Thursday, 21st February 2019

Recent News

ಸ್ವಲ್ಪ ಸಂಶಯ ಬರುತ್ತಿದ್ದ ಹಾಗೇ ಪೊಲೀಸರು ಕ್ರಮ ಕೈಗೊಳ್ಳಬೇಕು: ಶಿವರಾಜ್‍ಕುಮಾರ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಗೆ ಸಂಚು ರೂಪಿಸಿದ್ರು ಎನ್ನುವ ವಿಚಾರಕ್ಕೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಶಿವರಾಜ್ ಕುಮಾರ್ ಅವರಿಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಕ್ರೈಂ ನಡೀಲೇ ಬಾರದು ಅನ್ನೋದು ನಮ್ಮ ಅಭಿಪ್ರಾಯ. ಯಶ್ ಅಂತ ಅಲ್ಲ ಯಾರೇ ಆಗಿರಲಿ ಪ್ರತಿಯೊಬ್ಬರ ಪ್ರಾಣಕ್ಕೂ ಬೆಲೆ ಇದೆ. ಸ್ವಲ್ಪ ಸಂಶಯ ಬರುತ್ತಿದ್ದ ಹಾಗೇ ಪೊಲೀಸರು ಕ್ರಮ ಕೈಗೊಳ್ಳಬೇಕು. ಈ ರೀತಿ ವಿಷಯ ಗೊತ್ತಾದಾಗ ನಮಗ್ಯಾಕೆ ಅಂತ ಸುಮ್ಮನಿರಬಾರದು, ಪೊಲೀಸರಿಗೆ ಸುದ್ದಿ ತಿಳಿಸಬೇಕು ಎಂದು ಪ್ರತಿಕ್ರಿಯಿಸಿದರು.

ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಇಂದು ಶಿವರಾಜ್‍ಕುಮಾರ್ ಡಾ.ರಾಜ್ ಕುಮಾರ್ ಹಾಗೂ ಪಾರ್ವತಮ್ಮ ಸ್ಮಾರಕಕ್ಕೆ ನಮಿಸಿದರು. ಶಿವಣ್ಣಗೆ ಪತ್ನಿ ಗೀತಾ ಶಿವರಾಜ್ ಕುಮಾರ್ ಸಾಥ್ ನೀಡಿದರು. ಸ್ಮಾರಕದ ಬಳಿಯೇ ಅಭಿಮಾನಿಗಳ ಮಧ್ಯೆ ಶಿವರಾಜ್‍ಕುಮಾರ್ ಕೇಕ್ ಕತ್ತರಿಸಿ ಸಂಭ್ರಮಿಸಿದರು.

ಏನಿದು ಸಂಚು?
ಕುಖ್ಯಾತ ರೌಡಿ ಸೈಕಲ್ ರವಿಯೇ ನಟ ಯಶ್ ಹತ್ಯೆಗೆ ಸಂಚು ಮಾಡಿದ್ದ. ಪೊಲೀಸರ ವಿಚಾರಣೆ ವೇಳೆ 2 ವರ್ಷಗಳ ಹಿಂದೆಯೇ ನಟ ಯಶ್ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು ಎಂಬ ಆಘಾತ ಸುದ್ದಿಯನ್ನು ಬಾಯಿಬಿಟ್ಟಿದ್ದಾನೆ. 2016 ರಂದು ಕನಕಪುರ ಫಾರ್ಮ್ ಹೌಸ್‍ನಲ್ಲಿಯೇ ಸೈಕಲ್ ರವಿ ಹಾಗೂ ಕೋದಂಡ ಸ್ಕೆಚ್ ಮಾಡಿದ್ದರು. ಕೋದಂಡನ ಮೂಲಕ ಯಶ್ ಅವರನ್ನು ಕೊಲ್ಲಲು ಸ್ಕೆಚ್ ಹಾಕಲಾಗಿತ್ತು. ಸ್ಕೆಚ್ ರೀತಿಯಲ್ಲಿ ಕುಡಿದ ಮತ್ತಿನಲ್ಲಿಯೇ ಯಶ್ ಕಾರಿ ಮೇಲೆಯೂ ಪುಡಿ ರೌಡಿಗಳು ಕಲ್ಲು ತೂರಾಟ ಮಾಡಿದ್ದರು. ಆದರೆ ಅಂದು ಯಶ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಅಂದು ಯಶ್ ಹತ್ಯೆಗೆ ಮೊತ್ತೊಬ್ಬ ನಟನ ಕೈವಾಡ ಇದೆ ಎಂದು ಆರೋಪ ಕೇಳಿಬಂದಿದೆ. ಆದರೆ ನಟನ ಸಂಚಿನ ಬಗ್ಗೆಯೂ ಪೊಲೀಸರು ತೀವ್ರ ತನಿಖೆ ಮಾಡುತ್ತಿದ್ದಾರೆ. ಸದ್ಯಕ್ಕೆ ತನಿಖೆಯ ಯಾವುದೇ ಮಾಹಿತಿಯನ್ನು ಪೊಲೀಸರು ಬಹಿರಂಗ ಪಡಿಸುತ್ತಿಲ್ಲ.

Leave a Reply

Your email address will not be published. Required fields are marked *