Bengaluru City
ನಾನು ಕೆಲಸ ಮಾಡೋ ಖಾತೆ ಅಬಕಾರಿ ಇಲಾಖೆ ಅಲ್ಲ: ಎಂಟಿಬಿ ಅಸಮಾಧಾನ

ಬೆಂಗಳೂರು: ನಾನು ಕೆಲಸ ಮಾಡುವ ಖಾತೆ ಅಬಕಾರಿ ಇಲಾಖೆ ಅಲ್ಲ ಎಂದು ಸಚಿವ ಎಂಟಿಬಿ ನಾಗರಾಜ್ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ.
ಸಚಿವ ಸುಧಾಕರ್ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಎಂಟಿಬಿ ನಾಗರಾಜ್, ಅಬಕಾರಿ ಇಲಾಖೆಯಲ್ಲಿ ಮಾಡೊ ಕೆಲಸ ಏನಿದೆ? ದೊಡ್ಡ ಕಂಪನಿಗಳಿಂದ ಖರೀದಿಸಿ ಹೋಲ್ಸೇಲ್ ದರದಲ್ಲಿ ಅಂಗಡಿಗಳಿಗೆ ನೀಡ್ತಾರೆ. ಅಬಕಾರಿ ಇಲಾಖೆ ನನಗೆ ಇಷ್ಟವಿಲ್ಲ. ಅಬಕಾರಿ ಖಾತೆ ಬೇಡ ಎಂದು ಸಿಎಂ ಬಳಿ ಹೇಳಿ ಬಂದಿದ್ದೇನೆ. ಖಾತೆ ಪಟ್ಟಿ ಪರಿಷ್ಕರಣೆ ಮಾಡ್ತಾರೋ ಇಲ್ಲೋ ಗೊತ್ತಿಲ್ಲ ಎಂದರು.
ವಸತಿ ಇಲಾಖೆ ನೀಡಿದ್ರೆ ಬಡವರಿಗೆ ನಿವೇಶನ ನೀಡಬಹುದಿತ್ತು. ಸ್ಲಂಗಳನ್ನ ಅಭಿವೃದ್ಧಿ ಮಾಡಬಹುದಿತ್ತು. ಸಾರ್ವಜನಿಕವಾಗಿ ಕೆಲಸ ಮಾಡಿ ಪಕ್ಷಕ್ಕೆ ಒಳ್ಳೆಯ ಹೆಸರು ತರುವಂತೆ ಖಾತೆ ನೀಡುವಂತೆ ಹೇಳಿದ್ದೇನೆ. ಕ್ಯಾಬಿನೆಟ್ ಸಭೆಗೆ ಹೋಗ್ತೀರಾ ಪ್ರಶ್ನೆಗೆ ಸಂಜೆ ನೋಡಿ ಎಂದು ಹೇಳಿದರು.
