Connect with us

Cinema

ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿ ‘ಚೇಸ್’!

Published

on

ಪ್ರಾಮಿಸಿಂಗ್ ಟೀಸರ್ ಮೂಲಕ ಸೌಂಡ್ ಮಾಡಿದ್ದ ‘ಚೇಸ್’ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಚಿತ್ರಕ್ಕೆ ವಿಲೋಕ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದಾರೆ. ತಾಂತ್ರಿಕವಾಗಿ ರಿಚ್ ಆಗಿ ಚೇಸ್ ಸಿನಿಮಾ ತೆರೆ ಮೇಲೆ ತರಲು ನಿರ್ದೇಶಕರು ಪ್ಲ್ಯಾನ್ ಮಾಡಿಕೊಂಡಿದ್ದು, ಇದಕ್ಕಾಗಿ ನುರಿತ ಹಾಗೂ ಪ್ರತಿಭಾವಂತ ಟೆಕ್ನಿಷಿಯನ್ ಗಳನ್ನು ಬಳಸಿಕೊಂಡಿದ್ದಾರೆ.

ಎಂ. ಗೀತಾ ಗುರಪ್ಪ ಸಿನಿಮಾದ ಡಾಲ್ಬಿ ಅಟ್ಮೋಸ್ ಹಾಗೂ ಸೌಂಡ್ ಮಿಕ್ಸಿಂಗ್ ಕೆಲಸದಲ್ಲಿ ನಿರತರಾಗಿದ್ದು, ಡಿಐ ಕೆಲಸವನ್ನು ಕೇರಳ ರಾಜ್ಯ ಪ್ರಶಸ್ತಿ ವಿಜೇತ ಲಿಜು ಪ್ರಭಾಕರ್ ನಿರ್ವಹಿಸಿದರೆ, ಶ್ರೀ ಕ್ರೇಜಿ ಮೈಂಡ್ಸ್ ಚೇಸ್ ಚಿತ್ರದ ಸಂಕಲನಕಾರರಾಗಿದ್ದಾರೆ. ಮಂಗಳೂರು, ಬೆಂಗಳೂರು, ಕೊಚ್ಚಿ, ಹಿಮಾಚಲ ಪ್ರದೇಶದ ಕಲರ್ ಫುಲ್ ಲೋಕೇಷನ್ ಗಳಲ್ಲಿ ಚಿತ್ರೀಕರಣ ನಡೆದಿದ್ದು, ಅನಂತ್ ರಾಜ್ ಅರಸ್ ಕ್ಯಾಮೆರಾ ನಿರ್ದೇಶನದಲ್ಲಿ ‘ಚೇಸ್’ ಸಿನಿಮಾ ಸೆರೆಯಾಗಿದೆ. ಕಾರ್ತಿಕ್ ಆಚಾರ್ಯ ಸಂಗೀತ ಹಾಗೂ ಹಿನ್ನೆಲೆ ಸಂಗೀತ, ಡಾ.ಉಮೇಶ್ ಪಿಲಿಕುಡೇಲು ಅವರ ಸಾಹಿತ್ಯ ಈ ಚಿತ್ರಕ್ಕಿದೆ.

ಸಸ್ಪೆನ್ಸ್, ಥ್ರಿಲ್ಲರ್, ಕ್ರೈಂ ಜೊತೆಗೆ ಕಮರ್ಶಿಯಲ್ ಎಲಿಮೆಂಟ್ ಗಳಾದ ಆಕ್ಷನ್, ರೋಮ್ಯಾನ್ಸ್, ಕಾಮಿಡಿ ಎಲ್ಲವನ್ನೂ ಚೇಸ್ ಸಿನಿಮಾ ಒಳಗೊಂಡಿದ್ದು, ಎಲ್ಲಾ ವರ್ಗದ ಪ್ರೇಕ್ಷಕರಿಗೂ ಮನರಂಜನೆ ನೀಡಲಿದೆ ಅನ್ನೋದು ನಿರ್ದೇಶಕ ವಿಲೋಕ್ ಶೆಟ್ಟಿ ಅವರ ಮಾತು. ಸೆನ್ಸಾರ್ ಅಂಗಳಕ್ಕೆ ಹೊರಡಲಿರೋ ‘ಚೇಸ್’ ಸಿನಿಮಾ ಸದ್ಯದಲ್ಲೇ ಹಾಡುಗಳ ಮೂಲಕ ಸೋಶಿಯಲ್ ಮೀಡಿಯಾ ಪ್ಲ್ಯಾಟ್ ಫಾರ್ಮ್ ಗೆ ಎಂಟ್ರಿ ಕೊಡಲಿದೆ.

ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ‘ಚೇಸ್’ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿರುವ ಚೇಸ್ ಸಿನಿಮಾದಲ್ಲಿ ‘ರಂಗಿತರಂಗ’ ಖ್ಯಾತಿಯ ರಾಧಿಕಾ ನಾರಾಯಣ್, ಅವಿನಾಶ್ ನರಸಿಂಹರಾಜು, ಸುಶಾಂತ್ ಪೂಜಾರಿ, ಶೀತಲ್ ಶೆಟ್ಟಿ, ರೆಹಮಾನ್ ಹಾಸನ್, ರಾಜೇಶ್ ನಟರಂಗ, ಪ್ರಮೋದ್ ಶೆಟ್ಟಿ, ಅರವಿಂದ್ ರಾವ್, ಶ್ವೇತಾ ಸಂಜೀವುಲು, ವೀಣಾ ಸುಂದರ್, ಉಷಾ ಭಂಡಾರಿ, ಅರವಿಂದ್ ಬೋಳಾರ್ ತಾರಾಬಳಗದಲ್ಲಿದ್ದಾರೆ. ಮ್ಯಾಕ್ಸ್ ಎನ್ನುವ ನಾಯಿ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಭಾರತದ ಏಕೈಕ ಶ್ವಾನ ಮನಶಾಸ್ತ್ರಜ್ಞ ಅಮೃತ್ ಶ್ರೀಧರ್ ಹಿರಣ್ಯ ತರಬೇತು ನೀಡಿರುವುದು ಚಿತ್ರದ ಇನ್ನೊಂದು ವಿಶೇಷ.

Click to comment

Leave a Reply

Your email address will not be published. Required fields are marked *

www.publictv.in