Saturday, 22nd February 2020

Recent News

ಸೆಕ್ಸ್‌ಗೆ ಪತಿ ಒತ್ತಾಯ- ಅಪ್ರಾಪ್ತೆಯನ್ನ ವೇಶ್ಯಾವಾಟಿಕೆಗೆ ತಳ್ಳಿದ ತಾಯಿ

-ಸಹಾಯ ಕೇಳಿದ್ರೆ ಸೋದರನೂ ರೇಪ್

ಮುಂಬೈ: ಅಪ್ರಾಪ್ತೆ ಮೇಲೆ ಅತ್ಯಾಚಾರ ಮತ್ತು ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಿದ ಆರೋಪದಡಿ ಆಕೆಯ ತಾಯಿ, ಸಹೋದರ ಮತ್ತು ಪತಿ ಸೇರಿದಂತೆ ಐದು ಜನರನ್ನು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಸಂತ್ರಸ್ತೆ ಅಪ್ರಾಪ್ತ ವಯಸ್ಸಿನವಳಾಗಿದ್ದರೂ ಆಕೆಯ ತಾಯಿ ಏಪ್ರಿಲ್‍ 2018ರಲ್ಲಿ ಬಲವಂತವಾಗಿ ಮದುವೆ ಮಾಡಿಸಿದ್ದಳು. ಮದುವೆ ನಂತರ ಪತಿ ಆಕೆಯನ್ನು ಸೆಕ್ಸ್‌ಗೆ ಒತ್ತಾಯಿಸುತ್ತಿದ್ದನು. ಇದಕ್ಕೆ ಒಪ್ಪದ್ದಕ್ಕೆ ಮನಬಂದಂತೆ ಅಪ್ರಾಪ್ತೆಗೆ ಥಳಿಸುತ್ತಿದ್ದನು. ಇದನ್ನು ಸಹಿಸಲಾಗದೇ ಆಕೆ ಮುಂಬೈನ ಮಾನ್‍ಖುರ್ಡ್ ನಲ್ಲಿರುವ ತಾಯಿಯ ಮನೆಗೆ ಹೋಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲವು ತಿಂಗಳುಗಳ ನಂತರ ಆಕೆಯ ತಾಯಿ ವೇಶ್ಯಾವಾಟಿಕೆಗೆ ತಳ್ಳಿದ್ದಾಳೆ. ಅಲ್ಲಿ ದಲ್ಲಾಳಿ ಹಣಕ್ಕಾಗಿ 60 ವರ್ಷದ ವ್ಯಕ್ತಿಯೊಂದಿಗೆ ದೈಹಿಕ ಸಂಬಂಧವನ್ನು ಬೆಳೆಸುವಂತೆ ಒತ್ತಾಯಿಸಿದ್ದಾನೆ. ಅಷ್ಟೇ ಅಲ್ಲದೇ ದಲ್ಲಾಳಿ ಮತ್ತು ಆಕೆಯ ಪತಿ ಕೂಡ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂತ್ರಸ್ತೆ ಕೊನೆಗೆ ತನ್ನ ಸಹೋದರನ ಸಹಾಯ ಕೇಳಿದ್ದಾಳೆ. ಆದರೆ ಆತನೂ ಕೂಡ ಅತ್ಯಾಚಾರ ಎಸಗಿದ್ದಾನೆ. ಜೊತೆಗೆ ಕತ್ತಿಯನ್ನು ತೋರಿಸಿ ಯಾರಿಗಾದರೂ ಈ ವಿಚಾರವನ್ನು ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ. ದಿಕ್ಕುತೋಚದ ಸಂತ್ರಸ್ತೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾಳೆ.

ಸದ್ಯಕ್ಕೆ ಪೊಲೀಸರು ಐಪಿಸಿ ಸೆಕ್ಷನ್ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ. ಈಗ 60 ವರ್ಷದ ವೃದ್ಧನಿಗಾಗಿ ಹುಡುಕಾಟ ಶುರು ಮಾಡಿದ್ದಾರೆ.

Leave a Reply

Your email address will not be published. Required fields are marked *