Connect with us

Karnataka

ವಿಚಾರಣೆ, ನೋಟಿಸ್ ನಾಟಕವಾಡ್ಬೇಡಿ, ದಾಖಲೆಗಳಿದ್ದರೆ ನಟಿಯರನ್ನು ಬಂಧಿಸಿ- ಮುತಾಲಿಕ್ ಕಿಡಿ

Published

on

– ರಾಜಕಾರಣಿಗಳು ಪೊಲೀಸರ ಕೈ ಕಟ್ಟಿ ಹಾಕಿದ್ದಾರೆ

ತುಮಕೂರು: ವಿಚಾರಣೆ, ನೋಟಿಸ್ ಎಂದು ಕಾಲಹರಣ ಮಾಡುವ ನಾಟಕ ಮಾಡಬೇಡಿ. ದಾಖಲೆಗಳಿದ್ದರೆ ಮುಲಾಜಿಲ್ಲದೆ ನಟಿಯರನ್ನು ಬಂಧಿಸಿ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿ ಕಾರಿದ್ದಾರೆ.

ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ವಿಚಾರಣೆ, ನೋಟಿಸ್ ನೀಡುತ್ತೇವೆಂದು ನಾಟಕ ಆಡುತ್ತೀರಾ, ಬೆಂಕಿ ಇದ್ದಾಗಲೇ ಹೊಗೆ ಬರೋದು. ನಿಮ್ಮ ಬಳಿ ದಾಖಲೆಗಳಿರುವುದರಿಂದಲೇ ದಾಳಿ ಮಾಡಿದ್ದೀರಿ. ವಶಕ್ಕೆ ಪಡೆದರೂ ನಟಿಗೆ ಭಯ ಇಲ್ಲ, ಅವರನ್ನು ಅರೆಸ್ಟ್ ಮಾಡಿ. ರಾಜಕಾರಣಿಗಳಿಗೆ ದುಡ್ಡು ಕೊಟ್ಟರೆ ಎಲ್ಲಾ ಸರಿ ಹೋಗುತ್ತೆ ಎಂಬ ಭಾವನೆ ಇದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು ಮುಲಾಜಿಲ್ಲದೆ ಬಂಧಿಸಬೇಕು ಎಂದು ಮುತಾಲಿಕ್ ಒತ್ತಾಯಿಸಿದ್ದಾರೆ.

ಸಂಜನಾ, ರಾಗಿಣಿ ಇವರು ನಟಿಯರಾ, ಇವರ ಬಳಿ ನಟನೆ ಇದೆಯೇ? ಇವರೆಲ್ಲಾ ಮಜಾ ಮಾಡೋಕೆ, ಚಿತ್ರ ರಂಗವನ್ನು ಹಾಳು ಮಾಡೋಕೆ ಬಂದಿರೋದು. ಇವರನ್ನು ಒಳಗೆ ಹಾಕಬೇಕು. ಆಗಲೇ ಇವರಿಗೆ ಭಯ ಬರೋದು. ಇಂತಹವರಿಂದಾಗಿ ಮಕ್ಕಳಿಗೂ ಈ ಚಟ ಹಬ್ಬಿದೆ. ಇದು ಡ್ರಗ್ ಜಿಹಾದ್, ಮುಸ್ಲಿಮರೇ ನಡೆಸುತ್ತಿರುವ ದಂಧೆ ಇದು. ಪೊಲೀಸರಿಗೆ ಡ್ರಗ್ ದಂಧೆ ಬಗ್ಗೆ ಇಂಚಿಂಚೂ ಮಾಹಿತಿ ಇರುತ್ತದೆ. ಆದರೆ ಪೊಲೀಸರ ಕೈಯನ್ನು ರಾಜಕಾರಣಿಗಳು ಕಟ್ಟಿಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಅತಿ ಹೆಚ್ಚಿನ ಡ್ರಗ್ಸ್ ಮಾಫಿಯ ನಡೆಯುತ್ತಿದೆ. ಹ್ಯಾರಿಸ್ ಕ್ಷೇತ್ರದ ಎಲ್ಲ ಕ್ರಿಶ್ಚಿಯನ್ ಕಾಲೇಜು, ಹೈಸ್ಕೂಲುಗಳ ವಿದ್ಯಾರ್ಥಿಗಳ ಬ್ಯಾಗ್ ನಲ್ಲಿ ಗಾಂಜಾ ಸಿಗುತ್ತೆ, ಕೋಕೈನ್ ಸಿಗುತ್ತೆ, ಡ್ರಗ್ಸ್ ಚಾಕ್ಲೆಟ್ ಸಿಗುತ್ವೆ. ಅನಿಕಾ ಕಿಂಗ್ ಪಿನ್ ಅಲ್ವೇ ಅಲ್ಲ. ಅವಳ ಹಿಂದೆ ದೊಡ್ಡ ಕಿಂಗ್ ಪಿನ್ ಗಳಿದ್ದಾರೆ ಎಂದು ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.

Click to comment

Leave a Reply

Your email address will not be published. Required fields are marked *