Connect with us

Districts

ರಾಜ್ಯದ ಹಲವೆಡೆ ಬೈಕ್ ಕಳ್ಳತನ ಮಾಡ್ತಿದ್ದವ ಅರೆಸ್ಟ್ – 15 ವಾಹನಗಳು ವಶಕ್ಕೆ

Published

on

ಕೋಲಾರ: ನಗರ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ರಾಜ್ಯದ ಹಲವೆಡೆ ದ್ವಿಚಕ್ರ ವಾಹನ ಕದಿಯುತ್ತಿದ್ದ ಬೈಕ್ ಕಳ್ಳನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೀನಿವಾಸಪುರದ ಶೇಖ್ ಯಾಸೀನ್ ಅರ್ಪತ್ ಬಂಧಿತ ಆರೋಪಿ. ಈತ ಮೆಕ್ಯಾನಿಕ್ ಆಗಿದ್ದು, ನಕಲಿ ಕೀಲಿಗಳನ್ನ ಬಳಸಿಕೊಂಡು ಬೈಕ್‍ ಗಳನ್ನ ಕದಿಯುತ್ತಿದ್ದ ಎನ್ನಲಾಗಿದೆ. ಜೊತೆಗೆ ಹಲವು ಜಿಲ್ಲೆಗಳಲ್ಲಿ ಕದ್ದ ಬೈಕ್ ಗಳನ್ನ ಬೆಂಗಳೂರು ಸೇರಿದಂತೆ ವಿವಿಧೆಡೆ ಮಾರಾಟ ಮಾಡುತ್ತಿದ್ದ ಎಂದು ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ಸದ್ಯ ಬಂಧಿತನಿಂದ 10 ಲಕ್ಷ ರೂಪಾಯಿ ಮೌಲ್ಯದ 15 ದ್ವಿಚಕ್ರ ವಾಹನಗಳನ್ನ ನಗರ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ. ವಶದಲ್ಲಿರುವ ಆರೋಪಿಯನ್ನ ಪೊಲೀಸರು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ.

ಬಂಧಿತನಿಂದ ವಶಪಡಿಸಿಕೊಂಡ ಬೈಕ್‍ ಗಳನ್ನ ಕೋಲಾರ, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಲ್ಲಿ ಕಳವು ಮಾಡಿದ್ದ ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಕೋಲಾರ ಎಸ್.ಪಿ ರೋಹಿಣಿ ಕಟೋಜ್  ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv