Connect with us

Districts

ಮಂಡ್ಯ: ಎಸ್‍ಪಿ ಕಚೇರಿ ಮುಂದೆ ಪೊಲೀಸ್ ವಾಹನದಲ್ಲೇ ಪೊಲೀಸರ ಜೂಜಾಟ

Published

on

ಮಂಡ್ಯ: ಕರ್ತವ್ಯ ನಿರತ ಮೂವರು ರಿಸರ್ವ್ ಪೊಲೀಸ್ ಅಧಿಕಾರಿಗಳು ಪೊಲೀಸ್ ವಾಹನದಲ್ಲೇ ಇಸ್ಪೀಟ್ ಆಡುತ್ತಿದ್ದ ಘಟನೆ ಮಂಡ್ಯದಲ್ಲಿ ನಡೆದಿದೆ.

ಅಸಿಸ್ಟೆಂಟ್ ರಿಸರ್ವ್ ಸಬ್ ಇನ್ಸ್ ಪೆಕ್ಟರ್‍ಗಳಾದ ನಾಗಚಂದ್ರಬಾಬು (ಸಮವಸ್ತ್ರ ಧರಿಸಿದವರು), ಗೋಪಾಲಕೃಷ್ಣ(ಜೇಬಿಂದ ಹಣ ತೆಗೆದು ಹಾಕುವವರು), ನಾಗಣ್ಣ ನೇತೃತ್ವದ ರಿಸರ್ವ್ ಪೊಲೀಸರ ಒಂದು ತುಕಡಿಯನ್ನ ಕಂಟ್ರೋಲ್ ರೂಂ ಡ್ಯೂಟಿಗೆ ನಿಯೋಜಿಸಲಾಗಿತ್ತು. ತುರ್ತು ಸಂದರ್ಭಗಳಲ್ಲಿ ತೆರಳಲು ಎಸ್‍ಪಿ ಕಚೇರಿ ಬಳಿ ನಿಯೋಜಿಸಲಾಗಿದ್ದ ಈ ತಂಡ ಎಸ್‍ಪಿ ಕಚೇರಿ ಮುಂದೆಯೇ ಪೊಲೀಸ್ ವಾಹನದಲ್ಲೇ ಕುಳಿತು ಇಸ್ಪೀಟ್ ಆಡ್ತಿರೋ ವಿಡಿಯೋ ವೈರಲ್ ಆಗಿದೆ.

ಜೂಜಾಟ ಕಾನೂನು ಬಾಹಿರವಾಗಿದ್ದರೂ ಈ ಅಧಿಕಾರಿಗಳು ಸಮವಸ್ತ್ರ ಧರಿಸಿ, ಹಣ ಪಣಕ್ಕಿಟ್ಟು ಜೂಜಾಟದಲ್ಲಿ ತೊಡಗಿರೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಪರಾಧ ಕೃತ್ಯ ನಿಯಂತ್ರಿಸಬೇಕಾದ ಪೊಲೀಸರೇ ಅದೂ ಎಸ್‍ಪಿ ಕಚೇರಿ ಎದುರೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿರೋದು ಪೊಲೀಸರ ಕಾರ್ಯಕ್ಷಮತೆ ಪ್ರಶ್ನಿಸುವಂತಾಗಿದೆ.