Thursday, 14th November 2019

ಕಾರು ಚಾಲಕನನ್ನು 2 ದಿನ ಠಾಣೆಯಲ್ಲೇ ಕೂಡಿ ಹಾಕಿ ಹಲ್ಲೆಗೈದ ಪೊಲೀಸ್ ಪೇದೆ!

ಕಲಬುರಗಿ: ರೋಲ್ ಕಾಲ್ ಮಾಡುವದನ್ನು ಪ್ರಶ್ನಿಸಿದಕ್ಕೆ ಕಾರ್ ಚಾಲಕನನ್ನು ಪೇದೆಯೋರ್ವ ಅಮಾನವಿಯವಾಗಿ ಹಲ್ಲೆ ಮಾಡಿರುವ ಘಟನೆ ಕಲಬುರಗಿಯ ಮರತೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಕಳೆದ ಎರಡು ದಿನಗಳ ಹಿಂದೆ ಚಾಲಕ ಚಂದ್ರು ಮತ್ತು ಪೇದೆ ರವೀಂದ್ರ ಕುಮಾರ್ ನಡುವೆ ಈ ಜಗಳ ನಡೆದಿದೆ. ಘಟನೆಯ ನಂತರ ಯಾವುದೇ ದೂರು ಇಲ್ಲದೇ ಚಾಲಕನನ್ನು ಪೇದೆ ಹಾಗು ಆತನ ಸ್ನೇಹಿತರು ಎರಡು ದಿನಗಳ ಕಾಲ ಠಾಣೆಯಲ್ಲಿ ಕೂಡಿಸಿ ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ.

 ಆ ಬಳಿಕ ಚಾಲಕನ ಚಿಕ್ಕಪ್ಪನ ಅಂತ್ಯಸಂಸ್ಕಾರ ನಡೆಯುತ್ತಿದ್ದು, ಬಿಡುಗಡೆ ಮಾಡುವಂತೆ ಚಾಲಕನ ಚಿಕ್ಕಪ್ಪ ವಿಶ್ವವಿದ್ಯಾಲಯ ಪಿಎಸ್‍ಐ ಜಗನಾಥ್‍ಗೆ ಕರೆ ಮಾಡಿದ್ದಾರೆ. ಈ ವೇಳೆ ಪೇದೆ ಅವರಿಗೂ ಕೂಡ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಈ ವಿಷಯ ಗ್ರಾಮಸ್ಥರಿಗೆ ತಿಳಿಯುತ್ತಿದ್ದಂತೆಯೇ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ ಚಾಲಕನನ್ನು ಠಾಣೆಯಿಂದ ಬಿಡುಗಡೆ ಮಾಡಲಾಗಿದೆ.

ಸದ್ಯ ಪೊಲೀಸರ ಕೈಯಿಂದ ಬಿಡುಗಡೆಯಾದ ಚಂದ್ರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

Leave a Reply

Your email address will not be published. Required fields are marked *