Connect with us

Cinema

ನಮ್ಮ ಕೈಯಲ್ಲಿ ಏನಾಗುತ್ತೆ ಅದನ್ನು ನಾವು ಮಾಡ್ತೇವೆ: ಪುನೀತ್ ರಾಜ್‍ಕುಮಾರ್

Published

on

– ಕೊಡಗಿನಲ್ಲಿ ಆಸ್ಪತ್ರೆ ಅಭಿಯಾನಕ್ಕೆ ಬೆಂಬಲ

ಮೈಸೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನಟಿಯರಾದ ರಶ್ಮಿಕಾ ಮಂದಣ್ಣ ಹಾಗೂ ಹರ್ಷಿಕಾ ಪೂಣಚ್ಚ ಬೆನ್ನಲ್ಲೇ ಇದೀಗ ಕೊಡಗಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಬೆಂಬಲ ಸೂಚಿಸಿದ್ದಾರೆ.

ಇಂದು ಮೈಸೂರಿನ ರಾಮಕೃಷ್ಣ ನಗರದಲ್ಲಿನ ಪರಮಹಂಸ ಉದ್ಯಾನವನದಲ್ಲಿ ನಿರ್ಮಾಣವಾದ ಔಟ್ ಡೋರ್ ಜಿಮ್ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ವಿಚಾರದಲ್ಲಿ ಕನ್ನಡ ಚಿತ್ರರಂಗ ಸದಾ ಜೊತೆಯಾಗಿರುತ್ತದೆ. ನಮ್ಮ ಕೈಯಲ್ಲಿ ಏನಾಗುತ್ತದೆ, ಅದನ್ನು ನಾವು ಮಾಡುತ್ತೇವೆ. ಕನ್ನಡಿಗನಾಗಿ ಈ ದೇಶದ ಪ್ರಜೆಯಾಗಿ ಇದು ನಮ್ಮ ಕರ್ತವ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಎಂ ಬಳಿ ನಟಿ ರಶ್ಮಿಕಾ, ಹರ್ಷಿಕಾ ಮನವಿ

ಬಳಿಕ ಯಶ್ ಅವರ ಜೊತೆ ಸಿನಿಮಾ ಮಾಡುವ ಪ್ಲಾನ್ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಮಯ ಬಂದಾಗ ನಾನು ಹಾಗೂ ಯಶ್ ಸಿನಿಮಾ ಮಾಡುತ್ತೇವೆ. ಈಗ ಇಬ್ಬರು ಇಲ್ಲಿಯೇ ಶೂಟಿಂಗ್ ಮಾಡುತ್ತಿದ್ದೇವೆ. ಅಲ್ಲದೆ ಒಂದೇ ಹೋಟೆಲಿನಲ್ಲಿ ವಾಸಿಸುತ್ತಿದ್ದೇವೆ. ಹಾಗಾಗಿ ಇಬ್ಬರೂ ಭೇಟಿ ಮಾಡಿ ಊಟ ಮಾಡಿದ್ದೇವೆ ಎಂದರು. ಇದನ್ನೂ ಓದಿ: ಕೊಡಗು ಜಿಲ್ಲೆಗೆ ಆಸ್ಪತ್ರೆ ಅಭಿಯಾನಕ್ಕೆ ಸ್ಯಾಂಡಲ್‍ವುಡ್ ಬೆಂಬಲ

ಇದಕ್ಕೂ ಮೊದಲು ಮಾತನಾಡಿದ ಪವರ್ ಸ್ಟಾರ್, ರಾಮಕೃಷ್ಣ ಪರಮಹಂಸ ಅವರ ಹೆಸರಿನಲ್ಲಿ ಪಾರ್ಕ್ ನಿರ್ಮಿಸಿದ್ದಾರೆ. ಮೈಸೂರಿನ ನನ್ನ ಸ್ನೇಹಿತರು ಪಾರ್ಕ್ ನಿರ್ಮಿಸಿದ್ದೇವೆ ಎಂದು ಹೇಳಿದ್ದರು. ನಾನು ಮೈಸೂರಿನಲ್ಲೇ ಶೂಟಿಂಗ್ ಮಾಡುತ್ತಿದ್ದ ಕಾರಣ ಇಲ್ಲಿ ಬಂದು ಪಾರ್ಕ್ ನೋಡಿದಂತೆ ಆಯ್ತು, ಜಿಮ್ ಉದ್ಘಾಟಿಸಿದಂತೆ ಆಯ್ತು. ಈ ಪಾರ್ಕ್ ಎಲ್ಲ ನೋಡುತ್ತಿದ್ದರೆ, ನನಗೆ ನನ್ನ ಬಾಲ್ಯ ನೆನಪಾಗುತ್ತದೆ ಎಂದು ಹೇಳಿದರು.