Connect with us

Cinema

ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪೂನಂ ಪಾಂಡೆ

Published

on

Share this

ಮುಂಬೈ: ಬಾಲಿವುಡ್‍ನ ಹಾಟ್ ಬೆಡಗಿ ಪೂನಂ ಪಾಂಡೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟಿ. ಇದೀಗ ಪೂನಂ ಪಾಂಡೆ ತಮ್ಮ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: ಗೆಳೆಯನ ಜೊತೆ ಎಂಗೇಜ್ ಆದ ಹಾಟ್ ಬೆಡಗಿ ಪೂನಂ ಪಾಂಡೆ

ನಟಿ ಪೂನಂ ಪಾಂಡೆ ತಮ್ಮ ಗೆಳೆಯ ಸ್ಯಾಮ್ ಬಾಂಬೆ ಅವರನ್ನು ವಿವಾಹವಾಗಿದ್ದಾರೆ. ಕೆಲವು ದಿನಗಳ ಹಿಂದೆ ಇವರಿಬ್ಬರು ಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದೀಗ ಗುರುವಾರ (ಸೆಪ್ಟೆಂಬರ್ 10) ಮುಂಬೈನಲ್ಲಿ ಸಾಂಪ್ರದಾಯಿಕವಾಗಿ ಪೂನಂ ಪಾಂಡೆ ತಮ್ಮ ಗೆಳೆಯ ಸ್ಯಾಮ್ ಬಾಂಬೆ ಜೊತೆ ಮದುವೆಯಾಗಿದ್ದಾರೆ.

View this post on Instagram

Mr & Mrs Bombay

A post shared by Sam Bombay (@sambombay) on

ತಮ್ಮ ಮದುವೆ ಫೋಟೋವನ್ನು ಪೂನಂ ಪಾಂಡೆ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮದುವೆಯಲ್ಲಿ ಪೂನಂ ಮತ್ತು ಸ್ಯಾಮ್ ಬಾಂಬೆ ಇಬ್ಬರೂ ಒಂದೇ ಬಣ್ಣದ ಉಡುಪನ್ನು ಧರಿಸಿ ಮಿಂಚಿದ್ದಾರೆ. ಮದುವೆಯ ಫೋಟೋಗೆ “ನಿಮ್ಮೊಂದಿಗೆ ಮುಂದಿನ ಏಳು ಜನ್ಮಗಳನ್ನು ಕಳೆಯುವ ನಿರೀಕ್ಷೆ ಇದೆ” ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಅದಕ್ಕೆ ಸ್ಯಾಮ್ ಕೂಡ ಕಮೆಂಟ್ ಮಾಡುವ ಮೂಲಕ ಉತ್ತರಿಸಿದ್ದಾರೆ.

View this post on Instagram

Here’s looking forward to seven lifetimes with you.

A post shared by Poonam Pandey (@ipoonampandey) on

ಇಬ್ಬರೂ ಕೂಡ ತಮ್ಮ ಮದುವೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪೂನಂ ಪಾಂಡೆ ಮದುವೆಯ ಫೋಟೋಗಳನ್ನು ಅಪ್ಲೋಡ್ ಮಾಡಿದ ತಕ್ಷಣ ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ನವಜೋಡಿಗೆ ಶುಭ ಕೋರಿದ್ದಾರೆ.

ಎರಡು ತಿಂಗಳ ಹಿಂದೆ ತಮ್ಮ ನಿಶ್ಚಿತಾರ್ಥದ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡಿದ್ದ ಸ್ಯಾಮ್ ಬಾಂಬೆ ಕೊನೆಗೂ ನಾವು ನಿಶ್ಚಿತಾರ್ಥ ಮಾಡಿಕೊಂಡೆವು ಎಂದು ಬರೆದುಕೊಂಡಿದ್ದರು. ಸ್ಯಾಮ್ ಮತ್ತು ಪೂನಂ ಕಳೆದ ಕೆಲದಿನಗಳಿಂದ ಪ್ರೀತಿಸುತ್ತಿದ್ದರು.

View this post on Instagram

❤️

A post shared by Poonam Pandey (@ipoonampandey) on

ಸ್ಯಾಮ್ ಹಂಚಿಕೊಂಡಿದ್ದ ಫೋಟೋದಲ್ಲಿ ಇಬ್ಬರು ಬೆರಳುಗಳಲ್ಲಿ ಉಂಗುರಗಳನ್ನು ತೊಟ್ಟಿದ್ದರು. ಆದರೆ ಈ ಬಗ್ಗೆ ಪೂನಂ ಪಾಂಡೆ ಯಾವುದೇ ಪೋಸ್ಟ್ ಹಾಕಿಕೊಂಡಿರಲಿಲ್ಲ. ಆದರೆ ಪ್ರಿಯಕರ ಸ್ಯಾಮ್ ಹಂಚಿಕೊಂಡಿರುವ ಫೋಟೋಗೆ ಕಮೆಂಟ್ ಮಾಡಿರುವ ಪೂನಂ ಬೆಸ್ಟ್ ಫೀಲಿಂಗ್ಸ್ ಎಂದು ಬರೆದು ರೆಡ್ ಹಾರ್ಟ್ ಇಮೋಜಿಯನ್ನು ಪೋಸ್ಟ್ ಮಾಡಿದ್ದರು.

View this post on Instagram

The beginning of forever.

A post shared by Sam Bombay (@sambombay) on

Click to comment

Leave a Reply

Your email address will not be published. Required fields are marked *

Advertisement