ನೋಡ ನೋಡುತ್ತಿದ್ದಂತೆ ಕುಸಿದ ಫುಟ್‍ಪಾತ್- ಚರಂಡಿಗೆ ಬಿದ್ದ ಯುವಕರು

By
1 Min Read

ಜೈಪುರ: ರಾಜಸ್ಥಾನದ ಸಿರೋಹಿ ನಗರದಲ್ಲಿ ಫುಟ್‍ಪಾತ್ ಕುಸಿದ ಕಾರಣ ಇಬ್ಬರು ಯುವಕರು ಗಾಯಗೊಂಡಿದ್ದಾರೆ. ಫುಟ್‍ಪಾತ್ ಕುಸಿಯುವ ದೃಶ್ಯಗಳು ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಶುಕ್ರವಾರ ಈ ಘಟನೆ ನಡೆದಿದ್ದು, ಗಾಯಗೊಂಡ ಯುವಕರಿಬ್ಬರು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಓರ್ವ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ವರದಿಯಾಗಿದೆ. ಚರಂಡಿ ಕಾಲುವೆ ಮೇಲೆ ಪಾದಾಚಾರಿ ಮಾರ್ಗ ನಿರ್ಮಿಸಲಾಗಿತ್ತು. ಹೀಗಾಗಿ ನೀರಿನ ಹೊಡೆತಕ್ಕೆ ಪಾದಚಾರಿ ಮಾರ್ಗ ಕುಸಿದಿದೆ ಎನ್ನಲಾಗಿದೆ.

ಓರ್ವ ಬದಿಯಲ್ಲಿ ನಿಂತಿದ್ದಾನೆ. ಮತ್ತೋರ್ವ ಬರುತ್ತಿದ್ದಂತೆ ಫುಟ್‍ಪಾತ್ ಕುಸಿದಿದೆ. ಪರಿಣಾಮ ಯುವಕರಿಬ್ಬರು ಚರಂಡಿಗೆ ಬಿದಿದ್ದಾರೆ. ಹಾಗೆ ಫುಟ್‍ಪಾತ್ ಬದಿಯಲ್ಲಿದ್ದ ಬೈಕ್, ಅಂಗಡಿಗಳ ಮುಂದೆ ಇರಿಸಲಾಗಿದ್ದ ವಸ್ತುಗಳು ಚರಂಡಿ ಪಾಲಾಗಿವೆ. ಫುಟ್‍ಪಾತ್ ಕುಸಿಯುತ್ತಿದ್ದಂತೆ ಸ್ಥಳೀಯರು ಆಗಮಿಸಿ ಯುವಕರಿಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Share This Article
Exit mobile version