Thursday, 23rd January 2020

ಬ್ರಿಗೇಡ್ ರೋಡನ್ನು ಅಬ್ರಾಡ್ ಎಂದುಕೊಂಡಿದ್ದೆ: ಪ್ರಭಾಸ್

ಬೆಂಗಳೂರು: ಟಾಲಿವುಡ್ ನಟ ಪ್ರಭಾಸ್ ತಮ್ಮ ಮುಂಬರುವ ‘ಸಾಹೋ’ ಚಿತ್ರಕ್ಕಾಗಿ ಬೆಂಗಳೂರಿಗೆ ಆಗಮಸಿದ್ದಾರೆ. ಈ ವೇಳೆ ಅವರು ಬ್ರಿಗೇಡ್ ರೋಡ್ ಅನ್ನು ಅಬ್ರಾಡ್ ಎಂದುಕೊಂಡಿದ್ದ ವಿಷಯವನ್ನು ರಿವೀಲ್ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಪ್ರಭಾಸ್ ಅವರಿಗೆ ಬೆಂಗಳೂರಿನ ಬಗ್ಗೆ ಪ್ರಶ್ನಿಸಲಾಯಿತು. ಈ ವೇಳೆ ಅವರು, ನನಗೆ 16 ವರ್ಷ ಇದ್ದಾಗ ನನ್ನ ಸ್ನೇಹಿತರು ಪರೀಕ್ಷೆ ಬರೆಯಲು ಬೆಂಗಳೂರಿಗೆ ಬಂದಿದ್ದರು. ನಾನು ಕೂಡ ಅವರ ಜೊತೆ ಬಂದಿದ್ದೆ. ಆದರೆ ನಾನು ಪರೀಕ್ಷೆ ಬರೆಯಲು ಬಂದಿರಲಿಲ್ಲ. ಎಂಜಾಯ್ ಮಾಡಲೆಂದು ಬಂದಿದ್ದೆ. ಆಗ ನಾನು ಬ್ರಿಗೇಡ್ ರೋಡಿಗೆ ಹೋಗಿದ್ದೆ. . ಆಗ ಇದು ಭಾರತ ಅಲ್ಲ ವಿದೇಶ ಎಂದು ಅನಿಸುತ್ತಿತ್ತು ಎಂದರು.

ಬ್ರಿಗೇಡ್ ರೋಡಿನಲ್ಲಿ ಜನರು ಧರಿಸುವ ಉಡುಪು, ಬೈಕ್, ಕಾಫಿ ಶಾಪ್‍ಗಳು ಆ ವಾತಾವರಣ ಅಬ್ರಾಡ್ ರೀತಿ ಇತ್ತು. ಸಂಜೆ 6 ಗಂಟೆ ಆಗುತ್ತಿದ್ದಂತೆ ಮಳೆ ಹನಿ ಬೀಳುತ್ತಿತ್ತು. ಅದು ತುಂಬಾನೇ ಸುಂದರವಾಗಿತ್ತು. ಬೆಂಗಳೂರು ಯಾವಾಗಲೂ ಒಂದು ಸುಂದರ ನಗರವಾಗಿರುತ್ತದೆ. ನಾನು ಚೆನ್ನೈನಲ್ಲಿ ಹುಟ್ಟಿ ಬೆಳೆದಿದ್ದೇನೆ. ಅದು ಕೂಡ ಮಹಾನಗರ. ಆದರೆ ಬೆಂಗಳೂರು ಮಾತ್ರ ಸುಂದರವಾದ ನಗರ ಎಂದು ಹೇಳಿದರು.

ಸಾಹೋ ಆ್ಯಕ್ಷನ್ ಚಿತ್ರವಾಗಿದ್ದು, ನಿರ್ದೇಶಕ ಸುಜೀತ್ ನಿರ್ದೇಶನ ಮಾಡಿದ್ದಾರೆ. ವಂಶಿ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಚಿತ್ರದಲ್ಲಿ ನೀಲ್ ನಿತಿನ್ ಮುಖೇಶ್, ಮಂದಿರಾ ಬೇಡಿ, ಅರುಣ್ ವಿಜಯ್ ಹಾಗೂ ಜಾಕಿ ಶ್ರಾಫ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಹೈದರಾಬಾದ್, ಮುಂಬೈ, ಅಬುಧಾಬಿ, ದುಬೈ, ರೋಮಾನಿಯಾ ಹಾಗೂ ಯೂರೋಪ್‍ನ ಕೆಲವು ಭಾಗಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ.

Leave a Reply

Your email address will not be published. Required fields are marked *