Connect with us

ಪೊನ್ನಂಬಲಂ ಚಿಕಿತ್ಸೆಗೆ ಮೆಗಾಸ್ಟಾರ್ ಚಿರಂಜೀವಿಯಿಂದ ನೆರವು

ಪೊನ್ನಂಬಲಂ ಚಿಕಿತ್ಸೆಗೆ ಮೆಗಾಸ್ಟಾರ್ ಚಿರಂಜೀವಿಯಿಂದ ನೆರವು

ಚೆನ್ನೈ: ದಕ್ಷಿಣ ಭಾರತದ ಖ್ಯಾತ ಖಳನಟ ಪೊನ್ನಂಬಲಂ ಕಿಡ್ನಿ ಚಿಕಿತ್ಸೆಗೆ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಧನ ಸಹಾಯ ಮಾಡಿದ್ದಾರೆ. ಈ ಬಗ್ಗೆ ಪೊನ್ನಂಬಲಂರವರೆ ಸ್ವತಃ ವೀಡಿಯೋವೊಂದನ್ನು ಮಾಡುವ ಮೂಲಕ ಚಿರಂಜೀವಿಯವರಿಗೆ ಧನ್ಯವಾದ ತಿಳಿಸಿದ್ದಾರೆ.

ಹಲವು ದಿನಗಳಿಂದ ಪೊನ್ನಂಬಲಂರವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಸಹಾಯಕ್ಕಾಗಿ ಆರ್ಥಿಕ ಸಹಾಯಬೇಕಿದೆ ಎಂದು ಆಸ್ಪತ್ರೆಯ ಬೆಡ್ ಮೂಲಕ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಇದೀಗ ಪೊನ್ನಂಬಲಂ ಕಿಡ್ನಿ ಆಪರೇಷನ್‍ಗೆ ಮೆಗಾಸ್ಟಾರ್ ಚಿರಂಜೀವಿ 2 ಲಕ್ಷ ರೂ. ನೀಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ. ಹೀಗಾಗಿ ಪೊನ್ನಂಬಲಂ, ಚಿರಂಜೀವಿ ಅಣ್ಣನಿಗೆ ನಮಸ್ತೇ. ನನ್ನ ಕಿಡ್ನಿ ಆಪರೇಷನ್‍ಗೆ ನೀವು 2 ಲಕ್ಷ ನೀಡಿದ್ದು, ಬಹಳ ಸಹಾಯವಾಯಿತು. ಜೀವನಪೂರ್ತಿ ಈ ಸಹಾಯವನ್ನು ನಾನು ಮರೆಯಲ್ಲ. ಆ ದೇವರು ನಿಮಗೆ ಒಳ್ಳೆಯದು ಮಾಡಲಿ’ ಎಂದು ವೀಡಿಯೋ ಮಾಡುವ ಮೂಲಕ ಶುಭ ಹಾರೈಸಿದ್ದಾರೆ.

ಈ ಮುನ್ನ ಪೊನ್ನಂಬಲಂ ಆರೋಗ್ಯ ಸ್ಥಿತಿ ಹದಗೆಟ್ಟಾಗ ಕಾಲಿವುಡ್ ನಟ ಸೂಪರ್ ಸ್ಟಾರ್ ರಜನಿಕಾಂತ್ ಆರ್ಥಿಕ ನೆರವು ನೀಡಿದ್ದರು. ಅಲ್ಲದೆ ನಟ ಕಮಲ್ ಹಾಸನ್ ಪೊನ್ನಂಬಲಂರವರ ಇಬ್ಬರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಭರವಸೆ ನೀಡಿದ್ದರು.

 

ಪೊನ್ನಂಬಲಂರವರು ತಮಿಳು, ತೆಲುಗು ಸೇರಿದಂತೆ ಕನ್ನಡದಲ್ಲಿದ ಓ ನನ್ನ ನಲ್ಲೆ, ಚಿನ್ನ, ಲೇಡಿ ಕಮೀಷನರ್, ಕಿಚ್ಚ, ಗುನ್ನಾ, ಮಸ್ತಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದಾರೆ.

Advertisement
Advertisement