Connect with us

Corona

ಹೊರಗೆ ಓಡಾಡ್ತಿದ್ದ ಯುವಕನಿಗೆ ಬಸ್ಕಿ ಶಿಕ್ಷೆ

Published

on

ಹಾವೇರಿ: ಕೊರೊನಾ ಸೋಂಕು ಹರಡೋದನ್ನ ತಡೆಯಲು ಪ್ರಧಾನಿ ನರೇಂದ್ರ ಮೋದಿ ಭಾರತ ಲಾಕ್ ಡೌನ್ ಗೆ ಕರೆ ನೀಡಿದ್ರೂ ಮುಖಕ್ಕೆ ಕರ್ಚೀಫ್ ಕಟ್ಕೊಂಡು ಬೈಕಿನಲ್ಲಿ ಮನೆಯಿಂದ ಹೊರಗೆ ಓಡಾಡ್ತಿದ್ದ ಯುವಕನಿಗೆ ಮಹಿಳಾ ಎಎಸ್‍ಐಯೊಬ್ಬರು ಐವತ್ತು ಬಸ್ಕಿ ಹೊಡೆಸಿ ಸರಿಯಾಗಿ ಪಾಠ ಕಲಿಸಿದ ಘಟನೆ ನಡೆದಿದೆ.

ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬ್ಯಾಂಕ್ ಲೋನ್ ಕಟ್ಟಬೇಕು ಅಂತ ಸಬೂಬು ಹೇಳ್ಕೊಂಡು ಯುವಕ ಬೈಕಿನಲ್ಲಿ ಓಡಾಡ್ತಿದ್ದ. ಇದನ್ನ ಗಮನಿಸಿದ ಹಂಸಭಾವಿ ಪೊಲೀಸ್ ಠಾಣೆ ಎಎಸ್‍ಐ ಎ.ಎಂ.ಅಸಾದಿ ಯುವಕನನ್ನ ತಡೆದು ಸರಿಯಾಗಿ ಚಾರ್ಜ್ ಮಾಡಿದ್ದಾರೆ.

ರಸ್ತೆಯಲ್ಲೇ ಯುವಕನಿಗೆ 50 ಬಾರಿ ಬಸ್ಕಿ ಹೊಡೆಸಿ ನೀರಿಳಿಸಿದ್ದಾರೆ. ನಂತರ ಯುವಕ ಸಬೂಬು ಹೇಳಲು ಮುಂದಾದಾಗ ದೂರ ನಿಂತ್ಕೋ ಎಂದು ದೂರ ನಿಲ್ಲಿಸಿ ಪ್ರಧಾನಿ ಆದೇಶ ಮಾಡ್ತಾರಾ ಅಂದ್ರೆ ಗೊತ್ತಾಗೋದಿಲ್ವಾ.? ಹೊರಗೆ ಓಡಾಡಬೇಡ. ಮಾಸ್ಕ್ ಹಾಕ್ಕೊ ಎಂದು ಸರಿಯಾಗಿ ಪಾಠ ಮಾಡಿ ಕಳಿಸಿದ್ದಾರೆ.

ಎಎಸ್‍ಐ ಹೊಡೆಸಿದ ಬಸ್ಕಿಗೆ ಕಂಗಾಲಾದ ಯುವಕ ಎದ್ನೋ ಬಿದ್ನೋ ಎಂದು ಬೈಕ್ ಏರಿ ಮನೆಯತ್ತ ಹೊರಟು ಹೋಗಿದ್ದಾನೆ.