Connect with us

Latest

ಗೆಳೆಯನನ್ನ ಭೇಟಿ ಮಾಡಬಹುದೇ ಎಂದ ಯುವಕ- ಪೊಲೀಸರು ಕೊಟ್ಟ ಉತ್ತರಕ್ಕೆ ನೆಟ್ಟಿಗರು ಫಿದಾ

Published

on

ನವದೆಹಲಿ: ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಭಾರತದಲ್ಲಿ ಹೆಚ್ಚಾಗುತ್ತಿರುವ ಕಾರಣ ಪ್ರಧಾನಿ ಮೋದಿ ಅವರು ಮಧ್ಯರಾತ್ರಿಯಿಂದಲೇ ಇಡೀ ಭಾರತವನ್ನು 21 ದಿನ ಲಾಕ್‍ಡೌನ್ ಮಾಡಿದ್ದಾರೆ. ಹೀಗಾಗಿ ಪೊಲೀಸರು ಸರ್ಕಾರದ ಆದೇಶದಂತೆ ರಸ್ತೆಯಲ್ಲಿ ಯಾರನ್ನೂ ಓಡಾಡಲು ಬಿಡುತ್ತಿಲ್ಲ. ಈ ಮಧ್ಯೆ ಯುವಕನೊಬ್ಬ ಕೇಳಿದ ಪ್ರಶ್ನೆಗೆ ಪೊಲೀಸರು ಕೊಟ್ಟ ಉತ್ತರಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಭಾರತ ಲಾಕ್‍ಡೌನ್ ಆದ ಪರಿಣಾಮ ಅನೇಕರು ದೆಹಲಿ ಪೊಲೀಸರಿಗೆ ಟ್ವೀಟ್ ಮಾಡುವ ಮೂಲಕ ಪ್ರಶ್ನೆ ಕೇಳುತ್ತಿದ್ದಾರೆ. ಪೊಲೀಸರು ಕೂಡ ಸಾರ್ವಜನಿಕರು ಕೇಳುವ ಪ್ರಶ್ನೆಗೆ ತಾಳ್ಮೆಯಿಂದಲೇ ಉತ್ತರ ಕೊಡುತ್ತಿದ್ದಾರೆ.

ಅದರಂತೆಯೇ ಯುವಕನೊಬ್ಬ “ಸರ್ ನನಗೆ ಸ್ವಲ್ಪ ಕೆಲಸವಿದೆ. ಹೀಗಾಗಿ ನಮ್ಮ ಮನೆಯಿಂದ 2 ಕಿ.ಮೀ ದೂರದಲ್ಲಿರುವ ನನ್ನ ಸ್ನೇಹಿತನನ್ನು ಭೇಟಿ ಮಾಡಲು ಮನೆಗೆ ಹೋಗಬಹುದೇ?” ಎಂದು ಪ್ರಶ್ನೆ ಕೇಳಿದ್ದಾನೆ. ಇದಕ್ಕೆ ದೆಹಲಿ ಪೊಲೀಸರು, “ನೀವು ನಿಜವಾದ ಸ್ನೇಹಿತರಾಗಿದ್ದರೆ ಮನೆಯಲ್ಲಿರಿ, ವಿಡಿಯೋ ಕಾಲ್ ಮೂಲಕ ಮಾತನಾಡಿ ಎಂದು” ಉತ್ತರಿಸಿದ್ದಾರೆ.

ಪೊಲೀಸರು ಯುವಕನಿಗೆ ಕೊಟ್ಟ ಉತ್ತರಕ್ಕೆ ನಟ್ಟಿಗರು ಫಿದಾ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಎಂಥಾ ಅದ್ಭುತ ಪ್ರತಿಕ್ರಿಯೆ, ಉತ್ತಮ, ಅತ್ಯುತ್ತಮ ಸಲಹೆ ಎಂದು ಅನೇಕ ಮಂದಿ ರಿಪ್ಲೈ ಮಾಡುವ ಮೂಲಕ ದೆಹಲಿ ಪೊಲೀಸರಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.