Friday, 13th December 2019

ಮೋದಿಯವರಿಗೆ ಚೋರ್ ಎನ್ನುವ ರಾಹುಲ್ ಗಾಂಧಿಯೇ ಜಾಮೀನಿನ ಮೇಲೆ ಹೊರಗಿದ್ದಾರೆ: ಜೋಶಿ ಟಾಂಗ್

ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಚೋರ್ ಪದ ಬಳಸಿ ರಾಹುಲ್ ಗಾಂಧಿ ಅಸಂವಿಧಾನಿಕವಾಗಿ ಮಾತನಾಡಿದ್ದಾರೆ. ಮೋದಿಯವರಿಗೆ ಚೋರ್ ಎನ್ನುವ ರಾಹುಲ್ ಗಾಂಧಿಯೇ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ಸಂಸದ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.

ಹಾವೇರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾಷಣದಲ್ಲಿ ಪ್ರಧಾನಿಗೆ ಚೋರ್ ಎಂದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ ಅವರು, ತಮಗೆ ಯಾರೋ ಬರೆದು ಕೊಟ್ಟಿದನ್ನು ರಾಹುಲ್ ಓದಿದ್ದಾರೆ. ಮೋದಿಯವರನ್ನು ಚೋರ್ ಎನ್ನುವ ಅವರೇ ಜಾಮೀನಿನ ಮೇಲೆ ಹೊರಗಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ ಜಾಮೀನು ಪಡೆದು ಹೊರಬಂದವರು. ಮೋದಿಯವರನ್ನು ದೇಶದ ಚೌಕಿದಾರ ಅಂತ ಜನರೇ ಒಪ್ಪಿದ್ದಾರೆ. ಚೋರ್ ಎನ್ನಲು ಇವರು ಯಾರು ಎಂದು ಪ್ರಶ್ನಿಸಿ ಹರಿಹಾಯ್ದಿದ್ದಾರೆ.

ಸರ್ಕಾರಿ ವ್ಯವಸ್ಥೆಯೋಳಗೆ ಗಾಂಧಿ ಕುಟುಂಬ ಬದುಕು ನಡೆಸುತ್ತಿದೆ. ಮನೆ, ವಾಹನ ಎಲ್ಲ ಸರ್ಕಾರದ್ದೆ, ಅವರು ಮಾಡುವ ಊಟ ಕೂಡ ಸರ್ಕಾರದ್ದೆ. ಈಗಾಗಲೇ ರಫೇಲ್ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.

ಅಂಬರೀಷ್ ಸಾವಿನ ಕುರಿತು ಸಚಿವ ರೇವಣ್ಣ ಹಾಗೂ ಅವರ ವಿರುದ್ಧ ಬಿಜೆಪಿ ನಾಯಕ ಈಶ್ವರಪ್ಪ ಮಾತನಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರೇ ಅಗಲಿ ಈ ರೀತಿ ಮಾತನಾಡುವುದು ಸರಿಯಲ್ಲ. ವೈಯಕ್ತಿಕವಾಗಿ ಯಾರ ಬಗ್ಗೆಯೂ ಟೀಕೆ ಮಾಡಬಾರದು ಎಂದರು.

ತಿಲಕ ಇಟ್ಟುಕೊಳ್ಳುವವರ ಬಗ್ಗೆ ಹೆದರಿಕೆ ಬರುತ್ತೆ ಎನ್ನುವ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಮಾತನಾಡಿ, ಬಹಳಷ್ಟು ಜನ ಉಗ್ರರು ಬೇರೆ ಬೇರೆ ರೀತಿಯ ವೇಷಭೂಷಣ ಹಾಕಿರುತ್ತಾರೆ. ಟೋಪಿಗಳನ್ನು ಹಾಕಿರುತ್ತಾರೆ ಅವರ ಬಗ್ಗೆ ಯಾಕೆ ಸಿದ್ದರಾಮಯ್ಯ ಮಾತಾಡೋದಿಲ್ಲ? ನಾನು ಎಲ್ಲಾ ಮುಸ್ಲಿಮರು ಉಗ್ರರು ಅಂತ ಹೇಳೋದಿಲ್ಲ. ಆದರೆ ಆ ಬಗ್ಗೆ ಯಾಕೆ ಸಿದ್ದರಾಮಯ್ಯ ಮಾತನಾಡುವುದಿಲ್ಲ. ಹಿಂದೂ ಸಮಾಜದ ಬಗ್ಗೆ ಮಾತ್ರ ಮಾತನಾಡಲು ಹೊರಟಿದ್ದೀರಲ್ಲ, ಹಿಂದೂ ಸಮಾಜ ಬಿಟ್ಟಿ ಬಿದ್ದಿದಿಯಾ ನಿಮಗೆ? ಇದನ್ನು ಹಿಂದು ಸಮಾಜ ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *