Tuesday, 25th June 2019

Recent News

ಮಂಗಳವಾರ ನಿಮಗೆ ಸರ್ಪ್ರೈಸ್ ಕಾದಿದೆ: ನಟ ಪ್ರಭಾಸ್

ಹೈದರಾಬಾದ್: ಟಾಲಿವುಡ್ ನಟ ಪ್ರಭಾಸ್ ಮಂಗಳವಾರ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುತ್ತೇನೆ ಎಂದು ವಿಡಿಯೋ ಮೂಲಕ ಹೇಳಿ ಅದನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

ಪ್ರಭಾಸ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಪ್ರಭಾಸ್, “ಹಾಯ್ ಡಾರ್ಲಿಂಗ್ಸ್. ಹೇಗಿದ್ದೀರಾ? ನಾಳೆ ಅಂದರೆ ಮಂಗಳವಾರ ನಿಮಗೆಲ್ಲರಿಗೂ ಒಂದು ಸರ್ಪ್ರೈಸ್ ಇದೆ. ನಾಳೆ ನನ್ನ ಇನ್‍ಸ್ಟಾಗ್ರಾಂ ಚೆಕ್ ಮಾಡಿ. ಐ ಲವ್ ಯೂ” ಎಂದು ಹೇಳಿದ್ದಾರೆ.

ಪ್ರಭಾಸ್ ಈ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಅದಕ್ಕೆ “ಹಲೋ ಡಾರ್ಲಿಂಗ್ಸ್. ನಾಳೆ ನಿಮಗಾಗಿ ಒಂದು ಸರ್ಪ್ರೈಸ್ ಬರುತ್ತಿದೆ. ಕಾಯುತ್ತೀರಿ” ಎಂದು ಬರೆದುಕೊಂಡು ‘ಸಾಹೋ ಸರ್ಪ್ರೈಸ್’ ಎಂದು ಹ್ಯಾಶ್‍ಟ್ಯಾಗ್ ಬಳಸಿ ಪೋಸ್ಟ್ ಮಾಡಿದ್ದಾರೆ.

ಪ್ರಭಾಸ್ ಸಾಹೋ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಕ್ಕೆ ನಾಯಕಿಯಾಗಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ನಟಿಸುತ್ತಿದ್ದಾರೆ. ಕಳೆದ ತಿಂಗಳು ಏಪ್ರಿಲ್‍ನಲ್ಲಿ ಸಾಹೋ ಚಿತ್ರದ ಫೋಟೋವೊಂದು ಲೀಕ್ ಆಗಿತ್ತು. ಲೀಕ್ ಆಗಿರುವ ಫೋಟೋದಲ್ಲಿ ಪ್ರಭಾಸ್ ಹಾಗೂ ಶ್ರದ್ಧಾ ಪ್ರೀತಿಯಿಂದ ಒಬ್ಬರನೊಬ್ಬರು ರೊಮ್ಯಾಂಟಿಕ್ ಆಗಿ ನೋಡುತ್ತಿದ್ದರು.

ಸಾಹೋ ಆ್ಯಕ್ಷನ್ ಚಿತ್ರವಾಗಿದ್ದು, ನಿರ್ದೇಶಕ ಸುಜೀತ್ ನಿರ್ದೇಶನ ಮಾಡುತ್ತಿದ್ದಾರೆ. ವಂಶಿ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಈ ಚಿತ್ರದಲ್ಲಿ ನೀಲ್ ನಿತಿನ್ ಮುಖೇಶ್, ಮಂದಿರಾ ಬೇಡಿ, ಅರುಣ್ ವಿಜಯ್ ಹಾಗೂ ಜಾಕಿ ಶ್ರಾಫ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಹೈದರಾಬಾದ್, ಮುಂಬೈ, ಅಬುಧಾಬಿ, ದುಬೈ, ರೋಮಾನಿಯಾ ಹಾಗೂ ಯೂರೋಪ್‍ನ ಕೆಲವು ಭಾಗಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಇದೇ ವರ್ಷ ಅಗಸ್ಟ್ 15 ಸ್ವತಂತ್ರ್ಯ ದಿನಾಚರಣೆಯಂದು ಸಾಹೋ ಚಿತ್ರ ಬಿಡುಗಡೆ ಆಗಲಿದೆ.

 

View this post on Instagram

 

Hello darlings… A surprise coming your way, tomorrow. Stay tuned… #SaahoSurprise

A post shared by Prabhas (@actorprabhas) on

Leave a Reply

Your email address will not be published. Required fields are marked *