Connect with us

Bengaluru City

ನಟ ವಿನೋದ್ ರಾಜ್ ಹಣ ಕದ್ದಿದ್ದ ಖದೀಮರ ಗ್ಯಾಂಗ್ ಅಂದರ್

Published

on

ಬೆಂಗಳೂರು: ನೆಲಮಂಗಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದರೋಡೆ ಮಾಡುತ್ತಿದ್ದ ದರೋಡೆಕೋರರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನೆಲಮಂಗಲ ಪಟ್ಟಣ ಪೊಲೀಸರು ಕಾರ್ಯಚರಣೆ ನಡೆಸಿ, ಬೇರೆಡೆ ಗಮನ ಸೆಳೆದು ಲಕ್ಷಾಂತರ ಹಣ ದೋಚುತ್ತಿದ್ದ ಖದೀಮರನ್ನು ಬಂಧಿಸಿದ್ದಾರೆ. ಆಂಧ್ರ ಮೂಲದ ಜಪಾನಿಯಾ, ಅರ್ಜುನ್, ರಾಕೇಶ್, ಸುನೀಲ್, ರಾಕೇಶ್, ವಿಜಯ ಕುಮಾರ್ ಮತ್ತು ಭಾಸ್ಕರ್ ಬಂಧಿತ ಆರೋಪಿಗಳು. ಇನ್ನೂ ಮೂರು ಮಂದಿ ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಬಂಧಿತ ಖದೀಮರು ಬ್ಯಾಂಕ್ ಗಳಿಂದ ಹಣ ಡ್ರಾ ಮಾಡಿಕೊಂಡು ಬರುವವರನ್ನ ಟಾರ್ಗೆಟ್ ಮಾಡುತ್ತಿದ್ದರು. ಬಳಿಕ ಅವರ ಗಮನವನ್ನು ಬೇರೆಡೆ ಸೆಳೆದು ಹಣ ದೋಚಿ ಪರಾರಿಯಾಗುತ್ತಿದ್ದರು. ಕೆಲವು ತಿಂಗಳ ಹಿಂದೆ ನಟ ವಿನೋದ್ ರಾಜ್ ಅವರ ಬಳಿಯೂ ಇದೇ ರೀತಿ ಅಭಿಮಾನಿ ಎಂದು ಸುಳ್ಳು ಹೇಳಿ ಒಂದು ಲಕ್ಷ ಹಣವನ್ನು ದೋಚಿ ಪರಾರಿಯಾಗಿದ್ದರು. ಈಗ ನೆಲಮಂಗಲ ಪೊಲೀಸರು ಬಲೆ ಬೀಸಿ ಖದೀಮರನ್ನು ಬಂಧಿಸಿದ್ದಾರೆ.

ಬಂಧಿತರಿಂದ ಪೊಲೀಸರು ಒಟ್ಟು 8 ಲಕ್ಷ ರೂ. ಹಣ ಮತ್ತು 3 ಬೈಕ್ ಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಇದರಲ್ಲಿ ನಟ ವಿನೋದ್ ರಾಜ್ ಗೆ ಸೇರಿದ ಒಂದು ಲಕ್ಷ ಹಣ ಕೂಡ ಇದೆ. ಇತ್ತೀಚೆಗೆ ಹಾಡಹಗಲೇ ಕಾರಿನ ಗ್ಲಾಸ್ ಒಡೆದು 10 ಲಕ್ಷ ರೂ. ದೋಚಿದ್ದರು. ಇವರ ಸರಣಿ ದರೋಡೆ ಪ್ರಕರಣಗಳಿಂದ ನೆಲಮಂಗಲ ಜನತೆ ಬೆಚ್ಚಿಬಿದ್ದಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv