿಯೋ ನಮ್ಮ ಬಳಿಯೂ ಇದೆ, ನಿಮ್ಮ ಬಳಿ ಇರುವುದು ಕೊಡಿ ಅಂದರು. ಆಗ ನಾನು ನನ್ನ ಬಳಿಯೂ ಇದೆ ವಿಡಿಯೋ ಇರುವುದು ಅಂತ ಹೇಳಿದ್ದೇನೆ ಎಂದು ಅವರು ತಿಳಿಸಿದರು.

ನಾನು ಫೇಸ್‍ಬುಕ್, ಟ್ವಿಟ್ಟರ್ ಯಾವುದೇ ಸೋಶಿಯಲ್ ಮೀಡಿಯಾದಲ್ಲಿ ಜಮೀರ್‌ಗೂ ಡ್ರಗ್ಸ್‌ಗೂ ಸಂಬಂಧ ಇದೆ ಅಂತ ನಾನು ಹೇಳಿಲ್ಲ. ಜಮೀರ್ ಕೊಲಂಬೋಗೆ ಹೋಗಿದ್ದರು ಎಂದು ಹೇಳಿದ್ದೆ ಎಂದು ಪ್ರಶಾಂತ್ ಸಂಬರಗಿ ಈ ವೇಳೆ ಸ್ಪಷ್ಟಪಡಿಸಿದ್ದರು.

ವಿಚಾರಣೆ ವೇಳೆ ಜಮೀರ್ ನಾನು ಶ್ರೀಲಂಕಾ ಹೋಗಿದ್ದೇನೆ ಅಂತ ಒಪ್ಪಿಕೊಂಡಿದ್ದಾರೆ ಅನ್ನೋ ವಿಚಾರ ಟಿವಿಯಲ್ಲಿ ನೋಡಿದೆ. ಹೀಗಾಗಿ ನಾನು ಮಾಡಿರುವ ಆರೋಪಕ್ಕೆ ಉತ್ತರ ಇಲ್ಲೇ ಸಿಕ್ಕಿದೆ. ನಾನು ಯಾವ ದಾಖಲೆಗಳನ್ನು ಕೊಟ್ಟಿದ್ದೇನೆ ಎನ್ನುವುದನ್ನು ಹೇಳುವುದಕ್ಕೆ ಆಗಲ್ಲ. ನಾನು ಏನೂ ಸಾಕ್ಷ್ಯ ಕೊಟ್ಟಿಲ್ಲ ಎಂದೇ ತಿಳಿದುಕೊಳ್ಳಿ, ನಾನು ಏನೂ ಸಾಕ್ಷ್ಯ ಕೊಟ್ಟಿಲ್ಲ ಎಂದರು.

ಜಮೀರ್ ಕೊಲಂಬೋಗೆ ಹೋಗಿದ್ದರು ಎಂದು ಹೇಳಿದ್ದೆ. ಅದನ್ನು ಈಗ ಅವರೇ ಒಪ್ಪಿಕೊಂಡಿದ್ದಾರೆ. ಈಗ ಶೇಖ್ ಫಾಝಿಲ್ ಬಗ್ಗೆ ವಿಚಾರಣೆ ಮಾಡಿ ಅಂತ ಮಾತ್ರ ನಾನು ಹೇಳಿದ್ದೇನೆ. ಸಾಕಷ್ಟು ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಪೂರಕ ಸಾಕ್ಷ್ಯ ಕೊಡಿ ಅಂದರು. ನಾನು ನನ್ನ ಬಳಿ ಇರುವಷ್ಟು ಮಾಹಿತಿಯನ್ನು ಕೊಟ್ಟಿದ್ದೇನೆ. ಆದರೆ ಸಿಸಿಬಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಕೇಳಿದ್ದಾರೆ. ಹೀಗಾಗಿ ಶುಕ್ರವಾರ ಮತ್ತೆ ವಿಚಾರಣೆಗೆ ಕರೆಯುತ್ತಾರೆ ಎಂದು ಸಂಬರಗಿ ತಿಳಿಸಿದರು.

ನಾನು ರಾಹುಲ್ ಜೊತೆ ಇದ್ದ ಫೋಟೋಗಳ ಬಗ್ಗೆಯೂ ಕೇಳಿದರು ಎಂದರು. ನಾನು ಸಂಜನಾ ಬಗ್ಗೆ ಯಾವುದೇ ಸಾಕ್ಷ್ಯಗಳನ್ನು ಕೊಟ್ಟಿಲ್ಲ. ಆದರೆ ಅವರ ಟಿಕ್‍ಟಾಕ್ ವಿಡಿಯೋಗಳು, ದುಬೈಗೆ ಹೋಗಿರುವ ಮಾಹಿತಿ ಹೇಳಿದೆ. ಬೇರೆ ಯಾವುದೇ ನಟಿ-ನಟರ ಬಗ್ಗೆ ಮಾಹಿತಿ ಕೊಟ್ಟಿಲ್ಲ. ನಾನು ಬಿಜೆಪಿ ವಕ್ತಾರ ಎಂದು ಹೇಳುತ್ತಿದ್ದಾರೆ. ಆದರೆ ನಾನು ಕಾಂಗ್ರೆಸ್ ಅವರನ್ನೂ ಭೇಟಿ ಮಾಡಿದರೆ ಕಾಂಗ್ರೆಸ್ ವಕ್ತಾರ ಎಂದು ಹೇಳುತ್ತಾರೆ. ರಾಜಕೀಯಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ, ರಾಜಕೀಯ ಪ್ರೇರಿತವಾಗಿ, ಈ ಉದ್ದೇಶಪೂರವಾಗಿ ಈ ಅಭಿಯಾನ ನಡೆಸುತ್ತಿಲ್ಲ ಎಂದು ಪ್ರಶಾಂತ್ ಆಕ್ರೊಶದಿಂದ ಮಾತನಾಡಿದರು.

ಜಮೀರ್ ಕೊಲಂಬೋಕ್ಕೆ ಹೋದ ಬಗ್ಗೆ ಪೊಲೀಸರು ಪ್ರಶ್ನೆ ಕೇಳಲ್ಲ ಎಂದಿದ್ದಾರೆ. ಯಾಕೆಂದರೆ ಜಮೀರ್ ಕೊಲಂಬೋಕ್ಕೆ ಹೋಗಿರುವ ಬಗ್ಗೆ ಅವರೇ ಒಪ್ಪಿಕೊಂಡಿದ್ದಾರೆ. ಶಾಸಕ ಜಮೀರ್ ಬಗ್ಗೆ ನನಗೆ ಯಾವುದೇ ಅಭ್ಯಂತರ ಇಲ್ಲ. ಅವರ ವೈಯಕ್ತಿಕ ವಿಷಯದ ಬಗ್ಗೆ ನಾನು ಮಾತಾಡಲ್ಲ. ಮಾನ್ಯ ಶಾಸಕರ ಬಗ್ಗೆ ನನ್ನ ಅಭ್ಯಂತರ ಇಲ್ಲ. ಆದರೆ ಶಾಸಕರ ಆಪ್ತ ಬಂಟ ಶೇಖ್ ಫಾಝಿಲ್ ಬಗ್ಗೆ ಮಾತಾಡಿದ್ದೇನೆ ಎಂದರು.

 

ನನ್ನ ವಿರುದ್ಧದ ಎಫ್‍ಐಆರ್ ಬಗ್ಗೆ ನಮ್ಮ ವಕೀಲರು ನೋಡಿಕೊಳ್ಳುತ್ತಾರೆ. ಜಮೀರ್‍ಗೂ ಶೇಖ್ ಫಾಝೀಲ್‍ಗೂ ಏನು ಸಂಬಂಧ ಇದೆ ಅನ್ನೋದನ್ನ ವಿಚಾರ ಮಾಡುವಂತೆ ಹೇಳಿದ್ದೇನೆ. ಅದೆಲ್ಲದಕ್ಕೂ ನಾನು ಉತ್ತರವನ್ನು ಕೊಟ್ಟಿದ್ದೇನೆ. ಕೆಲವೊಂದು ಡಾಕ್ಯುಮೆಂಟ್ ತರುವುದಕ್ಕೆ ಹೇಳಿದ್ದಾರೆ. ಎಲ್ಲವನ್ನು ಶುಕ್ರವಾರ ತಂದು ಕೊಡುತ್ತೇನೆ ಎಂದು ಪ್ರಶಾಂತ್ ಸಂಬರಗಿ ಹೇಳಿದರು.

Click to comment

Leave a Reply

Your email address will not be published. Required fields are marked *