Wednesday, 16th October 2019

Recent News

ಚಲಿಸುತ್ತಿದ್ದ ಕಾರಿನಲ್ಲಿ ಮೂವರು ಯುವಕರ ಸ್ಟಂಟ್: ವಿಡಿಯೋ ನೋಡಿ

ಮುಂಬೈ: ಚಲಿಸುತ್ತಿದ್ದ ಕಾರಿನಲ್ಲಿ ಸ್ಟಂಟ್ ಮಾಡಿದ್ದಕ್ಕೆ ಮುಂಬೈ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಮೊಹಮ್ಮದ್ ಶೇಖ್(10), ಸಮೀರ್ ಸಹಿಬೋಲೆ(20) ಹಾಗೂ ಅನಸ್ ಶೇಖ್(19) ಸ್ಟಂಟ್ ಮಾಡಿದ ಯುವಕರು. ಪೊಲೀಸರು ಈ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಮೂವರಿಗೆ ಕೋರ್ಟ್ ಎಚ್ಚರಿಕೆ ನೀಡಿ ಜಾಮೀನು ಮಂಜೂರು ಮಾಡಿದೆ.

ಯುವಕರು ತಮ್ಮ ಜೀವವನ್ನು ಸಹ ಲೆಕ್ಕಿಸದೇ ಈ ಸ್ಟಂಟ್ ಮಾಡಿದ್ದಾರೆ. ಮೂವರು ಯುವಕರು ಕಾರಿನ ಕಿಟಕಿಯ ಮೂಲಕ ಹೊರ ಬಂದು ಸ್ಟಂಟ್ ಮಾಡುತ್ತಿದ್ದರು. ಹಿಂಬದಿ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿ ಇಡೀ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋವನ್ನು ಎರಡು ದಿನಗಳ ಹಿಂದೆ ಬಾಂದ್ರಾದಲ್ಲಿ ಸೆರೆ ಹಿಡಿಯಲಾಗಿತ್ತು. ಈ ವಿಡಿಯೋದಲ್ಲಿ ಮೂವರು ಯುವಕರು ಕೈಯಲ್ಲಿ ಮದ್ಯದ ಬಾಟಲಿ ಹಿಡಿದುಕೊಂಡು ಕಾರಿನ ಕಿಟಕಿ ಮೂಲಕ ಹೊರ ಬಂದಿದರು. ಮತ್ತೊಂದು ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿ ಇವರ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಇದು ಕೆಟ್ಟ ಸಂದೇಶ ಸಾರುತ್ತದೆ ಎಂದು ನಾವು ಯುವಕರನ್ನು ಹುಡುಕಲು ಶುರು ಮಾಡಿದ್ದೇವು. ವಿಡಿಯೋ ಮೂಲಕ ಕಾರಿನ ನಂಬರ್ ತಿಳಿದುಕೊಂಡು, ಆರ್ ಟಿಒ ಆಫೀಸ್‍ನಲ್ಲಿ ಅವರ ವಿಳಾಸ ಪಡೆದ್ದೇವು. ಬಳಿಕ ಕಾರಿನ ಚಾಲಕನನ್ನು ಬಿಟ್ಟು ಮೂವರು ಯುವಕರನ್ನು ಬಂಧಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ.

ಮೂವರು ಯುವಕರನ್ನು ಖಾರ್ ಪೊಲೀಸರು ನ್ಯಾಯಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ನ್ಯಾಯಾಲಯ ಮೂವರು ಯುವಕರಿಗೆ ಎಚ್ಚರಿಕೆ ನೀಡಿ ಜಾಮೀನು ಕೊಟ್ಟಿದೆ. ಮೂವರು ಯುವಕರು ಮುಂಬೈನ ಗೋವಂದಿ ಏರಿಯಾದವರಾಗಿದ್ದು, ನೈಟ್‍ಔಟ್‍ಗಾಗಿ ಬಾಂದ್ರಾಗೆ ತೆರಳುತ್ತಿದ್ದರು. ಯುವಕರು ಸ್ಟಂಟ್ ಮಾಡುತ್ತಿರುವ ವಿಡಿಯೋವನ್ನು ಮುಂಬೈ ಪೊಲೀಸರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.

Leave a Reply

Your email address will not be published. Required fields are marked *