Advertisements

ನಾಯಿ ವರ್ಕೌಟ್ ಮಾಡೋದನ್ನ ಎಲ್ಲಾದ್ರೂ ನೋಡಿದ್ದೀರಾ?- ಈ ವೈರಲ್ ವಿಡಿಯೋ ನೋಡಿ

ವಾಷಿಂಗ್ಟನ್: ಸಾಮಾನ್ಯವಾಗಿ ನಾಯಿಗಳು ಮಾಲೀಕರು ಹೇಳಿದಂತೆ ಕೈ ಮುಗಿಯೋದು, ಕೇಳಿದ ವಸ್ತುಗಳನ್ನ ತೆಗೆದುಕೊಡೋದು ಹೀಗೆ ಮುಂತಾದ ಕೆಲಸಗಳನ್ನ ಮಾಡೋದನ್ನ ನೋಡಿರ್ತೀರ. ಆದ್ರೆ ಎಲ್ಲಾದ್ರೂ ನಾಯಿ ವರ್ಕೌಟ್ ಮಾಡೋದನ್ನ ನೋಡಿದ್ದೀರಾ?

Advertisements

ಹಾಗಿದ್ರೆ ಇಲ್ನೋಡಿ. ಪೊಲೀಸ್ ನಾಯಿಯೊಂದು ಅಧಿಕಾರಿಗಳ ಜೊತೆಗೂಡಿ ಪುಶ್ ಅಪ್ಸ್ ಮಾಡಿದ್ದು, ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ. ಇಬ್ಬರು ಅಧಿಕಾರಿಗಳು ಪುಶ್ ಅಪ್ಸ್ ಮಾಡ್ತಿದ್ರೆ ನಾಯಿ ಕೂಡ ಅವರ ಮಧ್ಯೆ ಕುಳಿತು ಪುಶ್ ಅಪ್ಸ್ ಮಾಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗ ಸಖತ್ ಹಿಟ್ ಆಗಿದೆ.

Advertisements

ಸ್ಥಳೀಯ ಮಾಧ್ಯಮವೊಂದರ ವರದಿಯ ಪ್ರಕಾರ ಈ ನಾಯಿಯ ಹೆಸರು ನಿತ್ರೋ. 2 ವರ್ಷದ ಈ ಡಚ್ ಶೆಫರ್ಡ್ ನಾಯಿ ಇದೇ ವರ್ಷ ಅಲಬಾಮಾದ ಗಲ್ಫ್ ಶೋರ್ಸ್ ಪೊಲೀಸ್ ಇಲಾಖೆಯ ಶ್ವಾನದಳಕ್ಕೆ ಸೇರ್ಪಡೆಯಾಗಿದೆ.

ಅಧಿಕಾರಿ ಕೋವನ್ ಹಾಗೂ ಹ್ಯಾನ್‍ಕಾಕ್ ಅವರೊಂದಿಗೆ ಕೆ9 ನಿತ್ರೋ ಕೂಡ ಕಾನೂನು ಉಲ್ಲಂಘಿಸೋ ಕಿಡಿಗೇಡಿಗಳನ್ನ ಮಟ್ಟ ಹಾಕಲು ರೆಡಿಯಾಗ್ತಿದೆ ಅಂತ ಪೊಲೀಸ್ ಇಲಾಖೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿ ಈ ವಿಡಿಯೋವನ್ನ ಹಂಚಿಕೊಂಡಿದೆ.

Advertisements

ಭಾನುವಾರದಂದು ಈ ವಿಡಿಯೋವನ್ನ ಹಂಚಿಕೊಳ್ಳಲಾಗಿದ್ದು ಈವರೆಗೆ 9 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. 31 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ. ವಿಡಿಯೋ ನೋಡಿದವರು ನಾಯಿಯ ವರ್ಕೌಟ್ ಕಂಡು ಹುಬ್ಬೇರಿಸಿದ್ದಾರೆ. ಅಧಿಕಾರಿಗಳೇ ನೀವಿನ್ನೂ ಇಂಪ್ರೂವ್ ಆಗ್ಬೇಕು. ನಾಯಿ ಚಲಿಸುತ್ತಾ ಪುಶ್ ಅಪ್ಸ್ ಮಾಡ್ತಿರೋದು ಕಾಣ್ತಿಲ್ವಾ ಅಂತ ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.

Advertisements
Exit mobile version